ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಮತ್ತು ಲಿಂಗಾಯತ ಸಂಘಟನೆ ಬೆಳಗಾವಿ ಇವರ ಸಂಯುಕ್ತ ಸಂಘಟನೆಯಲ್ಲಿ
ಬಸವ ಮಂಟಪ ಕೃತಿಯ ವಿವಾದಿತ ಲೇಖಕ ರವಿ ಹಂಜ ಮತ್ತು ಪ್ರಕಾಶಕ ವಿಶ್ವ ವಾಣಿ ಸಂಪಾದಕ ವಿಶ್ವೇಶ್ವರ ಭಟ್ ಅವರ ವಿರುದ್ಧ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು
ಬಸವ ಪರ ಸಂಘಟನೆಗಳ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಬೆಳಗಾವಿ ಜಿಲ್ಲಾ ಘಟಕ ಮತ್ತು ಲಿಂಗಾಯತ ಸಂಘಟನೆ ಬೆಳಗಾವಿ ಮುಖಂಡರು ಬೆಳಗಾವಿ ಜಿಲ್ಲಾಧಿಕಾರಿ ಮೂಲಕ ಮಾನ್ಯ ಶ್ರೀ ಡಿ ಕೆ ಶಿವಕುಮಾರ ಮುಖ್ಯ ಮಂತ್ರಿಗಳು ಕರ್ನಾಟಕ ಸರಕಾರ ಇವರಿಗೆ ಮನವಿಯನ್ನು ಸಲ್ಲಿಸಲಾಯಿತು.

ಇಂತಹ ದೊಡ್ಡ ಕ್ರಿಮಿನಲ್ ಲೇಖಕನನ್ನು ಕರ್ನಾಟಕ ಸರ್ಕಾರ ಆತನ ಪಾಸ್ ಪೋರ್ಟ್ ಜಪ್ತಿ ಮಾಡಿ ಅಮೆರಿಕಾದ ವಿದೇಶಾಂಗ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಅಲ್ಲಿನ ಪೌರತ್ವವನ್ನು ರದ್ದುಗೊಳಿಸಲು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳಿಗೆ ಎರಡೂ ಸಂಘಟನೆಯ ಮುಖಂಡರು ಮನವಿಯನ್ನು ಸಲ್ಲಿಸಿ ಪ್ರಕರಣವನ್ನು ದಾಖಲು ಮಾಡಿದ್ದಾರೆ.
ಡಾ ಶಶಿಕಾಂತ ಪಟ್ಟಣ ಈರಣ್ಣ ದಯಣ್ಣವರ ನ್ಯಾಯವಾದಿ ಸುನಿಲ್ ಸಾಣಿಕೊಪ್ಪ ಶಶಿಭೂಷಣ ಪಾಟೀಲ ಸುಧಾ ಪಾಟೀಲ ಆಶಾಲತಾ ಸೊಗಲದ ರತ್ನಕ್ಕ ಸಾಣಿಕೊಪ್ಪ ಸಂಗಮೇಶ ಅರಳಿ ಸುರೇಶ್ ನರಗುಂದ ರಮೇಶ್ ಕಳಸನ್ನವರ ಸದಾಶಿವ ದೇವರಮನಿ ಶಂಕರ ಗುಡಸ ನಾಗನಗೌಡರು ಶ್ರೀರಂಗ ಜೋಶಿ ಮುಂತಾದ ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದು ಜಿಲ್ಲಾಧಿಕಾರಿಗಳಿಗೆ ಮತ್ತು ಪೊಲೀಸ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿ ಉದ್ವಿಗ್ನ ಪರಿಸ್ಥಿತಿಯ ಸೂಕ್ಷ್ಮತೆಯನ್ನು ವಿವರಿಸಿದರು.
