ತಮ್ಮ ಕ್ಷೇತ್ರವನ್ನು ಬರಗಾಲ ಪಟ್ಟಿಯಿಂದ ಕೈಬಿಟ್ಟಿದ್ದಕ್ಕೆ ಯಶವಂತರಾಯಗೌಡ ಪಾಟೀಲ್ ಅವರು ಇಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ನಲ್ಲಿ ಸಂಚಲನ ಮೂಡಿಸಿದೆ. ಅಲ್ಲದೇ ಯಶವಂತರಾಯಗೌಡ ಪಾಟೀಲ್ ಸದನದಲ್ಲಿ ಕೋಲಾಹಲ ಎಬ್ಬಿಸಿದೆ. ಹೌದು…ವಿಪಕ್ಷ ಬಿಜೆಪಿ ಇದನ್ನೇ ಅಸ್ತ್ರ ಮಾಡಿಕೊಂಡು ಸದನದಲ್ಲಿ ಯಶವಂತರಾಯಗೌಡ ರಾಜೀನಾಮೆ ವಿಚಾರವನ್ನು ಪ್ರಸ್ತಾಪಿಸಿ ಈ ಬಗ್ಗೆ ಸ್ಪೀಕರ್ ಸ್ಪಷ್ಟೀಕರಣ ನೀಡುವಂತೆ ಎಂದು ಆಗ್ರಹಿಸಿದೆ.

ವಿಧಾನಸಭೆಯ ಸದನದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಅವರು ಈಗೋಂದು ಆಘಾತಕಾರಿ ಸುದ್ಧಿಯಿದೆ. ಹೀಗು ಉಂಟೇ ಎಂದು ಯಶವಂತರಾಯಗೌಡ ರಾಜೀನಾಮೆ ವಿಚಾರವನ್ನು ಪ್ರಸ್ತಾಪಿಸಿ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದರು.
ಇನ್ನು ಆರ್. ಅಶೋಕ್ ಅವರು ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಪತ್ರ ನಮ್ಮ ಕೈಯಲ್ಲಿದೆ. ಯಾರಾದರೂ ರಾಜೀನಾಮೆ ಕೊಟ್ಟರೆ ಅಂಗೀಕಾರ ಮಾಡ್ತೇನೆ ಎಂದಿದ್ದರು ಮಂತ್ರಿ ಮಂಡಲ ರಚನೆ ವೇಳೆ ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರು. ಈಗ ರಾಜೀನಾಮೆ ಅಂಗೀಕಾರ ಮಾಡಿದ್ದಾರಾ? ಹಾಗಾದರೆ ಡಿ.ಕೆ.ಶಿವಕುಮಾರ್ ಮಾತಿಗೆ ಮೂರು ಕಾಸಿನ ಬೆಲೆ ಇಲ್ವಾ? ಧಮ್ ಇದ್ದರೆ, ತಾಕತ್ ಇದ್ದರೆ ರಾಜೀನಾಮೆ ಅಂಗೀಕಾರ ಮಾಡಿ ಎಂದು ಸವಾಲು ಹಾಕಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಡಿಕೆ ಶಿವಕುಮಾರ್, ವಿಪಕ್ಷದವರು ಗಾಬರಿಯಾಗುವುದು ಬೇಡ. ಜನರ ಬದುಕಿಗೋಸ್ಕರ ಕೊಟ್ಟಿರುವ ರಾಜೀನಾಮೆ ಅದು.ಬರಗಾಲದ ಬಗ್ಗೆ ನಮಗೆಲ್ಲ ಪ್ರಧಾನಮಂತ್ರಿ ಎಚ್ಚರಿಕೆ ಕೊಟ್ಟಿದ್ದಾರೆ. ಯಶವಂತರಾಯಗೌಡ ಪಾಟೀಲ್ ಸಂಪರ್ಕಿಸಲು ಪ್ರಯತ್ನಿಸಿದರು. ಗೃಹಸಚಿವರ ಜೊತೆ ಬೇರೆ ಕಾರ್ಯಕ್ರಮದ ಬಗ್ಗೆ ಚರ್ಚೆಯಲ್ಲಿದ್ದೆ. ಯಶವಂತರಾಯಗೌಡ ಪಾಟೀಲ್ ಭಾವನಾತ್ಮಕವಾಗಿ ಹೇಳಿದ್ದಾರೆ. ಅವರ ಕ್ಷೇತ್ರದಲ್ಲಿ ಜನ ಸಾಲಸೋಲ ಮಾಡಿ ಬೆಳೆ ಬೆಳೆದಿದ್ದಾರೆ. ಬರಪೀಡಿತ ಅಂತಾ ಘೋಷಣೆ ಮಾಡಲು ಮಾರ್ಗಸೂಚಿ ಇದೆ. ಏಕಾಏಕಿ ಘೋಷಣೆ ಮಾಡಲು ಪರಮೇಶ್ವರ್ಗೆ ಅವಕಾಶ ಇಲ್ಲ. ಹೆಚ್.ಕೆ.ಪಾಟೀಲ್ ಅವರಂತಹ ಹಿರಿಯ ನಾಯಕರಿಗೇ ಅಷ್ಟು ಒತ್ತಡ. ಯಶವಂತರಾಯಗೌಡ ಪಾಟೀಲ್ಗೂ ಒತ್ತಡ ಇರುವುದು ತಪ್ಪಲ್ಲ.ನನ್ನ ಕ್ಷೇತ್ರದಲ್ಲೂ ಬರ ಇದೆ, ನಾನೇನೂ ಕೇಳಲು ಹೋಗಿಲ್ಲ. ಪಾಟೀಲ್ ನನ್ನ ಬಳಿ ಬಂದಿದ್ದರು, ಸಮಾಧಾನ ಮಾಡಿ ಕಳಿಸಿದ್ದೇನೆ. ಇದು ಬೇರೆ ರೀತಿಯ ರಾಜೀನಾಮೆ ಅಲ್ಲ. ಇದು ಕೆ.ಎಸ್.ಈಶ್ವರಪ್ಪ, ನಾಗೇಂದ್ರ ತರಹದ ರಾಜೀನಾಮೆ ಅಲ್ಲ. ಜನರ ಬದುಕಿಗೋಸ್ಕರ ಕೊಟ್ಟಿರುವ ರಾಜೀನಾಮೆ ಅದು ಎಂದು ಸ್ಪಷ್ಟಪಡಿಸಿದರು. (ಫ್ಲೋ)
ಇನ್ನು ವಿಪಕ್ಷ ನಾಯಕ ಆರ್. ಅಶೋಕ್ ಅವರು ಇನ್ನು ಎಷ್ಟು ಜನ ರಾಜೀನಾಮೆ ಕೊಡ್ತಾರೋ ಗೊತ್ತಿಲ್ಲ. ಸಭಾಧ್ಯಕ್ಷರಿಗೆ ಪತ್ರ ಬಂದಿದ್ದು, ಅವರು ಈ ಕುರಿತು ನಿರ್ಣಯ ಮಂಡಿಸಲಿ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಆರೋಗ್ಯ ಸಚಿವ ಯು.ಟಿ.ಖಾದರ್ ವಿರುದ್ಧ ಆಕ್ರೋಶಗೊಂಡಿದ್ದು, ಪತ್ರ ಬರೆದಿರುವುದು ಹಾಲಿ ಸ್ಪೀಕರ್ ಗೆ, ಮಾಜಿ ಸ್ಪೀಕರ್ ಗೆ ಅಲ್ಲ. ನೀವು ಯಾಕೆ ಎದ್ದು ನಿಲ್ಲುತ್ತೀರಾ? ಎಂದರು. ಆದರೂ ಖಾದರ್ ಸುಮ್ಮನಿರದೇ ಅವರು ನಿಮಗೆ ಪತ್ರ ಬರೆದಿದ್ದಾರಾ ಎಂದು ಪ್ರಶ್ನಿಸಿದರು. ಇದಕ್ಕೆ ಆರ್. ಅಶೋಕ ಸಚಿವ ಖಾದರ್ ಅವರು ಶ್ಯಾಡೋ ಸ್ಪೀಕರ್ ಅಂತೆ ವರ್ತಿಸುತ್ತಿದ್ದಾರೆಂದು ಜರಿದರು. ಈ ವೇಳೆ ಸಹಕಾರ ಸಚಿವ ಲಕ್ಷ್ಮಣ್ ಸವದಿ ಅವರು ನಿಮ್ಮ ಪೂರಕವಾಗಿ ಮಾತನಾಡುತ್ತೇನೆ ಎಂದಾಗ ಬೆಳಗಾವಿಗರ ಸಹವಾಸ ಬೇಡ ಎಂದರು. ಸಚಿವ ಸವದಿ ಅವರು ಕಾಂಗ್ರೆಸ್ ಸಚಿವರು ಒಬ್ಬರಾಗಿ ರಾಜೀನಾಮೆ ನೀಡುತ್ತಿದ್ದಾರೆಂದು ಹೇಳುತ್ತಿರುವ ಬಿಜೆಪಿಗರು ಒಂದೇ ವಿಮಾನದಲ್ಲಿ 40 ಜನ ಹೈದ್ರಾಬಾದಿಗೆ ಹೋಗಿದ್ದನ್ನು ನೆನಪಿಸಿಕೊಳ್ಳುವಂತೆ ಹೇಳಿದರು.
ವಿಪಕ್ಷ ನಾಯಕ ಆರ್. ಅಶೋಕ ಅವರು ಅಂಗೀಕಾರ, ರದ್ಧು ಅಥವಾ ಪೇಡಿಂಗ್ ಈ ಮೂರರಲ್ಲಿ ಒಂದು ನಿರ್ಣಯವನ್ನು ಕೈಗೊಳ್ಳಿ ಎಂದು ಸಭಾಧ್ಯಕ್ಷರಿಗೆ ಪಟ್ಟು ಹಿಡಿದರು. ಆದರೇ ಸಭಾಧ್ಯಕ್ಷರು ಯಾವುದೇ ನಿರ್ಣಯ ತಿಳಿಸಿದರೇ ಸದನ ವಿರಾಮವನ್ನು ಘೋಷಿಸಿದರು.
