ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿಶೇಷ ಪ್ರಯತ್ನದಲ್ಲಿ ಸಾರಥಿ ನಗರದ ಪೊಲೀಸ್ ಕಾಲೋನಿಯಲ್ಲಿ 1 ಕೋಟಿ 25 ಲಕ್ಷ ರೂ. ಅನುದಾನದಲ್ಲಿ ಪ್ಲೆವರ್ ಹಾಗೂ ಚರಂಡಿ ಕಾಮಗಾರಿಗೆ ಕಾಡಾ ಅಧ್ಯಕ್ಷ ಯುವರಾಜ ಕದಂ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಕಾಡಾ ಅಧ್ಯಕ್ಷ ಯುವರಾಜ ಕದಂ, ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಅಪಾರವಾದ ಕಾಳಜಿ ಹೊಂದಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಕ್ಷೇತ್ರದ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ. ಸರಕಾರದಿಂದ ಅನುದಾನ ತೆಗೆದಯಕೊಂಡು ಬಂದು ಗ್ರಾಮೀಣ ಮತಕ್ಷೇತ್ರದ ಇತಿಹಾಸವನ್ನೇ ಬದಲಾವಣೆ ಮಾಡಿದ್ದಾರೆ ಎಂದರು.

ಸ್ಥಳೀಯ ರಹವಾಸಿ ಸಂಗೀತಾ ಮಾತನಾಡಿ, ಕಳೆದ ಕೆಲ ವರ್ಷಗಳಿಂದ ಪೊಲೀಸ್ ಕಾಲೋನಿಯ ರಸ್ತೆ ಹಾಗೂ ಒಳಚರಂಡಿ ಸುಧಾರಣೆಯಾಗಬೇಕಿತ್ತು. ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿಶೇಷ ಪ್ರಯತ್ನದಿಂದ ಕಾಮಗಾರಿ ಆರಂಭವಾಗಿದೆ. ಜನರು ಕಾಮಗಾರಿಗೆ ಸಹಕಾರ ಕೊಡಬೇಕು ಎಂದರು.
ಪಾಲಿಕೆ ನಾಮನಿರ್ದೇಶಿತ ಸದಸ್ಯ ಮುಸ್ತಾಕ ಮುಲ್ಲಾ, ಬುಡಾ ಎಇಇ ಮುಂಜುಶ್ರೀ, ಇಶಾಂತ ರೆಡ್ಡಿ, ಸಂಗೀತಾ ರೆಡ್ಡಿ, ಬಿ.ಎ.ಮೆಳವಂಕಿ, ಜಿ.ಎನ್.ಕದಂ, ವೈ.ಎಲ್. ಬ್ಯಾಕೂಡ, ಎಸ್.ಬಿ.ಮಂಗಾವತಿ, ಆರ್.ಡಿ.ಅಂಗಕಲಗಿ, ಎಸ್.ಬಿ.ಕಾಂಬಳೆ, ಟಿ.ಎಫ್. ತಳವಾರ, ಸೋಮನಾಥ ಹುಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
