Belagavi

ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭಾರತಕ್ಕೆ ಬೆಳ್ಳಿ ತಂದ ಬೆಳಗಾವಿಯ ನಾಗವ್ವ ತೇನಗಿ

Share

ಬ್ಯಾಂಕಾಕ್‌ನ ಥೈಲ್ಯಾಂಡ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಬೆಳಗಾವಿಯ ನಾಗವ್ವ ಶೇಖರ್ ತೇನಗಿ ಅವರು ದ್ವಿತೀಯ ಸ್ಥಾನ ಪಡೆದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಯೋಗ ಗುರುಗಳ ಮಾರ್ಗದರ್ಶನ ಹಾಗೂ ಪರಿವಾರದ ಬೆಂಬಲದಿಂದ ಈ ಸಾಧನೆ ಸಾಧ್ಯವಾಗಿದ್ದು, ಇವರ ಈ ಹೆಮ್ಮೆಯ ಸಾಧನೆಗೆ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಮಹಾಲಕ್ಷ್ಮಿ ನಗರದ ಶ್ರೀ ಮಹಾಲಕ್ಷ್ಮಿ ಪ್ರಭಾವ ಬಿಲ್ಡಿಂಗ್‌ನಲ್ಲಿ ವಾಸವಿರುವ ನಾಗವ್ವ ಶೇಖರ್ ತೇನಗಿ ಅವರು ತಮ್ಮ ಕಠಿಣ ಪರಿಶ್ರಮ ಮತ್ತು ಛಲದಿಂದ ಯೋಗ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ತಮ್ಮ ಪತಿಯ ಪ್ರೋತ್ಸಾಹದಿಂದ ಕೊಚ್ಚಿಯಲ್ಲಿ ಯೋಗ ತರಗತಿಗಳನ್ನು ಆರಂಭಿಸಿ ಎರಡು ವರ್ಷಗಳ ಕಾಲ ಸತತವಾಗಿ ಯೋಗಾಭ್ಯಾಸವನ್ನು ಕಲಿತುಕೊಂಡಿದ್ದ ಇವರಿಗೆ ಅಂಜನಾ ಚಂದ್ರನ್ ಅವರು ಯೋಗ ಗುರುಗಳಾಗಿ ಮಾರ್ಗದರ್ಶನ ನೀಡಿದ್ದಾರೆ. ಗುರುಗಳ ಪ್ರೇರಣೆ ಹಾಗೂ ತಮ್ಮ ಸ್ವಂತ ಶ್ರಮದಿಂದ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಹಂತ ಹಂತವಾಗಿ ಮುನ್ನಡೆದ ಇವರು, ಟಾಪ್ 10 ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಮೂಲಕ ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದರು.

ಬ್ಯಾಂಕಾಕ್‌ನ ಥಾಯ್‌ಲ್ಯಾಂಡ್‌ನಲ್ಲಿ ಜರುಗಿದ ಪ್ರತಿಷ್ಠಿತ ಅಂತರರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಅತ್ಯುನ್ನತ ಪ್ರದರ್ಶನ ನೀಡಿದ ನಾಗವ್ವ ಶೇಖರ್ ತೇನಗಿ ಅವರು ದ್ವಿತೀಯ ಸ್ಥಾನವನ್ನು ಪಡೆದುಕೊಂಡು ಬೆಳ್ಳಿ ಪದಕ ಹಾಗೂ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ ವಿಜೇತರಾಗಿರುವುದು ತಮಗೆ ಅತ್ಯಂತ ಖುಷಿ ಮತ್ತು ಹೆಮ್ಮೆಯ ವಿಷಯವಾಗಿದ್ದು, ಇದಕ್ಕೆ ತಮ್ಮ ಗುರುಗಳ ಆಶೀರ್ವಾದ, ಪತಿ ಹಾಗೂ ಮಕ್ಕಳ ಸಂಪೂರ್ಣ ಬೆಂಬಲವೇ ಕಾರಣ ಎಂದು ಅವರು ಕೃತಜ್ಞತೆಯಿಂದ ಸ್ಮರಿಸಿಕೊಂಡಿದ್ದಾರೆ.

Tags:

error: Content is protected !!