ಬೆಳಗಾವಿಯ ಕಾಡಾ ಕಚೇರಿಯ ಎದುರು ಲೋಕಸಭಾ ಸದಸ್ಯರ ಅನುದಾನದಲ್ಲಿ ನಿರ್ಮಿಸಿದ ನೂತನ ಬಸ್ ತಂಗುದಾಣವನ್ನು ಸಂಸದ ಜಗದೀಶ್ ಶೆಟ್ಟರ್ ಅವರು ಲೋಕಾರ್ಪಣೆಗೊಳಿಸಿದರು.


ಗುರುವಾರಂದು 25 ವರ್ಷ ಸಾರ್ವಜನಿಕ ಸೇವೆ ಸಲ್ಲಿಸಿದ ಪಿಎಂ ಮೋದಿ ಅವರ 75ನೇ ಹುಟ್ಟುಹಬ್ಬ ನಡೆಯುತ್ತಿದೆ. ಈ ಹಿನ್ನೆಲೆ ಮೊದಲಿಗೆ ಸಂಸದ ಜಗದೀಶ್ ಶೆಟ್ಟರ್ ಸೇರಿದಂತೆ ಪ್ರಮುಖರು ಬೆಳಗಾವಿ ನಗರದ ರಾಣಿ ಚೆನ್ನಮ್ಮ ವೃತ್ತದಲ್ಲಿರುವ ಶ್ರೀ ಗಣೇಶ ಮಂದಿರದಲ್ಲಿ ಪೂಜೆ ಸಲ್ಲಿಸಿ ಪಿಎಂ ಮೋದಿ ಅವರಿಗೆ ಆರ್ಯುರಾರೋಗ್ಯ ಸಿಗಲೆಂದು ಪ್ರಾರ್ಥಿಸಿದರು.
ನಂತರ ಸಂದರ್ಭದಲ್ಲಿ ಬೆಳಗಾವಿಯ ಕಾಡಾ ಕಚೇರಿಯ ಎದುರು ಲೋಕಸಭಾ ಸದಸ್ಯರ ಅನುದಾನದಲ್ಲಿ ನಿರ್ಮಿಸಿದ ನೂತನ ಬಸ್ ತಂಗುದಾಣವನ್ನು ಸಂಸದ ಜಗದೀಶ್ ಶೆಟ್ಟರ್ ಅವರು ಲೋಕಾರ್ಪಣೆಗೊಳಿಸಿದರು.

ಈ ವೇಳೆ ಮಾತನಾಡಿದರು ಸಂಸದ ಜಗದೀಶ್ ಶೆಟ್ಟರ್ ಅವರು 25 ವರ್ಷ ಸಾರ್ವಜನಿಕ ಸೇವೆ ಸಲ್ಲಿಸಿದ ಪಿಎಂ ಮೋದಿ ಅವರ 75ನೇ ವರ್ಷದ ಹುಟ್ಟುಹಬ್ಬ ನಡೆಯುತ್ತಿದೆ. ಈ ಹಿನ್ನೆಲೆ 1 ತಿಂಗಳ ಕಾಲ ಸಾಮಾಜೀಕ ಚಟುವಟಿಕೆಗಳ ಮೂಲಕ ಬಿಜೆಪಿ ಸಂಪೂರ್ಣ ದೇಶದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮೋದಿಜೀ ಅವರ ಸಾಧನೆಯನ್ನು ಈ ಮೂಲಕ ಇಡೀ ವಿಶ್ವಕ್ಕೆ ತಿಳಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಬೆಳಗಾವಿಯಲ್ಲಿ ಇಂದು ಲೋಕಸಭಾ ಸದಸ್ಯರ ಅನುದಾನದಲ್ಲಿ ಬಸ್ ಶೆಲ್ಟರ್ ಲೋಕಾರ್ಪಣೆಗೊಳಿಸಲಾಗಿದೆ. ಅಲ್ಲದೇ ಕೇಂದ್ರದ ಯೋಜನೆಗಳಡಿ ಬಿಮ್ಸ್’ನಲ್ಲಿ ವಿಕಲಚೇತನರಿಗೆ ಸಾಧನೆ ಸಲಕರಣೆಗಳನ್ನು ವಿತರಿಸಲಾಗುತ್ತಿದೆ. ಸಾಯಂಕಾಲ ಬೆಳಗಾವಿಯ ರೇಲ್ವೆ ನಿಲ್ದಾಣದಲ್ಲಿ ದೀಪೋತ್ಸವ ನಡೆಯಲಿದೆ ಎಂದರು.
ಈ ವೇಳೆ ಮಾಜಿ ಸಂಸದೆ ಮಂಗಲ್ ಅಂಗಡಿ, ಮಾಜಿ ಶಾಸಕರಾದ ಅನೀಲ ಬೆನಕೆ, ಸಂಜಯ್ ಪಾಟೀಲ್, ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್, ಕಿರಣ್ ಜಾಧವ್, ನಗರಸೇವಕರು ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.
