hubbali

ಗಣೇಶೋತ್ಸವ ಶಾಂತಿಯುತ ಆಚರಣೆಗೆ ಸಲಹೆ

Share

ಛೋಟಾ ಮುಂಬಯಿ ಖ್ಯಾತಿಯ ಹುಬ್ಬಳ್ಳಿಯಲ್ಲಿ ಸರ್ವ ಧರ್ಮದವರು ಶಾಂತಿಯುತ ಆಚರಣೆಗೆ ಸಲಹೆಗಳನ್ನ ಸರ್ವ ಸಮಾಜದ ಹಿರಿಯರು ಹಾಗೂ ಅಧಿಕಾರಿಗಳು ನೀಡಿದರು.

ನಗರದ ಆರ್ .ಎನ್ ಶೆಟ್ಟಿ ಕಲ್ಯಾಣ ಮಂಟಪದಲ್ಲಿ ನಡೆದ ಶಾಂತಿ ಸೌಹಾರ್ದತಯುತ ಸಭೆಯಲ್ಲಿ ಸರ್ವ ಧರ್ಮಗಳ ಗಣ್ಯರು ಮಾತನಾಡಿದರು.
ಅಧಿಕ ಮಾಸದ ಹಿನ್ನೆಲೆಯಲ್ಲಿ ಪ್ರಸ್ತುತ ವರ್ಷ 12 ದಿನ ಗಣೇಶೋತ್ಸವ ಆಚರಿಸುವುದು, ಸೆ. 14ಕ್ಕೆ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಸೆ. 25ಕ್ಕೆ ಅದ್ಧೂರಿ ಮೆರವಣಿ ಮೂಲಕ ವಿಸರ್ಜಿಸುವ ಕುರಿತು ಹುಬ್ಬಳ್ಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಹಾಮಂಡಳ ಈಗಾಗಲೇ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಸೆ. 14 ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ, ಸೆ. 18ರಂದು 5ನೇ ದಿನದ ಹಾಗೂ ಸೆ. 22ರಂದು 9ನೇ ದಿನದ ಮೂರ್ತಿಗಳ ವಿಸರ್ಜನೆ ಹಾಗೂ ಸೆ. 25ರಂದು 12ನೇ ದಿನದ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ. ಪ್ರತಿ ವರ್ಷ 11ನೇ ದಿನಕ್ಕೆ ಉತ್ಸವ ಸಂಪನ್ನವಾಗುತ್ತಿತ್ತು. ನಗರದಲ್ಲಿ ಸುಮಾರು 900ಕ್ಕೂ ಹೆಚ್ಚು ಸಾರ್ವಜನಿಕ ಗಣೇಶಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಎಲ್ಲ ಗಣೇಶೋತ್ಸವ ಸಮಿತಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಬೇಕು. ಇದರಿಂದ ಮುಂದಿನ ಪೀಳಿಗೆಗೆ ಹಬ್ಬದ ಸಂಸ್ಕೃತಿ ಮತ್ತು ಪರಂಪರ ಉಳಿದು ಬೆಳಯಬೇಕು ಎಂದರು.
ಹಿಂದು ಮುಸ್ಲಿಮ್ ಸಮುದಾಯದ ಹಿರಿಯರು, ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಭೂಷಣ ಭೂರಸೆ, ಮಹಾನಗರ ಪಾಲಿಕೆ ಕಮೀಷನರ್ ರುದ್ರೇಶ ಘಾಳಿ ಮುಂತಾದವರು ಭಾಗವಹಿಸಿದ್ದರು.

ಸಭೆಯಲ್ಲಿ ಪಿಒಪಿ ಗಣೇಶ ಮೂರ್ತಿ ನಿಷೇಧ, ವಿದ್ಯುತ್‌ ಅವಘಡ, ತ್ಯಾಜ್ಯ ವಿಲೇವಾರಿ, ಡಿಜೆ ಬಳಕೆ, ಪಾರಂಪರಿಕ ವಾದ್ಯ ಕಲಾವಿದರಿಗೆ ಪ್ರೋತ್ಸಾಹ, ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ, ಪಾರ್ಕಿಂಗ್‌ ಸೌಲಭ್ಯ, ಕುಡಿಯುವ ನೀರಿನ ವ್ಯವಸ್ಥೆ, ಗಣೇಶ ವಿಸರ್ಜನೆ ಬಾವಿ ಶುಚಿಗೊಳಿಸುವುದು, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ, ದೇಣಿಗೆ ಸಂಗ್ರಹ, ಪೊಲೀಸ್‌ ಭದ್ರತೆ ಸೇರಿ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

Tags:

error: Content is protected !!