Khanapur

ಬಲೋಗಾ ಗ್ರಾಮದಲ್ಲಿ ಧಾರ್ಮಿಕ ಉತ್ಸವ: ಪಾರಾಯಣದಲ್ಲಿ ಭಕ್ತಿಭಾವದಿಂದ ಪಾಲ್ಗೊಂಡ ಶಾಸಕ ವಿಠ್ಠಲ ಹಲಗೇಕರ

Share

ಖಾನಾಪುರ ತಾಲೂಕಿನ ಬಲೋಗಾ ಗ್ರಾಮದಲ್ಲಿ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಯೋಜಿಸಲಾಗಿದ್ದ ಪವಿತ್ರ ಪಾರಾಯಣ ಸಮಾರಂಭದಲ್ಲಿ ಖಾನಾಪುರ ಕ್ಷೇತ್ರದ ಜನಪ್ರಿಯ ಶಾಸಕರಾದ ವಿಠ್ಠಲ ಹಲಗೇಕರ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ದೇವರಿಗೆ ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ನೆರೆದಿದ್ದ ಭಕ್ತ ಸಮೂಹದೊಂದಿಗೆ ಸೌಹಾರ್ದಯುತವಾಗಿ ಸಂವಾದ ನಡೆಸಿದ ಅವರು, ಇಂತಹ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಮೌಲ್ಯಗಳನ್ನು ಹೆಚ್ಚಿಸುವುದಲ್ಲದೆ, ಜನರ ನಡುವೆ ಭಕ್ತಿ, ಸಂಸ್ಕಾರ ಮತ್ತು ಐಕ್ಯತೆಯ ಭಾವನೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಪಾರಾಯಣ ಸಮಿತಿಯ ಪದಾಧಿಕಾರಿಗಳು, ಗ್ರಾಮದ ಹಿರಿಯರು ಹಾಗೂ ಹತ್ತಾರು ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದು ಆಧ್ಯಾತ್ಮಿಕ ವಾತಾವರಣದ ಅನುಭವ ಪಡೆದರು.

ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ

Tags:

error: Content is protected !!