ಖಾನಾಪೂರ ತಾಲೂಕಿನ ನಂದಗಡ ಪೊಲೀಸ್ ಠಾಣೆ ವ್ಯಾಪ್ತಿಯ ಗಂದಿಗವಾಡ ಗ್ರಾಮದಲ್ಲಿ ಮುಂಬರುವ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಶಾಂತಿ ಸಭೆ ಜರುಗಿತು. ಜಿಲ್ಲಾಧಿಕಾರಿಗಳ ಮಾರ್ಗಸೂಚಿಯನ್ವಯ ಕಾನೂನು ಪಾಲಿಸಿ ಶಿಸ್ತು ಹಾಗೂ ಶಾಂತಿಯಿಂದ ಹಬ್ಬ ಆಚರಿಸುವಂತೆ ಸ್ಥಳೀಯ ಪೊಲೀಸ್ ಇನ್ಸ್‌ಪೆಕ್ಟರ್ ಕರೆ ನೀಡಿದರು.

ಗಂದಿಗವಾಡ ಗ್ರಾಮದ ಲಕ್ಷ್ಮೀ ಗುಡಿಯಲ್ಲಿ ಆಯೋಜಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ನಂದಗಡ ಪೊಲೀಸ್ ಠಾಣೆಯ ಪಿಐ ರವಿಕುಮಾರ್ ಧರ್ಮಟ್ಟಿ, ಸಾರ್ವಜನಿಕರು ಸಮಾನಮನಸ್ಕರು ಒಂದಾಗಿ ಸರ್ಕಾರದ ಆದೇಶದಂತೆ ನಿಗದಿತ ಪ್ರಕ್ರಿಯೆಯ ಮೂಲಕವೇ ಪರವಾನಿಗೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಹಬ್ಬದ ಸಂದರ್ಭದಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಿ, ಸೌಹಾರ್ದಯುತವಾಗಿ ಹಾಗೂ ಶಾಂತಿಯುತವಾಗಿ ಗಣೇಶೋತ್ಸವವನ್ನು ಆಚರಿಸುವ ಮೂಲಕ ಮಾದರಿಯಾಗಬೇಕು ಎಂದು ಸಲಹೆ ನೀಡಿದರು. ಸಭೆಯಲ್ಲಿ ಗಂದಿಗವಾಡ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹಿರಿಯರು, ಯುವಕರು ಸೇರಿದಂತೆ ಸಾರ್ವಜನಿಕರು ಬಹುಸಂಖ್ಯೆಯಲ್ಲಿ ಪಾಲ್ಗೊಂಡು ಪೊಲೀಸ್ ಅಧಿಕಾರಿಯ ಸೂಚನೆಗಳನ್ನು ಆಲಿಸಿದರು. ಈ ಮಹತ್ವದ ಸಭೆಯಲ್ಲಿ ಹವಾಲ್ದಾರ್ ನೀಲಕಂಠ ಚಂದರಗಿ ಹಾಗೂ ಇಲಾಖೆಯ ಇ Aನಂತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
