Belagavi

ಪಕೋಡಾ ಕರಿದು ಮೋದಿ ಹುಟ್ಟುಹಬ್ಬವನ್ನು ‘ನಿರುದ್ಯೋಗ’ ದಿನವನ್ನಾಗಿ ಆಚರಿಸಿದ ಯುವ ಕಾಂಗ್ರೆಸ್

Share

ನಡುರಸ್ತೆಯಲ್ಲಿ ಪಕೋಡಾ ಕರಿದು, ಹಣ್ಣು ತರಕಾರಿ ಮಾರಾಟ ಮಾಡುವ ಮೂಲಕ ಯುವ ಕಾಂಗ್ರೆಸ್ಸಿನ ವತಿಯಿಂದ ಪಿಎಂ ಮೋದಿ ಹುಟ್ಟುಹಬ್ಬವನ್ನು ನಿರುದ್ಯೋಗ ದಿನವನ್ನಾಗಿ ಆಚರಿಸಲಾಯಿತು.

ಬೆಳಗಾವಿಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ಯುವ ಕಾಂಗ್ರೆಸನ ವತಿಯಿಂದ ವಿನೂತನವಾಗಿ ಆಚರಿಸಲಾಯಿತು. ನಡುರಸ್ತೆಯಲ್ಲಿ ಪದವಿಧರರ ವೇಷದಲ್ಲಿ ಪಕೋಡಾ ಕರಿಯುವ ಮೂಲಕ ಮತ್ತು ತಳ್ಳುಗಾಡಿಯಲ್ಲಿ ತರಕಾರಿ ಹಣ್ಣು ಮಾರುವ ಮೂಲಕ ಪಿಎಂ ಮೋದಿ ಹುಟ್ಟುಹಬ್ಬವನ್ನು ನಿರುದ್ಯೋಗ ದಿನವಾಗಿ ಆಚರಿಸಲಾಯಿತು.

ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಕಾರ್ತಿಕ್ ಪಾಟೀಲ್ ಅವರು ಮಾತನಾಡಿ ಪಿಎಂ ಮೋದಿ ಅವರ ಹುಟ್ಟುಹಬ್ಬವನ್ನು ಜಿಲ್ಲಾ ಯುವ ಕಾಂಗ್ರೆಸ್ ನಿರುದ್ಯೋಗ ದಿನವೆಂದು ಆಚರಿಸುತ್ತಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಇದರಲ್ಲಿ ವಿಫಲವಾಗಿವೆ. ಖಾಲಿ ಹುದ್ಧೆಗಳನ್ನು ಭರ್ತಿ ಮಾಡಲಾಗದೇ, ಇದು ದೇಶದ ಆರ್ಥಿಕತೆ ಮತ್ತು ಸಾಮಾಜೀಕವಾಗಿ ದೊಡ್ಡ ಪರಿಣಾಮವನ್ನು ಬೀರುತ್ತಿದ್ದು, ಯುವಕರು ಬೀದಿಪಾಲಾಗಿದ್ದು, ಯುವಕರು ಬೀದಿಗೆ ಬಿದ್ದಿದ್ದಾರೆ. ಪರೀಕ್ಷೆಯಲ್ಲಿಯೂ ಭ್ರಷ್ಠಾಚಾರ ನಡೆಯುತ್ತಿದ್ದು, ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಪಿಎಂ ಮೋದಿ ಅವರು ದೇಶದ ಯುವಕರ ಕ್ಷಮೆ ಕೇಳಿ, ತಕ್ಷಣ ನಿರುದ್ಯೋಗವನ್ನು ನೀಗಿಸಬೇಕು. ತನಿಖಾ ತಂಡಗಳನ್ನು ಪಿಎಂ ಮೋದಿ ಅವರು ದುರ್ಬಳಕೆ ಮಾಡಿಕೊಂಡು ರಾಜಕೀಯ ಪ್ರೇರಿತ ದಾಳಿ ನಡೆಸಲಾಗುತ್ತಿದೆ. ರಾಷ್ಟ್ರಪತಿಗಳು ತಕ್ಷಣ ಮಧ್ಯಪ್ರವೇಶಿಸಿ ಕೇಂದ್ರ ಸರ್ಕಾರದ ಕಿವಿ ಹಿಂಡುವ ಕೆಲಸವಾಗಬೇಕೆಂದು ಆಗ್ರಹಿಸಿದರು.

ಈ ವೇಳೆ ಯುವಾ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.

Tags:

error: Content is protected !!