ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ ಬೆಲೆ ಏರಿಕೆ ಹಾಗೂ ಭ್ರಷ್ಟಾಚಾರ ಜನತೆಗೆ ನೀಡಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಆರೋಪಿಸಿದರು.

ಶನಿವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.22,954 ಕೋಟಿ ಆದಾಯ ಕೊರತೆಯ ಬಜೆಟ್ ಮಂಡಿಸಿರುವ ರಾಜ್ಯ ಸರ್ಕಾರ, ಆರ್ಥಿಕ ದಿವಾಳಿತನದ ಅಂಚಿಗೆ ತಲುಪಿದೆ. ‘ಆದಾಯ ಕೊರತೆ ಶೂನ್ಯವಾಗಿರಬೇಕು. ಆದರೆ, ಸರಕಾರ ಸಾಲ ಮತ್ತು ಬಡ್ಡಿ ಪಾವತಿಗೂ ಸಾಲ ಮಾಡುವ ಸ್ಥಿತಿಗೆ ಬಂದಿದೆ. ವಿತ್ತೀಯ ಕೊರತೆ ಜಿಎಸ್ಡಿಪಿಯ ಶೇ 3ರ ಮಿತಿಯೊಳಗಿರಬೇಕಿದ್ದು, ಈಗಾಗಲೇ ಶೇ 2.95ಕ್ಕೆ ತಲುಪಿದೆ. ಒಟ್ಟು ಹೊಣೆಗಾರಿಕೆ ಶೇ 25ರ ಒಳಗಿರಬೇಕಾದರೆ, ಅದು ಶೇ 24.94ಕ್ಕೆ ಏರಿದೆ. ಹೊಸ ಸಾಲ ಪಡೆದರೆ ವಿತ್ತೀಯ ಶಿಸ್ತಿನ ಮಾನದಂಡಗಳು ಉಲ್ಲಂಘನೆಯಾಗಲಿವೆ’ ಎಂದರು.
ಕರ್ನಾಟಕ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ. ಆರ್ಥಿಕ ಇಲಾಖೆ ವಿತ್ತಿಯ ನಿರ್ವಹಣಾ ಕಾಯ್ದೆ ನೀಡಿದೆ. ಹೈನುಗಾರಿಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರಕಾರ ಚುನಾವಣೆಗೂ ಮುನ್ನ ಪ್ರೋತ್ಸಾಹ ಧನವನ್ನು 7 ರೂ.ಗೆ ಏರಿಕೆ ಮಾಡುವುದು, ಕ್ಷೀರಕ್ರಾಂತಿ ಕ್ರೆಡಿಟ್ ಕಾರ್ಡ್ ಪ್ರತಿ ಹಾಲು ಉತ್ಪಾದಕರಿಗೆ ಕೊಡುತ್ತೇವೆ. 50 ಸಾವಿರ ರೂ. ಡ್ರಾ ಮಾಡಬಹುದು ಎಂದಿದ್ದರೂ. ಆದರೆ ಅದನ್ನು ಮರೆತು ಬಿಟ್ಟಿದೆ. ಪ್ರತಿಯೊಬ್ಬ ಹಾಲು ಉತ್ಪಾದಕ ಮಹಿಳೆಗೆ ಶೂನ್ಯ ಬಡ್ಡಿ ದರದಲ್ಲಿ ಹಸು ಖರೀದಿ ಮಾಡಲು ಸಾಲ ಕೊಡುವುದಾಗಿ ಹೇಳಿ ಒಬ್ಬ ಮಹಿಳೆಗೂ ಸಹಾಯ ಮಾಡಿಲ್ಲ ಎಂದು ಆರೋಪಿಸಿದರು.
ಹಾಲು ಉತ್ಪಾದಕರಿಗೆ ಹಣ ಬಿಡುಗಡೆ ಮಾಡದೆ ಗ್ರಾಹಕರ ಮೇಲೆ ಹೊರೆ ಹಾಕಲು ಹಾಲಿನ ದರವನ್ನು ಏರಿಸಿ ಪ್ರೋತ್ಸಾಹ ಧನ ಕೊಡುವುದಾಗಿ ಸರಕಾರ ಹೇಳಿಲ್ಲ ಎಂದರು.
700 ಕೋಟಿ ಪ್ರೋತ್ಸಾಹ ಧನ ಕೊಡುವುದು ಬಾಕಿ ಇದೆ. ಮೊದಲು ಅದನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರಕಾರದ ಖಜಾನೆ ಖಾಲಿಯಾಗಿದೆ. ರೈತರ ಹೆಸರು ಹೇಳಿ ಖಜಾನೆ ಭರ್ತಿ ಮಾಡಿಕೊಳ್ಳುತ್ತಿದ್ದಾರೆ. ಸರಕಾರ ತನ್ನ ಖಜಾನೆಯಿಂದ ಪ್ರೋತ್ಸಾಹ ಧನ ಕೊಡಬೇಕು ಎಂದು ಆಗ್ರಹಿಸಿದರು.
