Hukkeri

ಹುಕ್ಕೇರಿ : ಸಂಕೇಶ್ವರ ನಗರದಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ : ಅದ್ಯಕ್ಷ ಗಣೇಶ ಪಾಟೀಲ

Share

ಸಂಕೇಶ್ವರ ನಗರದಲ್ಲಿ ರಾಜ್ಯೋತ್ಸವ ಸಮಿತಿ ಅದ್ಯಕ್ಷ ಗಣೇಶ ಪಾಟೀಲ ನೇತೃತ್ವದಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಬೆಳಗಿನ ಜಾವ ನಗರದ ಗಾಂಧಿ ವೃತ್ತದಲ್ಲಿ ನಿಡಸೋಸಿ ದುರದುಂಡಿಶ್ವರ ಮಠದ ಶಿವಲಿಂಗೇಶ್ವರ ಮಹಾಸ್ವಾಮಿಗಳ ಮತ್ತು ಶಂಕರಲಿಂಗ ಮಠದ ವಿದ್ಯಾ ನರಸಿಂಹ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ವೀರಶೈವ ಲಿಂಗಾಯತ ಸಮಾಜದ ಅದ್ಯಕ್ಷ ಅಪ್ಪಾಸಾಹೇಬ ಶಿರಕೊಳಿ ಕನ್ನಡ ದ್ವಜಾರೋಹಣ ನೆರವೇರಿಸಿದರು. ಸವಿತಾ ಸಾವಂತ ಮತ್ತು ಯಾಹ್ಯಾಖಾನ ನದಾಫ ,ಜಯಪ್ರಕಾಶ ಕರಜಗಿ, ಸುನಿಲ ಪರ್ವತರಾವ,ರಾಜು ಬೋರಗಾಂವಿ, ಶ್ರಿಕಾಂತ ಹತನೂರಿ, ಡಾ, ಮಂದಾರ ಹಾವಳ, ನಿಖಿಲ್ ಗಂಗರೆಡ್ಡಿ,ಸಂತೋಷ ಹಿರೇಮಠ, ಮಹೇಶ ಹಟ್ಟಿಹೋಳಿ ರವರ ನೇತೃತ್ವದಲ್ಲಿ ರೂಪಕಗಳ ಮೇರವಣೆಗೆ ಚಾಲನೆ ನೀಡಲಾಯಿತು.

ವಿವಿಧ ಶಾಲಾ ವಿದ್ಯಾರ್ಥಿಗಳು ನಾಡಿನ ಸಂಸ್ಕೃತ ಬಿಂಬಿಸುವ ವೇಷ ಭೂಷಣಗಳ ರೂಪಕ ಮತ್ತು ಸ್ತಬ್ದ ಚಿತ್ರಗಳು ನೋಡುಗರ ಗಮನಸೆಳೆದವು.
ಶಾಸಕ ನಿಖಿಲ್ ಕತ್ತಿ ಮತ್ತು ವಿದ್ಯುತ್ ಸಹಕಾರಿ ಸಂಘದ ನಿರ್ದೆಶಕ ವಿನಯ ಪಾಟೀಲ ಭುವನೇಶ್ವರಿ ಮೂರ್ತಿಗೆ ಪೂಜೆ ಸಲ್ಲಿಸಿ ಉತ್ಸವದಲ್ಲಿ ಪಾಲ್ಗೊಂಡರು.
ಮೇರವಣೆಗೆಯು ನಗರದ ಪ್ರಮುಖ ಬಿದಿಗಳಲ್ಲಿ ಸಂಚರಿಸಿ ಸಾಯಂಕಾಲ ಸಭೆಯಾಗಿ ಮಾರ್ಪಟ್ಟಿತು.

ರಾಜ್ಯೋತ್ಸವ ಸಮಿತಿ ವತಿಯಿಂದ ಸಾಹಿತಿ ವಿ ಎಸ್ ಮಾಳಿ,ಪೋಲಿಸ್ ಇನ್ಸಪೇಕ್ಟರ ಗಣಪತಿ ಕೊಗನೋಳ್ಳಿ, ಮುಖ್ಯಾಧಿಕಾರಿ ಪ್ರಕಾಶ ಮಠದ ,ಬಿ ಇ ಓ ರೇವತಿ ಮಠದ ಹಾಗೂ ಡಾ, ಪೂರ್ಣಿಮಾ ತಲ್ಲೂರ ಇವರಿಗೆ ಸತ್ಕರಿಸಿ ಅಭಿನಂದಿಸಲಾಯಿತು.
ಮಾದ್ಯಮಗಳೊಂದಿಗೆ ಮಾತನಾಡಿದ ನ್ಯಾಯವಾದಿ ವಿಕ್ರಮ ಕರನಿಂಗ ಮತ್ತು ದೀಲಿಪ ಹೋಸಮನಿ ಗಡಿ ಭಾಗದ ಸಂಕೇಶ್ವರ ನಗರದಲ್ಲಿ ಕನ್ನಡ ರಾಜ್ಯೋತ್ಸವ ವನ್ನು ಎಲ್ಲ ಸಮೂದಾಯದವರು ಅರ್ಥಪೂರ್ಣ ವಾಗಿ ಆಚರಿಸಲಾಗುತ್ತಿದೆ,ಬೆಳಗಾವಿ ನಗರ ಬಿಟ್ಟರೆ ಎರಡನೆಯ ಅತಿ ಹೇಚ್ಚು ಜನರಿಂದ ಆಚರಿಸಲ್ಪಡುವ ಕನ್ನಡಿಗರ ಹಬ್ಬವಾಗಿದೆ ಎಂದರು

ಈ ಸಂದರ್ಭದಲ್ಲಿ ರಾಜ್ಯೋತ್ಸವ ಸಮಿತಿ ಅದ್ಯಕ್ಷ ಗಣೇಶ ಪಾಟೀಲ, ಉಪಾಧ್ಯಕ್ಷ ಶಂಕರ ಭೋಸಲೆ, ಪ್ರಧಾನ ಕಾರ್ಯದರ್ಶಿ ಸಂತೋಷ ಪಾಟೀಲ, ಕಾರ್ಯದರ್ಶಿ ಚೇತನ ಚೌಗಲಾ, ಖಜಾಂಚಿ ಅವಿನಾಶ ಚವ್ಹಾನ , ಮುಖಂಡರಾದ ರೋಹನ ನೇಸರಿ, ಶಿವಾನಂದ ಮುಡಸಿ, ಬಂಡೂ ಹತನೂರಿ, ಅಮರ ನಲವಡೆ ಅವಿನಾಶ ನಲವಡೆ ಹಾಗೂ ಸರ್ವ ಸದಸ್ಯರು , ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.

ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.

Tags:

error: Content is protected !!