ಮರಾಠಿ ಮತ್ತು ಕನ್ನಡ ಭಾಷೆಗಳು ಸಹೋದರಿಯರು.ಮಹಾರಾಷ್ಟ್ರ ಕರ್ನಾಟಕ ನೆರೆಯ ಸಹೋದರ ರಾಜ್ಯಗಳುನಮ್ಮಿಬ್ಬರಿಗೂ ಒಬ್ಬರ ಮೇಲೆ ಒಬ್ಬರಿಗೆ ಸಂಪೂರ್ಣ ಗೌರವವಿದೆ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್, ರಾಹುಲ್ ಗಾಂಧಿ ಕೆಂಪು ಬಣ್ಣದ ಸಂವಿಧಾನ ಹಿಡಿದು ಓಡಾಡುತ್ತಿದ್ದಾರೆ, ಆದರೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಪುಸ್ತಕ ನೀಲಿ ಬಣ್ಣದ್ದಾಗಿದೆ ಎಂದು ಹೇಳಿದ ಅವರು, ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಹಿಂದಕ್ಕೆ ತಳ್ಳಿದ ಘಟನೆ ಉಲ್ಲೇಖಿಸಿ ಸಂವಿಧಾನಕ್ಕೆ ರಾಹುಲ್ ಗಾಂಧಿ ನೀಡುತ್ತಿರುವ ಗೌರವವನ್ನು ಪ್ರಶ್ನಿಸಿದರು.

ಬೆಳಗಾವಿಯ ಧರ್ಮನಾಥ ಭವನದಲ್ಲಿ ಬಿಜೆಪಿ ಆಯೋಜಿಸಿದ್ದ ‘ಪ್ರಜಾಪ್ರಭುತ್ವ ಉಳಿಸಿ ಅರಾಜಕತೆ ತೊಲಗಿಸಿ’ ಸಮಾವೇಶದಲ್ಲಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಭಾಗವಹಿಸಿದರು. ಸುಮಾರು ಸಾವಿರ ಪ್ರಬುದ್ಧರ ಜೊತೆ ಸಂವಾದ ನಡೆಸಿದ ಅವರು, ಕನ್ನಡದಲ್ಲೇ ಭಾಷಣ ಆರಂಭಿಸಿ ಗಮನ ಸೆಳೆದರು.

ಕನ್ನಡದಲ್ಲಿ ಭಾಷಣ ಆರಂಭಿಸಿದ ದೇವೇಂದ್ರ ಫಡ್ನವಿಸ್, ಮರಾಠಿ ಮತ್ತು ಕನ್ನಡ ಭಾಷೆಗಳು ಸಹೋದರಿಯರಿದ್ದಂತೆ ಹಾಗೂ ಮಹಾರಾಷ್ಟ್ರ-ಕರ್ನಾಟಕ ನೆರೆಯ ಸಹೋದರ ರಾಜ್ಯಗಳಾಗಿದ್ದು ಪರಸ್ಪರ ಗೌರವವಿದೆ ಎಂದು ಹೇಳಿದರು. ದೇಶದಲ್ಲಿ ಸಂಘಟಿತ ನ್ಯಾರೇಟಿವ್ ಹೋರಾಟ ನಡೆಯುತ್ತಿದ್ದು, ಬಾಂಗ್ಲಾ, ನೇಪಾಳ, ಪಾಕಿಸ್ತಾನದಂತೆ ವ್ಯವಸ್ಥೆ ಬದಲಿಸಲು ಹುನ್ನಾರ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಇದರಲ್ಲಿ ಸ್ಥಳೀಯ ರಾಜಕಾರಣ, ಸಂಘಟನೆಗಳು ಮತ್ತು ಸಾಮಾಜಿಕ ಜಾಲತಾಣಗಳ ದುರುಪಯೋಗವಾಗುತ್ತಿದೆ ಎಂದ ಅವರು, ರಾಹುಲ್ ಗಾಂಧಿ ಪ್ರತಿದಿನ ಸುಳ್ಳು ಹೇಳುತ್ತಾ ಅದನ್ನೇ ಸತ್ಯವೆಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಪ್ರಧಾನಿ ನರೇಂದ್ರ ಮೋದಿ ನಾಯಕತ್ವವು ಅನ್ಯ ದೇಶಗಳು ಮತ್ತು ವಿಶ್ವದ ಮಾಲೀಕರೆಂದುಕೊಳ್ಳುವವರಲ್ಲಿ ಭಯ ಹುಟ್ಟಿಸಿದೆ ಎಂದು ಫಡ್ನವಿಸ್ ತಿಳಿಸಿದರು. ವಿಶ್ವಬ್ಯಾಂಕ್ ಕೂಡ ಶೇ. 50ರಷ್ಟು ಬಡತನ ನಿವಾರಣೆಯಾಗಿದೆ ಎಂದು ಹೇಳುತ್ತಿದ್ದು, ಮೋದಿ ನಾಯಕತ್ವದಲ್ಲಿ ಭಾರತ ಬಲಿಷ್ಠ ರಾಷ್ಟ್ರಗಳ ಸಾಲಿನಲ್ಲಿ ಮೂರನೇ ಸ್ಥಾನಕ್ಕೇರಿದೆ ಹಾಗೂ 2047ರೊಳಗೆ ವಿಕಸಿತ ರಾಷ್ಟ್ರವಾಗಲಿದೆ ಎಂದರು. ರಾಹುಲ್ ಗಾಂಧಿ ಕೆಂಪು ಬಣ್ಣದ ಸಂವಿಧಾನ ಹಿಡಿದು ಓಡಾಡುತ್ತಿದ್ದಾರೆ, ಆದರೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಪುಸ್ತಕ ನೀಲಿ ಬಣ್ಣದ್ದಾಗಿದೆ ಎಂದು ಹೇಳಿದ ಅವರು, ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಹಿಂದಕ್ಕೆ ತಳ್ಳಿದ ಘಟನೆ ಉಲ್ಲೇಖಿಸಿ ಸಂವಿಧಾನಕ್ಕೆ ರಾಹುಲ್ ಗಾಂಧಿ ನೀಡುತ್ತಿರುವ ಗೌರವವನ್ನು ಪ್ರಶ್ನಿಸಿದರು.

ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಬಿಜೆಪಿ ಗೆದ್ದಾಗ ಮತಯಂತ್ರ (EVM) ಹ್ಯಾಕ್ ಆಗಿದೆ ಎನ್ನುವ ಕಾಂಗ್ರೆಸ್, ಕರ್ನಾಟಕದಲ್ಲಿ ಗೆದ್ದಾಗ ಮಾತ್ರ ಮಷಿನ್ ಓಕೆ ಎನ್ನುತ್ತದೆ ಎಂದು ಫಡ್ನವಿಸ್ ವ್ಯಂಗ್ಯವಾಡಿದರು. ತೆಲಂಗಾಣದಲ್ಲೂ ಕಾಂಗ್ರೆಸ್ ಗೆದ್ದಾಗ ಮತಯಂತ್ರದ ಬಗ್ಗೆ ಅಪಸ್ವರ ಎತ್ತುತ್ತದೆ ಎಂದರು. ಪ್ರಸ್ತುತ ನಡೆಯುತ್ತಿರುವ SIR ವಿಚಾರವಾಗಿ ಕಾಂಗ್ರೆಸ್ ಅಪ್ರಚಾರ ನಡೆಸುತ್ತಿದೆ ಎಂದ ಅವರು, ಕಾಂಗ್ರೆಸ್ ಆಡಳಿತದಲ್ಲಿ 8 ಬಾರಿ SIR ನಡೆದಿದೆ ಹಾಗೂ ಚುನಾವಣಾ ಆಯೋಗ ಬಿಜೆಪಿಗೆ ನೆರವಾಗಿದ್ದರೆ ಕೇರಳದಲ್ಲಿ ಕಾಂಗ್ರೆಸ್ ಹೇಗೆ ಗೆದ್ದಿತು ಎಂದು ಪ್ರಶ್ನಿಸಿದರು.

ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಅವರು, ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಕೆಲಸ ನಡೆಯುತ್ತಿದ್ದು, ಈ ಅರಾಜಕತೆಯ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು. ಕೆಲವು ನಾಯಕರು ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ವಿರೋಧ ಪಕ್ಷದ ವಿರುದ್ಧ ಕಿಡಿಕಾರಿದ ಅವರು, ದೇಶದ ಪ್ರಜಾಪ್ರಭುತ್ವವನ್ನು ಕಾಪಾಡಬೇಕಿದೆ ಎಂದರು. ಪ್ರಜಾಪ್ರಭುತ್ವವು ಸಂವಿಧಾನದ ಆತ್ಮವಾಗಿದ್ದು, ಅದನ್ನು ರಕ್ಷಿಸುವ ಮಹತ್ವದ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದು ಅಶ್ವಥ್ ನಾರಾಯಣ ಕರೆ ನೀಡಿದರು..
ಕಾರ್ಯಕ್ರಮದಲ್ಲಿ ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಡಾ.ಅಶ್ವಥ ನಾರಾಯಣ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ, ಮಾಜಿ ಶಾಸಕ ಸಂಜಯ ಪಾಟೀಲ್ ಸೇರಿದಂತೆ ಇನ್ನುಳಿದವರು ಭಾಗಿದ್ಧರು.
