Belagavi

40 ಮೊಬೈಲ್ ಸೇರಿ 11.68 ಲಕ್ಷ ಮೌಲ್ಯದ ವಸ್ತುಗಳು ವಶ! ಕಟಕೋಳ ಪೊಲೀಸರ ಭರ್ಜರಿ ಕಾರ್ಯಾಚರಣೆ.

Share

ಬೆಳಗಾವಿ ಜಿಲ್ಲೆಯಲ್ಲಿ ದರೋಡೆಕೋರರು ಹಾಗೂ ಕಳ್ಳರ ವಿರುದ್ಧ ಪೊಲೀಸರು ಬಲೆ ಬೀಸಿದ್ದು, ಕುಟಕೋಳ ಠಾಣಾ ಪೊಲೀಸರು ದೊಡ್ಡ ಮೊಬೈಲ್ ಕಳ್ಳತನ ಜಾಲವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳ್ಳರ ಹೆಡೆಮುರಿ ಕಟ್ಟಿರುವ ಖಾಕಿ ಪಡೆ, ಬರೋಬ್ಬರಿ 40 ಮೊಬೈಲ್‌ಗಳು ಹಾಗೂ ಕಾರುಗಳನ್ನು ಜಪ್ತಿ ಮಾಡಿದೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಟಕೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಭರ್ಜರಿ ಕಾರ್ಯಾಚರಣೆ ನಡೆಸಿ 8 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ, ವಿವಿಧ ಕಂಪನಿಗಳ 4 ಲಕ್ಷ 94 ಸಾವಿರದ 200 ರೂಪಾಯಿ ಮೌಲ್ಯದ 40 ಮೊಬೈಲ್ ಫೋನ್‌ಗಳು, 1 ಲಕ್ಷ 34 ಸಾವಿರದ 200 ರೂಪಾಯಿ ಮೌಲ್ಯದ ಇತರ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಲ 5 ಲಕ್ಷ 40 ಸಾವಿರ ಮೌಲ್ಯದ ಎರಡು ಕಾರುಗಳನ್ನು ಒಳಗೊಂಡಂತೆ ಒಟ್ಟು 11 ಲಕ್ಷ 68 ಸಾವಿರದ 400 ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Tags:

error: Content is protected !!