ರಾಜ್ಯದಲ್ಲಿ ಬರಗಾಲದಿಂದ ಕಂಗಾಲಾಗಿರುವ ರೈತರಿಗೆ ಇದೀಗ ಟೋಲ್ ಸುಂಕದ ಬಿಸಿ ತಟ್ಟಿದೆ. ಕಬ್ಬು ಸಾಗಿಸುವ ವಾಹನಗಳಿಂದ ಭಾರೀ ಟೋಲ್ ವಸೂಲಿ ಮಾಡುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಟ್ಟುನಿಟ್ಟಿನ ಹೋರಾಟಕ್ಕೆ ಮುಂದಾಗಿದ್ದು, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಟೋಲ್ ನಾಕಾಗಳಲ್ಲಿ ಕಬ್ಬು ಸಾಗಾಣಿಕೆ ಮಾಡುವ ವಾಹನಗಳಿಗೆ ಅತಿಯಾದ ಸುಂಕ ವಸೂಲಿ ಮಾಡುತ್ತಿರುವುದಕ್ಕೆ ರೈತ ಸಮುದಾಯೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈಗಾಗಲೇ ಕಠಿಣ ಬರಗಾಲದಿಂದಾಗಿ ರೈತರ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದ್ದು, ಕಳೆದ ಎರಡು ತಿಂಗಳಿಂದ ಸತತ ಹೋರಾಟ ನಡೆಸಿದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯಾವುದೇ ಆರ್ಥಿಕ ಪರಿಹಾರವಾಗಲಿ ಅಥವಾ ವಿನಾಯಿತಿಯಾಗಲಿ ನೀಡದಿರುವುದು ರೈತರ ಕಣ್ಣೀರಿಗೆ ಕಾರಣವಾಗಿದೆ. ಹೀಗಾಗಿ ರಾಜ್ಯದ ಎಲ್ಲಾ ಟೋಲ್ ನಾಕಾಗಳಲ್ಲಿ ಕಬ್ಬಿನ ಗಾಡಿಗಳಿಗೆ ಸಂಪೂರ್ಣ ಉಚಿತ ಪ್ರವೇಶ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಆಡಳಿತದ ಮೂಲಕ ಸರ್ಕಾರವನ್ನು ಒತ್ತಾಯಿಸಿದೆ.
ಒಂದು ವೇಳೆ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಒಂದು ವಾರದ ಅವಧಿಯಲ್ಲಿ ಈ ಕುರಿತು ಸೂಕ್ತ ನಿರ್ಧಾರ ಕೈಗೊಂಡು ರೈತರಿಗೆ ವಿನಾಯಿತಿ ನೀಡದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೆದ್ದಾರಿ ಟೋಲ್‌ಗಳನ್ನು ಬಂದ್ ಮಾಡಿ ಉಗ್ರ ಹೋರಾಟ ರೂಪಿಸುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ. byte
ಈ ವೇಳೆ ಸಂಘಟನೆಯ ಪ್ರಮುಖ ಮುಖಂಡರಾದ ರಾಮನಗೌಡ ಪಾಟೀಲ್, ಪ್ರಕಾಶ ನಾಯ್ಕ, ಪ್ರೇಮ ಚೌಗಲಾ, ಕಿಶನ್ ನಂದಿ, ಆಸ್ತಾ ಹಾಗೂ ಬಿ.ಕೆ. ರಾಜು ಸೇರಿದಂತೆ ಹಲವು ರೈತ ನಾಯಕರು ಉಪಸ್ಥಿತರಿದ್ದು ಆಡಳಿತ ಮಂಡಳಿಗೆ ತಮ್ಮ ಹಕ್ಕುಗಳಿಗಾಗಿ ಆಗ್ರಹಿಸಿದರು.
