State

ಕನಕಪುರ ರಸ್ತೆಯಲ್ಲಿ ಭವ್ಯ ಐಕಿಯ ಮಳಿಗೆ ಉದ್ಘಾಟಿಸಿದ ಸಿಎಂ ಡಿ.ಕೆ. ಶಿವಕುಮಾರ್

Share

ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ವಿಶ್ವಪ್ರಸಿದ್ಧ ಪೀಠೋಪಕರಣ ಸಂಸ್ಥೆ ಐಕಿಯಾದ (IKEA) ನೂತನ ಮಳಿಗೆಗೆ ಚಾಲನೆ ಸಿಕ್ಕಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಬೃಹತ್ ಮಳಿಗೆಯನ್ನು ಅಧಿಕೃತವಾಗಿ ಉದ್ಘಾಟಿಸಿದರು.

ರಾಜಧಾನಿ ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ನಿರ್ಮಿಸಲಾಗಿರುವ ನೂತನ ಐಕಿಯ (IKEA) ಮಳಿಗೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುರುವಾರ ಸಂಭ್ರಮದಿಂದ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಐಟಿ-ಬಿಟಿ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಐಕಿಯ ಇಂಡಿಯಾದ ಸಿಇಓ ಪ್ಯಾಟ್ರಿಕ್ ಆಂಥೋನಿ, ದಕ್ಷಿಣ ಭಾರತದ ಸ್ವೀಡನ್ ಕಾನ್ಸುಲೇಟ್ ಜನರಲ್ ಅರುಣ್ ವಾಸು ಹಾಗೂ ಜಾಗತಿಕ ಹೂಡಿಕೆ ಇಲಾಖೆಯ ಕಾರ್ಯದರ್ಶಿ ಎಸ್.ಎಸ್. ನಕುಲ್ ಸೇರಿದಂತೆ ಹಲವು ಪ್ರಮುಖ ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.

Tags:

error: Content is protected !!