ಕೇಂದ್ರ ಸರ್ಕಾರದ ವಿರುದ್ಧ ಬೆಳಗಾವಿ ಜಿಲ್ಲೆಯಲ್ಲಿ ಹೋರಾಟ ತೀವ್ರಗೊಂಡಿದ್ದು, ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ರಸ್ತೆ ಮೇಲೆ ಎತ್ತುಗಳನ್ನು ಕಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿ ಟನ್ ಕಬ್ಬಿಗೆ 5500 ರೂ. ದರ, ಸಕ್ಕರೆ ಪ್ರತಿ ಕೆಜಿಗೆ 60 ರೂ. ಎಂಎಸ್ಪಿ ದರ ನಿಗದಿ, ಸ್ವಾಮಿನಾಥನ ವರದಿ ಜಾರಿ, ರಾಜ್ಯದ ಎಥೆನಾಲ್ ಸಂಪೂರ್ಣ ಖರೀದಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಇಂದು ರಾಷ್ಟ್ರೀಯ ಹೆದ್ದಾರಿ ಬಂದ್ಗೆ ಕರೆ ನೀಡಿದ್ದು ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ರಸ್ತೆ ಬಂದ್ ಮಾಡಿರುವ ರೈತ ಮುಖಂಡರು,ಎತ್ತುಗಳನ್ನು ಕಟ್ಟಿ, ಚಕ್ಕಡಿ ನಿಲ್ಲಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಪ್ರತಿಭಟನೆಯಲ್ಲಿ ರೈತ ಮುಖಂಡ ಹಾಗೂ ನ್ಯಾಯವಾದಿ ರಮೇಶ ಈರನಟ್ಟಿ ಇವರು ಸರಕಾರ ಮತ್ತು ಕಾರ್ಖಾನೆ ಮಾಲೀಕರ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿ ರೈತರು ವರ್ಷಕೊಮ್ಮೆ ಹೊಲ ಮಾರುತಿದ್ದಾರೆ ಕಾರ್ಖಾನೆ ಮಾಲೀಕರು ಲಂಚ ಕೊಟ್ಟು ಸರಕಾರಕ್ಕೆ ಮತ್ತೊಂದು ಕಾರ್ಖಾನೆಗೆ ಅರ್ಜಿ ಹಾಕುತಿದ್ದಾರೆ, ಕಬ್ಬು ಪೋರೈಸುವವರು ರೈತರು ಹೊರತು ಸರಕಾರ ಅಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಇವತ್ತು ರಸ್ತೆ ಬಂದ್ ಮಾಡಿದ್ದೇವೆ ಬೆಲೆ ನಿಗದಿ ಆಗದಿದ್ದರೆ, ಸರಕಾರ ಬರುವ ಆದಾಯ ಸಾರಾಯಿಯನ್ನು ಬಂದ್ ಮಾಡುತ್ತೇವೆ, ಕಾರಖಾನೆ ಮಾಲೀಕರು ಎಲ್ಲರು ಸಕ್ಕರೆ ಕಾಯಿಲೆ ಇದ್ದವರಿದ್ದಾರೆ. ಔದ್ಯೋಗಿಕ ಕ್ಷೇತ್ರಕ್ಕೆ ತೊಂದರೆ ಆಗುತ್ತದೆ ಎಂದು ಹೆದ್ದಾರಿ ಬಂದ್ ಮಾಡೊದಕ್ಕೆ ನಿಷೇದ ಹೇರಿರುವ ಜಿಲ್ಲಾಧಿಕಾರಿಯವರು ರೈತರ ಬಗ್ಗೆ ಕಾಳಜಿ ತೋರಿಸುತ್ತಿಲ್ಲಾ, ಅವರು ಕೂಡ ತಮ್ಮ ಹುದ್ದೆಗೆ ಚೂತಿ ತರುತಿದ್ದೀರಿ ಎಂದು ತಿಳಿಸಿದರು.
ಇದೆ ರೀತಿ ಮುಂದು ವರೆದಲ್ಲಿ ಸರಕಾರವು ಉಳಿಯುದಿಲ್ಲ ಕಾರ್ಖಾನೆ ಮಾಲೀಕರು ಉಳಿಯುದಿಲ್ಲ ಅದಕ್ಕಾಗಿ ರೈತರ ಬೇಡಿಕೆ ಈಡೇರಿಸಲು ಗುಡುಗಿದರು ಇನ್ನು ಪಟ್ಟಣದ ಪ್ರಮುಖ ಬಿಡಿಗಳಲ್ಲಿನ ಅಂಗಡಿ ಮುಗ್ಗಟ್ಟುಗಳನ್ನು ಸ್ವಯಂ ಬಂದ ಮಾಡಲಿಕ್ಕೆ ವಿನಂತಿಸಿದರು ಇವತ್ತಿನ ಬಂದನಲ್ಲಿ ನೂರಾರು ರೈತರು ಬಾಗಿಯಾಗಿದ್ದರು.
