Belagavi

ಮರಾಠಾ ಮಂಡಳದಲ್ಲಿ ಸಡಗರ ಸಂಭ್ರಮದ ಮಕ್ಕಳ ದಿನಾಚರಣೆ!

Share

ಬೆಳಗಾವಿ ನಗರದ ಮರಾಠಾ ಮಂಡಳ ಹೈಸ್ಕೂಲ್, ಜೀಜಾಮಾತಾ ಹೈಸ್ಕೂಲ್ ಹಾಗೂ ಮರಾಠಾ ಮಂಡಳ ಸೆಂಟ್ರಲ್ ಹೈಸ್ಕೂಲ್ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಭಾವಚಿತ್ರಕ್ಕೆ ಮರಾಠಾ ಮಂಡಳ ಹೈಸ್ಕೂಲ್ ಮುಖ್ಯಾಧ್ಯಪಕ ಎಂ.ಕೆ. ಪಾಟೀಲ್ ಸರ್, ಜೀಜಾಮಾತಾ ಹೈಸ್ಕೂಲ್ ಮುಖ್ಯಾಧ್ಯಪಕಿ ಎಲ್.ಬಿ. ಜಾದವ್ ಮೇಡಂ, ಸೆಂಟ್ರಲ್ ಹೈಸ್ಕೂಲ್ ಮುಖ್ಯಾಧ್ಯಪಕ ಬಿ.ಎಂ. ಪಾಟೀಲ್ ಸರ್ ಹಾಗೂ ಮೂರೂ ಶಾಲೆಗಳ ವಿದ್ಯಾರ್ಥಿ ಪ್ರತಿನಿಧಿಗಳು ಪುಷ್ಪನಮನ ಸಲ್ಲಿಸಿ ಗೌರವಿಸಿದರು. ಈ ವೇಳೆ ಮಾತನಾಡಿದ ಶಿಕ್ಷಕರು, ನೆಹರೂ ಅವರ ಜೀವನ ಮೌಲ್ಯಗಳು ಹಾಗೂ ಮಕ್ಕಳ ದಿನಾಚರಣೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ತಿಳಿಸಿಕೊಟ್ಟರು.

ಮಕ್ಕಳಲ್ಲಿ ವ್ಯವಹಾರ ಜ್ಞಾನ ಮತ್ತು ನಷ್ಟ-ಲಾಭದ ತಿಳಿವಳಿಕೆ ಮೂಡಿಸಲು ಶಾಲಾ ಆವರಣದಲ್ಲಿ ವಿವಿಧ ಖಾದ್ಯಗಳ ಸ್ಟಾಲ್‌ಗಳನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಪೋಷಕರ ಸಹಾಯದಿಂದ ತಯಾರಿಸಿ ತಂದಿದ್ದ ದೋಸೆಯಂತಹ ಸಾಂಪ್ರದಾಯಿಕ ತಿನಿಸುಗಳ ಜೊತೆಗೆ ಮೊಮೋಸ್, ಗೋಬಿ ಮಂಚೂರಿ ಹಾಗೂ ಫ್ರೈಡ್ ರೈಸ್‌ನಂತಹ ಖಾದ್ಯಗಳು ಎಲ್ಲರ ಗಮನ ಸೆಳೆದವು. ಮರಾಠಾ ಮಂಡಳ ಕಾಲೇಜಿನ ಪ್ರಾಚಾರ್ಯೆ ಕವಿತಾ ಪಾಟೀಲ್ ಮೇಡಂ ಸ್ಟಾಲ್‌ಗಳನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸ್ವಯಂಚಿತವಾಗಿ ತಯಾರಿಸಿದ್ದ ಸುಂದರ ಆಕಾಶಕಂದೀಲುಗಳು ಹಾಗೂ ದೀಪಗಳ ಸ್ಪರ್ಧೆ ನಡೆದು, ವಿಜೇತ ಆಕಾಶ ಬುಟ್ಟಿಗಳನ್ನು ಅತಿಥಿಗಳಿಗೆ ಗೌರವ ಪೂರ್ವಕವಾಗಿ ಉಡುಗೊರೆಯಾಗಿ ನೀಡಲಾಯಿತು.

Tags:

error: Content is protected !!