ರಾಜ್ಯಚಸರ್ಕಾರದ ಅನುದಾನದ ಕಾಮಗಾರಿ ಪೂಜೆಗಳಿಗೆ ಸಂಸದರಿಂದ ಚಾಲನೆ ಯಾಗುತ್ತಿದೆ ಎಂದು ಹುಕ್ಕೇರಿ ಶಾಸಕ ನಿಖಿಲ್ ಕತ್ತಿ ಅಸಮಾಧಾನ ವ್ಯಕ್ತಪಡಿಸಿದರು.
ಹೌದು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೋಳಿಯವರು ಕ್ಷೇತ್ರದ ಹಲವಾರು ಭಾಗಗಳಲ್ಲಿ ರಾಜ್ಯ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನಿಡುತ್ತಿರುವದನ್ನು ಗಮನಿಸಿದ ಶಾಸಕ ನಿಖಿಲ್ ಕತ್ತಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಲೋಕೋಪಯೋಗಿ ಸಚಿವರು ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳ ಕಾಮಗಾರಿಗಳನ್ನು ಸಂಸದೆ ಅವರ ಪುತ್ರಿ ಪ್ರಿಯಾಂಕಾ ರವರ ಹೆಸರಿನಲ್ಲಿ ನೀಡುತ್ತಿರುವದರಿಂದ ಕಾಮಗಾರಿಗಳ ಚಾಲನೆಗೆ ಪೂಜೆ ಮಾಡಲು ಚಿಕ್ಕೋಡಿ ಭಾಗದ ಶಾಸಕರಿಗೆ ಅವಕಾಶ ನಿಡುತ್ತಿಲ್ಲಾ ,ರಾಜ್ಯ ಸರ್ಕಾರದ ಯೋಜನೆಗಳು ಆಯಾ ಭಾಗದ ಶಾಸಕರಿಂದಲೇ ಚಾಲನೆ ದೋರೆಯಬೇಕು ,ಸಂಸದರು ಕೇಂದ್ರದ ಅನುದಾನ ತಂದು ಚಾಲನೆ ನೀಡಿದರೆ ನಮಗಮ ಅಭ್ಯಂತರ ವಿಲ್ಕಾ ಎಂದು ಅಸಮಾಧಾನ ವ್ಯಕ್ತಪಡಿಸಿದರು.
