Belagavi

ರಕ್ತದಾನದಿಂದ ದೇಹ ಶುದ್ಧಿ…

Share

ದಾನದಲ್ಲಿ ದೊಡ್ಡ ದಾನ ರಕ್ತದಾನ. ಮಾಜಿ ಸೈನಿಕರು ರಕ್ತದಾನದಲ್ಲಿ ಪಾಲ್ಗೊಳ್ಳುತ್ತಿರುವದು ನಮಗೆ ಒದಗಿ ಬಂದ ಮತ್ತೊಂದು ಸದವಕಾಶವಾಗಿದ್ದು, ಅತ್ಯುತ್ತಮ ಆರೋಗ್ಯಕ್ಕೂ ಸಹಕಾರಿಯಲ್ಲದೆ, ರಕ್ತದಾನದಿಂದ ದೇಹ ಶುದ್ಧಿಯಾಗುವದು ಎಂದು ಅಕ್ಕತಂಗೇರಹಾಳ ಮಾಜಿ ಸೈನಿಕ ಕ್ಷೇಮಾಭಿವ್ರದ್ಧಿ ಸಂಘದ ಅದ್ಯಕ್ಷ ಬಸವರಾಜ ಮರಲಿಂಗನ್ನವರ ಹೇಳಿದರು.

ಅವರು ಗುರುವಾರ ಅಕ್ಕತಂಗೇರಹಾಳ ಪ್ರಾಥಮಿಕ ಅರೋಗ್ಯ ಕೆಂದ್ರದಲ್ಲಿ ಬೆಳಗಾವಿ ಜಿ ಪಂ , ಗೋಕಾಕ ತಾ ಪಂ ವತಿಯಿಂದ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ, ಅಪರ ಜಿಲ್ಲಾ ಅರೋಗ್ಯ ಮತ್ತು ಕುಟುಂಬ. ಕಲ್ಯಾಣ ಇಲಾಖೆ ಚಿಕ್ಕೋಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗೋಕಾಕ ಮತ್ತು ಪ್ರಾಥಮಿಕ ಅರೋಗ್ಯ ಕೇಂದ್ರ ಅಕ್ಕತಂಗೇರಹಾಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿ ಮಾಜಿ ಸೈನಿಕರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸೈನಿಕರು ದೇಶ ಭದ್ರತೆಗೆ ತಮ್ಮತನವನ್ನು ತ್ಯಾಗ ಮಾಡಿ ಸುಭದ್ರ ದೇಶ ಕಟ್ಟುವಲ್ಲಿ ಹಗಲಿರುಳು ಶ್ರಮಿಸಿದವರು. ಸೈನಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಇಂಥಹ ಸಾಮಾಜಿಕ ಕಳಕಳಿಯ ಹತ್ತಾರು ಕಾರ್ಯಕ್ರಮಗಳು ಇತರರಿಗೆ ಸ್ಪೂರ್ತಿದಾಯಕ ಹೌದು. ಸೈನಿಕರ ಶ್ರಮ ಮತ್ತು ಅವರ ಸೇವೆ ಕುರಿತು ಮಕ್ಕಳಲ್ಲಿ ಆಗಾಗ ಅರಿವು ಮೂಡಿಸುವುದು ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ ಎಂದರಲ್ಲದೆ, ರಕ್ತದಾನ, ದೇಹದಾನ, ನೇತ್ರದಾನ ನಿಜಕ್ಕೂ ಜನ್ಮ ಸಾರ್ಥಕಕ್ಕೆ ಕಾರಣವಾಗಿದ್ದು, ಎಲ್ಲರೂ ಇಂಥ ದಾನಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು. .

ಮಾಜಿ ಸೈನಿಕರಾದ ಶಿವಾನಂದ ನಿರ್ವಾಣಿ, ಪ್ರಶಾಂತ ಮರಲಿಂಗನ್ನವರ, ಪ್ರಕಾಶ ಶೆಟ್ಟೆಣ್ಣವರ , ವಿಜಯಕುಮಾರ್ ಖಾನಾಪುರಿ, ಅಡಿವೆಪ್ಪಾ ಮುಳಕೂರಿ, ಬಾಲಚಂದ್ರ ಕರಲಿಂಗನ್ನವರ , ಬಾಳಗೌಡ ಶೆಟ್ಟೆಣ್ಣವರ , ಅಡಿವೆಪ್ಪಾ ಶೆಟ್ಟೆಣ್ಣವರ ರಕ್ತದಾನ ಮಾಡಿದರು. ಮಲ್ಲಪ್ಪಾ ನೇಸರಗಿ, ಬಸವಣ್ಣಿ ಮೇಕಲಿ, ಶಂಕರ ಅಕ್ಕತಂಗೇರಹಾಳ , ಮುಂತಾದವರು ರಕ್ತದಾನ ಮಾಡಿದರು.
ಅಕ್ಕತಂಗೇರಹಾಳ ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಕಿರಣ ಕಮ್ಮಾರ ರಕ್ತದಾನ ಶಿಬಿರದ ನೇತೃತ್ವ ವಹಿಸಿದ್ದರಲ್ಲದೆ, ರಕ್ತದಾನಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.

ಟಿ ಎಚ್ ಓ ಎಂ ಎಸ್ ಕೊಪ್ಪದ , ಎಂ ಎಲ್ ನಾಯಿಕ, ಟಿ ಸಿ ಪಾಟೀಲ, ಸುರೇಖಾ ಹುರಕಡ್ಲಿ, ಸಂತೋಷ ಪಡೆನ್ನವರ, ನೀಲಮ್ಮ ನೀಲಪ್ಪಗೋಳ, ಬಿ ಸಿ ಚಂದರಗಿ, ಉಪಸ್ಥಿತರಿದ್ದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ರುದ್ರಣ್ಣಾ ಬಸ್ಸಾಪೂರ ಶೇಖರಣಾ ವ್ಯವಸ್ಥೆ ಕಲ್ಪಿಸಿದ್ದರು. ಅಕ್ಕತಂಗೇರಹಾಳ ವಿವಿಧ ಸಂಘಟನೆಗಳ ಪದಾಧಿಕಾರಿಗಳು,
ಗ್ರಾಮದ ಮತ್ತು ಸುತ್ತ ಮುತ್ತಲಿನ ಸುಮಾರು ೮೫ ರಕ್ತದಾನಿಗಳು ರಕ್ತದಾನ ಮಾಡಿದರು.

Tags:

error: Content is protected !!