Hukkeri

ಹುಕ್ಕೇರಿ : ಅಕ್ಟೋಬರ್‌11 ರಂದು ಹುಕ್ಕೇರಿ ದಸರಾ ಉತ್ಸವಕ್ಕೆ ಚಾಲನೆ – ಚಂದ್ರಶೇಖರ ಮಹಾಸ್ವಾಮಿ.

Share

ಅಕ್ಟೋಬರ್ 11 ರಂದು ಮುಂಜಾನೆ 12 ಘಂಟಗೆ ಹುಕ್ಕೇರಿ ದಸರಾ ಉತ್ಸವಕ್ಕೆ ಚಾಲನೆ ನಿಡಲಾಗುವದು ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ಹೇಳಿದರು.

ಹುಕ್ಕೇರಿ ಹಿರೇಮಠದ ದಸರಾ ಉತ್ಸವ ಅಂಗವಾಗಿ ಆಯೋಜಿಸಿದ ಪೂರ್ವಭಾವಿ ಸಭೆಯಲ್ಲಿ ಮುಖಂಡರಾದ ಎಚ್ ಎಲ್ ಪೂಜಾರ, ಗುರು ಕುಲಕರ್ಣಿ, ಸರೇಶ ಜಿನರಾಳೆ, ಸಿ ಎಂ ದರಬಾರೆ ಯವರು ದಸರಾ ಉತ್ಸವದ ಕುರಿತು ರೂಪ ರೇಷೆ ಮತ್ತು ಜವಾಬ್ದಾರಿಗಳ ಕುರಿತು ಮಾಹಿತಿ ನೀಡಿದರು.
ನಂತರ ಚಂದ್ರಶೇಖರ ಮಹಾಸ್ವಾಮಿಗಳು ಮಾತನಾಡಿ ಈ ಬಾರಿ ಹುಕ್ಕೇರಿ ದಸರಾ ಉತ್ಸವು ಅಕ್ಟೋಬರ್ 11 ರಂದು ಉದ್ಘಾಟನೆ ಗೋಳ್ಳಲಿದ್ದು, ಮೈಸೂರಿನ ಪ್ರಖ್ಯಾತ ಪಂಡಿತರಿಂದ ಪ್ರತಿ ದಿನ ಚಂಡಿಕಾ ಹೋಮ ಮತ್ತು ಸಾಯಂಕಾಲ ಗುಡ್ಡಾಪೂರ ದಾನಮ್ಮ ಕುರಿತು ಪ್ರವಚನ ಹಾಗೂ ಹೋಳಿಗೆ ಊಟ ಏಪ೯ಡಿಸಲಾಗಿದೆ ಕಾರಣ ಭಕ್ತರು ಇದರ ಸದುಪಯೋಗ ಪಡೆದುಕೋಳ್ಳ ಬೇಕು ಎಂದರು
ಈ ಸಂದರ್ಭದಲ್ಲಿ ಊರಿನ ಗಣ್ಯರಾದ ಪಿಂಟು ಶೇಟ್ಟಿ, ಚನ್ನಪ್ಪ ಗಜಬರ, ಆನಂದ ಪಟ್ಟಣಶೇಟ್ಟಿ, ರವಿ ಪಟ್ಟಣಶೇಟ್ಟಿ,ಶ್ರೀಶೈಲ ಸಂಬಾಳ,ಬಾಬುರಾವ ಮುನ್ನೋಳ್ಳಿ,ಸುಭಾಷ ನಾಯಿಕ, ಮಹಾಂತೇಶ ಸಂಬಾಳ, ಶ್ರೀಶೈಲ ಹುಂಡೆಕಾರ ಸೇರಿದಂತೆ ಮಠದ ಹಕ್ಕುದಾರರು, ಆಸ್ಥಾನ ಸೇವಕರು ಉಪಸ್ಥಿತರಿದ್ದರು.
ನಂತರ ದಸರಾ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.

Tags:

error: Content is protected !!