ಎಸ್ಐಆರ್ ಗೊಂದಲ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ಪ್ರತ್ಯೇಕ ತನಿಖೆ ಸದ್ಯಕ್ಕಿಲ್ಲ. ಚುನಾವಣಾ ಆಯೋಗವೇ ತನಿಖೆ ಮಾಡುತ್ತದೆ. ಎಲ್ಲಿಂದ ಫಾರ್ಮ್ಗಳು ಮುದ್ರಣವಾದವು? ಹೇಗೆ ಬಿಜೆಪಿ ಕೈಗೆ ತಲುಪಿದವು? ಎಂಬೆಲ್ಲಾ ವಿಚಾರಗಳು ಗೊತ್ತಾಗುತ್ತವೆ. ಈ ವಿಚಾರದಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೆ ಸತ್ಯದರ್ಶನ ಆಗಿದೆ ಎಂದರು.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಎಸ್ಐಆರ್ ಗೊಂದಲ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ಪ್ರತ್ಯೇಕ ತನಿಖೆ ಸದ್ಯಕ್ಕಿಲ್ಲ. ಚುನಾವಣಾ ಆಯೋಗವೇ ತನಿಖೆ ಮಾಡುತ್ತದೆ. ಎಲ್ಲಿಂದ ಫಾರ್ಮ್ಗಳು ಮುದ್ರಣವಾದವು? ಹೇಗೆ ಬಿಜೆಪಿ ಕೈಗೆ ತಲುಪಿದವು? ಎಂಬೆಲ್ಲಾ ವಿಚಾರಗಳು ಗೊತ್ತಾಗುತ್ತವೆ. ಈ ವಿಚಾರದಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೆ ಸತ್ಯದರ್ಶನ ಆಗಿದೆ. ಅವರು ಏನು ಕ್ರಮ ಕೈಗೊಳ್ಳುತ್ತಾರೆಂದು ನೋಡೋಣ? ಆಮೇಲೆ ನಮ್ಮ ತೀರ್ಮಾನ ಮಾಡುತ್ತೇವೆ ಎಂದು ಸಿಎಂ ತಿಳಿಸಿದರು. ನಾನು ತಪ್ಪು ಮಾಡಿದರೆ ನನ್ನ ಮೇಲೆ ಕೇಸ್ ಹಾಕಲಿ. ಆದರೆ ರಾಜ್ಯದ ಬಿಜೆಪಿಯವರು ಮೇಲಿನ ಒತ್ತಡದಿಂದ ಹೇಳಿಕೆ ಕೊಡುತ್ತಿದ್ದಾರೆ. ಕಾನೂನು ಎಲ್ಲರಿಗೂ ಒಂದೇ, ನನ್ನಿಂದ ಶಾಂತಿ ಭಂಗ ಆಗಿದ್ದರೆ, ಕಾನೂನು ಉಲ್ಲಂಘನೆ ಆಗಿದ್ದರೆ ಕೇಸ್ ಹಾಕಲಿ. ಬಿಜೆಪಿಯವರು ರಾಜಕೀಯಕ್ಕಾಗಿ ಮಾತನಾಡುತ್ತಿದ್ದಾರೆ. ಅವರಿಗೆ ಮಾತನಾಡುವುದು ಈಗ ಅನಿವಾರ್ಯ ಎಂದು ಸಿಎಂ ತಿರುಗೇಟು ನೀಡಿದರು.
ನಾವು ಚುನಾವಣಾ ಆಯುಕ್ತರ ಮುಂದೆ ಧರಣಿ ಮಾಡಿಲ್ಲ, ಯಾವ ಕಾನೂನನ್ನು ಉಲ್ಲಂಘನೆ ಮಾಡಿಲ್ಲ. ಸಮಸ್ಯೆ ಆಗಿರುವುದಕ್ಕೆ ಕಾನೂನಾತ್ಮಕವಾಗಿ ಆಯುಕ್ತರ ಗಮನಕ್ಕೆ ತಂದಿದ್ದೇವೆ. ಇದರಲ್ಲಿ ತಪ್ಪೇನಿದೆ? ಸಮಸ್ಯೆ ಬಗ್ಗೆ ಚರ್ಚೆ ಮಾಡುವುದಕ್ಕೆ ಸಮಯ ಕೇಳಿದ್ದೆವು. ಆ ಸಂದರ್ಭದಲ್ಲಿ ಅಲ್ಲೇ ಕುಳಿತೆವು, ಆದರೆ ಧರಣಿ ಅಲ್ಲ. ಕೊನೆಗೂ ಪರಿಹಾರ ಸಿಕ್ಕಿದೆ. ನಾವು ಜನಪ್ರತಿನಿಧಿಯಾಗಿ ಆಯುಕ್ತರ ಮುಂದೆ ಸಮಸ್ಯೆ ಹೇಳಿದ್ದೇವೆ. ಇದರಲ್ಲಿ ತಪ್ಪು ಯಾವುದು ಎಂದು ಹೇಳಿ ಎಂದರು.
ಈ ಬಾರಿ ದಸರಾ ಜಂಬೂ ಸವಾರಿಯಲ್ಲಿ ಹೊರ ರಾಜ್ಯದ ಸ್ತಬ್ಧಚಿತ್ರಗಳನ್ನು ಕಳುಹಿಸುವಂತೆ ಮನವಿ ಮಾಡಿದ್ದೇವೆ, ಅದು ಶೀಘ್ರವೇ ತೀರ್ಮಾನವಾಗುತ್ತದೆ. ಜೊತೆಗೆ ಹೊರ ರಾಜ್ಯದ ಸಿಎಂಗಳಿಗೂ ದಸರಾ ಜಂಬೂ ಸವಾರಿಗೆ ಆಹ್ವಾನ ಕೊಟ್ಟಿದ್ದೇವೆ. ಆದ್ರೆ ಯಾರ್ಯಾರು ಬರುತ್ತಾರೆ ಎಂಬುದು ತೀರ್ಮಾನ ಆಗಿಲ್ಲ ಎಂದರು.
ನೈಸ್ ಅಕ್ರಮದಲ್ಲಿ ಯಾರು ಏನೇ ಹೇಳಲಿ, ಎಲ್ಲದಕ್ಕೂ ಈ ದೇಶದ ಕಾನೂನಿದೆ. ಇದರಲ್ಲಿ ಯಾರದು ಸರಿ, ಯಾರದು ತಪ್ಪು ಎಂಬುದಕ್ಕೆ ಕಾನೂನು ಮೂಲಕ ಉತ್ತರ ಕೊಡುತ್ತೇನೆ ಎಂದು ಶನಿವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
