Belagavi

ಬೆಳಗಾವಿಯ ಕೆಎಲ್‌ಎಸ್ ಜಿಐಟಿ ಕಾಲೇಜಿನಲ್ಲಿ ‘ಚಾಂಪಿಯನ್ಸ್ ಟ್ರೋಫಿ 2026 – ಸೀಸನ್ 2’ ಫುಟ್‌ಬಾಲ್ ಪಂದ್ಯಾವಳಿಗೆ ಭರ್ಜರಿ ಚಾಲನೆ

Share

ಬೆಳಗಾವಿಯ ಪ್ರತಿಷ್ಠಿತ ಕೆಎಲ್‌ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕ್ರೀಡಾ ಹಬ್ಬ ಮನೆಮಾಡಿದೆ. ಯುವ ಫುಟ್‌ಬಾಲ್ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿರುವ ‘ಚಾಂಪಿಯನ್ಸ್ ಟ್ರೋಫಿ 2026 – ಸೀಸನ್ 2’ ಅಂತರ-ಕಾಲೇಜು ಫುಟ್‌ಬಾಲ್ ಪಂದ್ಯಾವಳಿಗೆ ಇಂದು ಅತ್ಯಂತ ಉತ್ಸಾಹದಿಂದ ಚಾಲನೆ ನೀಡಲಾಯಿತು.

ಬೆಳಗಾವಿ ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ನಾರಾಯಣ ವಿ. ಭರಮನಿ ಅವರು ಉದ್ಘಾಟಿಸಿದರು. ಪ್ರಾಂಶುಪಾಲ ಡಾ. ವಿಜಯ್ ಅಠವಲೆ, ಆಡಳಿತ ವಿಭಾಗದ ಡೀನ್ ಪ್ರೊ. ದಿಗಂಬರ್ ಕುಲಕರ್ಣಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಜಾರ್ಜ್ ರೊಡ್ರಿಗ್ಸ್ ಅವರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಶಿಸ್ತು ಮತ್ತು ಕ್ರೀಡಾಸ್ಫೂರ್ತಿಯನ್ನು ಎತ್ತಿಹಿಡಿಯುವಂತೆ ಗಣ್ಯರು ಆಟಗಾರರಿಗೆ ಶುಭ ಹಾರೈಸಿದರು. ಬೆಳಗಾವಿಯ ವಿವಿಧ ಕಾಲೇಜುಗಳ ಒಟ್ಟು 10 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಯುವ ಪ್ರತಿಭೆಗಳ ಅನಾವರಣಕ್ಕೆ ಹಾಗೂ ಕಾಲೇಜುಗಳ ನಡುವೆ ಸೌಹಾರ್ದಯುತ ಕ್ರೀಡಾ ಬಾಂಧವ್ಯ ಬೆಸೆಯಲು ಈ ಟೂರ್ನಿ ಉತ್ತಮ ವೇದಿಕೆಯಾಗಿದೆ.

Tags:

error: Content is protected !!