Chikkodi

ಕಬ್ಬಿನ ದರ ವಿಚಾರ: ಪ್ರಭಾಕರ ಕೋರೆ ಹೇಳಿಕೆಗೆ ರಾಜ್ಯ ರೈತ ಸಂಘದ ಅಧ್ಯಕ್ಷ ಚುನ್ನಪ್ಪ ಪೂಜೇರಿ ತಿರಗೇಟು

Share

ಫ್ಯಾಕ್ಟರಿ ಮಾರಿದರೂ ಕಬ್ಬಿಗೆ ₹5,500 ದರ ನೀಡಲು ಸಾಧ್ಯವಿಲ್ಲ” ಎಂಬ ಪ್ರಭಾಕರ ಕೋರೆ ಅವರ ಹೇಳಿಕೆಗೆ ರಾಜ್ಯ ರೈತ ಸಂಘದ ಅಧ್ಯಕ್ಷ ಚುನ್ನಪ್ಪ ಪೂಜೇರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಿರಗೇಟು ನೀಡಿದ್ದಾರೆ.

ಚಿಕ್ಕೋಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಚುನ್ನಪ್ಪ ಪೂಜೇರಿ ಅವರು, ಕಾರ್ಖಾನೆ ಮಾರಾಟ ಮಾಡುವ ಮಾತನ್ನಾಡುವ ಅಗತ್ಯವಿಲ್ಲ. ಎಂ.ಎಸ್.ಪಿ (ಕನಿಷ್ಠ ಬೆಂಬಲ ಬೆಲೆ) ಹಾಗೂ ಇತರ ಲೆಕ್ಕಾಚಾರಗಳ ಪ್ರಕಾರ ರೈತರಿಗೆ ನ್ಯಾಯಯುತ ಬೆಲೆ ಸಿಗಬೇಕಾಗಿದೆ.

ಕರ್ನಾಟಕ ರಾಜ್ಯ ರೈತ ಸಂಘ, ಶಶಿಕಾಂತ್ ಪಡಸಲಗಿ ಹಾಗೂ ರಾಜು ಶೆಟ್ಟಿ ಅವರ ನೇತೃತ್ವದಲ್ಲಿ ಕಬ್ಬು ಬೆಳೆಗಾರರ ಹಿತರಕ್ಷಣೆಗಾಗಿ ಬೃಹತ್ ಹೋರಾಟಗಳನ್ನು ಆಯೋಜಿಸಲಾಗುತ್ತಿದೆ. ಈ ಹೋರಾಟಕ್ಕೆ ಲಕ್ಷಾಂತರ ರೈತರು ಬೆಂಬಲ ನೀಡುತ್ತಿದ್ದಾರೆ.

ದೇಶಾದ್ಯಂತ 550ಕ್ಕೂ ಹೆಚ್ಚು ಹಾಗೂ ರಾಜ್ಯದಲ್ಲಿ 85ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆ ಮಾಲೀಕರಿದ್ದಾರೆ. ಕಾರ್ಖಾನೆ ಮಾಲೀಕರು ರೈತ ವಿರೋಧಿ ನಿಲುವು ತಳೆಯದೆ, ರೈತರ ಹಿತಾಸಕ್ತಿಯನ್ನು ಕಾಪಾಡಲು ಮುಂದಾಗಬೇಕು.

ಸೆಪ್ಟೆಂಬರ್ 29ರಂದು ನಡೆಯಲಿರುವ ರೈತ ಪರ ಹೋರಾಟ ಮತ್ತು ಸಮಾವೇಶಕ್ಕೆ ಎಲ್ಲ ಸಕ್ಕರೆ ಕಾರ್ಖಾನೆ ಮಾಲೀಕರು, ರೈತ ಬಾಂಧವರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬೆಂಬಲ ನೀಡಬೇಕೆಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.

 

Tags:

error: Content is protected !!