ಕಷ್ಟದ ನಡುವೆಯೂ ಬಡ ರೈತನ ಮಗನೋರ್ವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 26ನೇ 1ನೇ ಘಟಿಕೋತ್ಸವದಲ್ಲಿ ಬರೋಬರಿ 12 ಚಿನ್ನದ ಪದಕ ಪಡೆದು ಹೊನ್ನ ಸಾಧನೆ ಮಾಡಿ ಅವಮಾನ ಮಾಡಿದವರಿಗೆ ತನ್ನ ಸಾಧನೆಯ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.


ದಾವಣಗೆರೆ ಜಿಲ್ಲೆಯ ಜೈನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಚ್.ಎಂ.ವಿಶ್ವನಾಥ್ 12 ಚಿನ್ನದ ಪದಕ ಪಡೆಯುವ ಮೂಲಕ ಅತಿ ಹೆಚ್ಚು ಚಿನ್ನದ ಪದಕಗಳನ್ನು ಗಳಿಸಿದ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದಾರೆ.

ತಂದೆ ಮಂಜುನಾಥ ಸಣ್ಣ ಪ್ರಮಾಣದ ಕೃಷಿ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಮಗನ ಓದಿಗೆ ಕಷ್ಟಪಟ್ಟಿದ್ದರು. ಅಲ್ಲದೆ ತಾಯಿ ನಾಗಮ್ಮ, ತಮ್ಮ ಷಣ್ಮುಖ ಸೇರಿದಂತೆ ಮಾವ ಎಂಜನಿಯರಿಂಗ್ ಪದವಿ ಪಡೆದು ಚಿನ್ನದ ಸಾಧನೆ ಮಾಡಲು ಸಹಾಯ ಮಾಡಿದ್ದಾರೆ.
ವಿಶ್ವನಾಥ ಎಸ್ಸೆಸ್ಸೆಲ್ಸಿಯಲ್ಲಿ 84%, ಪಿಯುಸಿಯಲ್ಲಿ 72% ಫಲಿತಾಂಶವಾದ ಮೇಲೂ ಅನಾರೋಗ್ಯದ ಸಮಸ್ಯೆ ಎದುರಾಗಿತ್ತು. ಡೆಂಗ್ಯೂ ಬಂದು ಚೇತರಿಸಿಕೊಂಡ ಬಳಿಕ ಖಾಸಗಿ ನೆಟ್ವರ್ಕ್ ಮಾರ್ಕೆಟ್ ಗೆ ಹೋಗಿ ಕುಗ್ಗಿದ್ದವನಿಗೆ ಮಾವ, ಚಿಕ್ಕಪ್ಪ ಸಹಾಯ ಮಾಡಿ ಅಭ್ಯಾಸ ಮಾಡಲು ಸಹಾಯ ಮಾಡಿದರು.

