Khanapur

ಹೆಬ್ಬಾಳ ಬಳಿ ಅಪಘಾತ: ಗಾಯಾಳು ಯುವಕನ ನೆರವಿಗೆ ಧಾವಿಸಿದ ಮಾಜಿ ಶಾಸಕ ಅರವಿಂದ್ ಪಾಟೀಲ್

Share

ದ್ವಿಚಕ್ರ ವಾಹನ ಜಾರಿ ಅಪಘಾತಕ್ಕೀಡಾದ ನಂದಗಡದ ಯುವಕನಿಗೆ ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ್ ಪಾಟೀಲ್ ತಕ್ಷಣವೇ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ. ಖಾನಾಪೂರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ಅವರು, ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಸೇರಿಸಲು ನೆರವಾಗಿದ್ದಾರೆ.

ಖಾನಾಪೂರ ತಾಲೂಕಿನ ನಂದಗಡ ಗ್ರಾಮದ ಯುವಕ ಜ್ಞಾನೇಶ್ವರ ಸಂದೀಪ್ ನಾಯಕ್ ಎಂಬುವವರು ಹೆಬ್ಬಾಳ ಸಮೀಪ ದ್ವಿಚಕ್ರ ವಾಹನ ಜಾರಿ ಬಿದ್ದು ತೀವ್ರ ಅಪಘಾತಕ್ಕೀಡಾಗಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ವಿಳಂಬ ಮಾಡದೇ ಸ್ಥಳಕ್ಕೆ ಧಾವಿಸಿದ ಮಾಜಿ ಶಾಸಕ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ್ ಪಾಟೀಲರು, ಗಾಯಾಳು ಯುವಕನನ್ನು ತಕ್ಷಣವೇ ಖಾನಾಪೂರ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದರು. ಬಳಿಕ ಯುವಕನಿಗೆ ಹೆಚ್ಚಿನ ವೈದ್ಯಕೀಯ ಆರೈಕೆಯ ಅಗತ್ಯವಿದ್ದಿದ್ದರಿಂದ, ತಕ್ಷಣವೇ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲು ವೈಯಕ್ತಿಕವಾಗಿ ಮುನ್ನೆಂತು ಸಹಕರಿಸಿದರು. ಅಪಘಾತದ ತುರ್ತು ಸಮಯದಲ್ಲಿ ಮಾಜಿ ಶಾಸಕರು ತೋರಿದ ಈ ಸಮಯೋಚಿತ ಮಾನವೀಯ ಸ್ಪಂದನೆಗೆ ಸಾರ್ವಜನಿಕ ವಲಯದಲ್ಲಿ ಹಾಗೂ ಯುವಕನ ಕುಟುಂಬಸ್ಥರಿಂದ ತೀವ್ರ ಶ್ಲಾಘನೆ ವ್ಯಕ್ತವಾಗಿದೆ.

Tags:

error: Content is protected !!