Belagavi

73ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಬೆಳಗಾವಿ ಶ್ರೀ ಬಸವೇಶ್ವರ ಕೋ- ಆಪರೇಟಿವ್ ಬ್ಯಾಂಕಿನಲ್ಲಿ ಸಹಕಾರ ಧ್ವಜಾರೋಹಣ ಕಾರ್ಯಕ್ರಮ

Share

73ನೇ ಅಖಿಲ ಭಾರತ ಸಹಕಾರ ಸಪ್ತಾಹದ ಶುಭ ಸಂದರ್ಭದಲ್ಲಿ, ಬೆಳಗಾವಿಯ ರವಿವಾರ ಪೇಟೆಯಲ್ಲಿರುವ ಬೆಳಗಾವಿ ಶ್ರೀ ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕಿನ ಆಡಳಿತ ಕಚೇರಿಯ ಆವರಣದಲ್ಲಿ ಸಪ್ತವರ್ಣದ ಸಹಕಾರ ಧ್ವಜಾರೋಹಣವನ್ನು ಅತ್ಯಂತ ಸಂಭ್ರಮ ಮತ್ತು ಗೌರವಪೂರ್ವಕವಾಗಿ ನೆರವೇರಿಸಲಾಯಿತು.

ಈ ವಿಶೇಷ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷರಾದ ಸರಳಾ ಶಿವಾನಂದ ಹೇರೇಕರ ಅವರು, “ನಮ್ಮ ಬ್ಯಾಂಕು ಮೊದಲಿನಿಂದಲೂ ಸಹಕಾರ ತತ್ವಗಳ ಭದ್ರ ಬುನಾದಿಯ ಮೇಲೆ ನಿಂತಿದೆ. ‘ಬಿನಾ ಸಹಕಾರ ನಹಿ ಉದ್ಧಾರಃ’ ಎಂಬ ಉಕ್ತಿಯಂತೆ, ಪರಸ್ಪರ ನಂಬಿಕೆ, ಪಾರದರ್ಶಕತೆ ಮತ್ತು ಸದಸ್ಯರ ಆರ್ಥಿಕ ಸಬಲೀಕರಣವೇ ನಮ್ಮ ಬ್ಯಾಂಕಿನ ಮೂಲಮಂತ್ರವಾಗಿದೆ. ಸಮಾಜದ ಹಿಂದುಳಿದ ವರ್ಗಗಳಿಗೆ ಆರ್ಥಿಕ ನೆರವು ನೀಡಿ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರಿ ಸಂಸ್ಥೆಗಳು ಆಶಾಕಿರಣವಾಗಿ ಕೆಲಸ ಮಾಡುತ್ತಿವೆ. ಸದಸ್ಯರ ಮತ್ತು ಗ್ರಾಹಕರ ಹಿತರಕ್ಷಣೆ ಮತ್ತು ಪ್ರಾಮಾಣಿಕ ಸೇವೆಯ ಮೂಲಕ ಬ್ಯಾಂಕು ಮತ್ತಷ್ಟು ಎತ್ತರಕ್ಕೆ ಬೆಳೆಯಲಿದೆ” ಎಂದು ಅಭಿಪ್ರಾಯಪಟ್ಟರು.
ಈ ಈ ಕಾರ್ಯಕ್ರಮದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಸಚಿನ ಶಿವಣ್ಣವರ, ನಿರ್ದೇಶಕರುಗಳಾದ ರಮೇಶ ಕಳಸಣ್ಣವರ, ಬಸವರಾಜ ಉಪ್ಪಿನ, ಗಿರೀಶ ಬಾಗಿ, ಸತೀಶ ಪಾಟೀಲ, ಜಗದೀಶ ಖಡಬಡಿ, ನಿಖಿಲ ಝೋಂಡ, ದಯಾನಂದ ಬಾಳೇಕುಂದ್ರಿ, ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳಾದ ರಾಜಶೇಖರ ಚೊಣ್ಣದ, ಸೋಮಶೇಖರ ಹೊಂಬಳ, ಮಹೇಶ ಉಡದಾರ ಹಾಗೂ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ವಿಶಾಲಕುಮಾರ ಅಂಟಿನ, ಪ್ರಭಾರ ಉಪ ಪ್ರಧಾನ ವ್ಯವಸ್ಥಾಪಕರಾದ ಕಾವೇರಿ ಬಣಗಾರ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Tags:

error: Content is protected !!