ಹಿಂದೂ ಧರ್ಮದ ಪ್ರಮುಖ ಹಬ್ಬವಾದ ದೀಪಾವಳಿ ಸಂಭ್ರಮದ ಹಿನ್ನೆಲೆಯಲ್ಲಿ, ಬೆಳಗಾವಿಯಲ್ಲಿ ಸಂಪ್ರದಾಯ ಹಾಗೂ ಸಮಾಜಮುಖಿ ಚಿಂತನೆಯ ವಿಶೇಷ ಉಪಕ್ರಮವೊಂದು ಜರುಗಿದೆ. ಬಿಜೆಪಿ ಮುಖಂಡ ಧನಂಜಯ ಜಾಧವ್ ಅವರ ನೇತೃತ್ವದಲ್ಲಿ ಬೆಳಗಾವಿ ನಗರ ಮತ್ತು ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಬರೋಬ್ಬರಿ 25 ಸಾವಿರ ಸುಗಂಧಯುಕ್ತ ಉಟಣಿಯ ಪ್ಯಾಕೆಟ್ಗಳನ್ನು ವಿತರಿಸಲಾಯಿತು.

ದೀಪಾವಳಿಯ ಶುಭ ಸಂದರ್ಭದಲ್ಲಿ ಆಚರಿಸಲಾಗುವ ಅಭ್ಯಂಗ ಸ್ನಾನಕ್ಕೆ ಸಾಂಸ್ಕೃತಿಕ ಹಾಗೂ ಧಾರ್ಮಿಕವಾಗಿ ಅತ್ಯಂತ ಮಹತ್ವದ ಸ್ಥಾನವಿದೆ. ಈ ಪವಿತ್ರ ಆಚರಣೆಯಲ್ಲಿ ಬಳಸಲಾಗುವ ಸುಗಂಧಯುಕ್ತ ಉಟ್ಣ ಪ್ರತಿಯೊಂದು ಮನೆಯನ್ನೂ ತಲುಪಬೇಕು ಮತ್ತು ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗಬೇಕು ಎಂಬ ಉದ್ದೇಶದಿಂದ ಧನಂಜಯ ಜಾಧವ್ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಬೆಳಗಾವಿ ಮಹಾನಗರ ಹಾಗೂ ಗ್ರಾಮೀಣ ಭಾಗದ ಸಾರ್ವಜನಿಕರಿಗೆ 25,000 ಸುಗಂಧಯುಕ್ತ ಉಟ್ಣದ ಪ್ಯಾಕೆಟ್ಗಳನ್ನು ಉಚಿತವಾಗಿ ತಲುಪಿಸುವ ಮೂಲಕ ಹಬ್ಬದ ಸಂತೋಷವನ್ನು ಹಂಚಿಕೊಳ್ಳಲಾಯಿತು.

ಸಮಾಜದ ಪ್ರತಿಯೊಂದು ವರ್ಗದ ಜನರೂ ದೀಪಾವಳಿಯ ಸಡಗರದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕು ಎಂಬ ಸದುದ್ದೇಶದಿಂದ ಈ ಸಮಾಜಮುಖಿ ಕಾರ್ಯ ಕೈಗೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಹಬ್ಬದ ಮೂಲ ಸಾರವೇ ಪ್ರೀತಿ, ವಿಶ್ವಾಸ ಹಾಗೂ ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದಾಗಿದ್ದು, ಈ ಉಟಣಿ ವಿತರಣಾ ಉಪಕ್ರಮವು ಸ್ಥಳೀಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಇದೇ ವೇಳೆ ಸಮಸ್ತ ನಾಗರಿಕರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಲಾಯಿತು.

