Belagavi

ಬೆಳಗಾವಿ: ಪೆಂಡಾಲ್ ಹಾಗೂ ಇಲೆಕ್ಟ್ರಿಕಲ್ ಡೆಕೋರೇಟರ್ಸ್ ಅಸೋಸಿಯೇಷನ್ ವತಿಯಿಂದ ವಿಜೃಂಭಣೆಯ “ಸ್ನೇಹ ಮಿಲನ್” ಕಾರ್ಯಕ್ರಮ ಸಂಪನ್ನ!

Share

ಬೆಳಗಾವಿಯಲ್ಲಿ ವೃತ್ತಿಪರರ ಬಾಂಧವ್ಯವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ನುರಿತ ಕಲೆಗಾರರ ಸಮ್ಮುಖದಲ್ಲಿ ವಿಶೇಷ ಕಾರ್ಯಕ್ರಮವೊಂದು ಜರುಗಿದೆ. ಹೌದು, ನಗರದ ಓಲ್ಡ್ ಪಿ.ಬಿ ರಸ್ತೆಯ ಸೈ ಭವನದಲ್ಲಿ ‘ಬೆಳಗಾವಿ ತಾಲ್ಲೂಕು ಪೆಂಡಾಲ್ ಅಂಡ್ ಇಲೆಕ್ಟ್ರಿಕಲ್ ಡೆಕೋರೇಟರ್ಸ್ ವೆಲ್ಫೇರ್ ಅಸೋಸಿಯೇಷನ್’ ವತಿಯಿಂದ ಆಯೋಜಿಸಲಾಗಿದ್ದ “ಸ್ನೇಹ ಮಿಲನ್” ಕಾರ್ಯಕ್ರಮವು ಅತ್ಯಂತ ಅದ್ಧೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಸಂಪೂರ್ಣಗೊಂಡಿದೆ.

ಬೆಳಗಾವಿ ಓಲ್ಡ್ ಪಿ.ಬಿ ರಸ್ತೆಯಲ್ಲಿರುವ ಸೈ ಭವನದಲ್ಲಿ ಬೆಳಗಾವಿ ತಾಲ್ಲೂಕು ಪೆಂಡಾಲ್ ಅಂಡ್ ಇಲೆಕ್ಟ್ರಿಕಲ್ ಡೆಕೋರೇಟರ್ಸ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ “ಸ್ನೇಹ ಮಿಲನ್” ಕಾರ್ಯಕ್ರಮವು ಅತ್ಯಂತ ಸಡಗರದಿಂದ ಜರುಗಿತು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೆಂಡಾಲ್ ಹಾಗೂ ಇಲೆಕ್ಟ್ರಿಕಲ್ ಅಲಂಕಾರಿಕ ಕಾರ್ಮಿಕರು ಹಾಗೂ ಮಾಲೀಕರು ಒಂದೆಡೆ ಸೇರಿ ಪರಸ್ಪರ ಶುಭಕೋರಲು ಈ ಸಮಾರಂಭವು ಅತ್ಯುತ್ತಮ ವೇದಿಕೆಯಾಯಿತು.
ಈ ವಿಶೇಷ ಕಾರ್ಯಕ್ರಮಕ್ಕೆ ಹಲವು ಗಣ್ಯರು ಮುಖ್ಯ ಅತಿಫತಿಗಳಾಗಿ ಆಗಮಿಸಿ ಕಳೆ ತಂದರು. ಸಂಸದರಾದ ಜಗದೀಶ್ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಪ್ರಶಾಂತ್ ಅಗರ್ವಾಲ್, ಸಗರ್‌ಭಾಯ್ ಚೌವ್ಹಾಣ್, ನಾರಾಯಣ ಚೌಗುಲೆ, ಭೌರಾವ್ ಮನ್ನೋಳ್ಕರ್, ಮಹಾದೇವ ಮನ್ನೋಳ್ಕರ್, ದಾಮೋದರ್ ರತನ್ ಮತ್ತು ಪರಶುರಾಮ್ ಸಾಳುಂಕೆ ಮುಂತಾದ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದರು. ಗಣ್ಯರ ಉಪಸ್ಥಿತಿ ಹಾಗೂ ಅಸೋಸಿಯೇಷನ್ ಸದಸ್ಯರ ಒಗ್ಗಟ್ಟು ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಗಿದ್ದು, ವೃತ್ತಿಬಾಂಧವರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಈ ಸ್ನೇಹ ಮಿಲನ್ ಪ್ರಮುಖ ಹೆಜ್ಜೆಯಾಗಿದೆ.

ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅಸೋಸಿಯೇಷನ್‌ನ ಎಲ್ಲಾ ಪದಾಧಿಕಾರಿಗಳು ಶ್ರಮಿಸಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲರ ಮುಖದಲ್ಲೂ ಹಬ್ಬದ ಸಂಭ್ರಮ ಕಂಡುಬಂತು. ಕಾರ್ಯಕ್ರಮದ ಅಂತಿಮವಾಗಿ ಅನಿಲ್ ಅಂಬರೋಳೆ ಅವರು ಅತ್ಯಂತ ಆಕರ್ಷಕವಾಗಿ ನಿರೂಪಣೆ ನೆರವೇರಿಸಿ ಸಭಿಕರ ಮೆಚ್ಚುಗೆಗೆ ಪಾತ್ರರಾದರು.

Tags:

error: Content is protected !!