ಖಾನಾಪೂರದ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಂಗ ಇಲಾಖೆಯ ಮತ್ತು ಲೋಕೋಪಯೋಗಿ ಇಲಾಖೆಯ ಸಹಯೋಗದಲ್ಲಿ ನೂತನವಾಗಿ ನಿರ್ಮಿಸಿದ ನ್ಯಾಯಾಧೀಶರ ವಸತಿಗೃಹವನ್ನು ಬೆಳಗಾವಿ ಜಿಲ್ಲಾ ಪ್ರಧಾನ ಹಾಗೂ ಸೆಶನ್ ನ್ಯಾಯಾಧೀಶ ನ್ಯಾ ಮಂಜುನಾಥ ನಾಯಕ ಲೋಕಾರ್ಪಣೆಗೊಳಿಸಿದರು


ತದನಂತರದಲ್ಲಿ ನ್ಯಾಯಾಲಯದ ಸಭಾಗೃಹದಲ್ಲಿ ನಡೆದ ಸರಳ ಸಮಾರಂಭದಲ್ಲಿ ವಕೀಲರ ಸಂಘದಿಂದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಕಳೆದ ಎರಡು ವರ್ಷಗಳಿಂದ ನಡೆಯುತ್ತಿದ್ದ ಹಿರಿಯ ದಿವಾಣಿ ನ್ಯಾಯಾಧೀಶರ ವಸತಿಗೃಹದ ಕಾಮಗಾರಿ ಕಳೆದ ಶ್ರಾವಣ ಮಾಸದಲ್ಲಿ ಪೂರ್ಣಗೊಂಡಿತು ಆಗ ನಿಗದಿಯಾಗಿದ್ದ ನೂತನ ಕಟ್ಟಡ ಉದ್ಘಾಟನೆಗೆ ಬೆಳಗಾವಿ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರು ಆಗಮಿಸಬೇಕಿತ್ತು ಆದರೆ ಅನಿವಾರ್ಯ ಕಾರಣದಿಂದ ಈ ಕಾರ್ಯಕ್ರಮ ನಡೆದಿರಲಿಲ್ಲ ಎಂದರು ನಾವು ಕಳೆದ ಹತ್ತು ತಿಂಗಳಿನಿಂದ ಜಿಲ್ಲಾ ಪ್ರಧಾನ ನ್ಯಾಯಾಧೀಶ ಹುದ್ದೆಯಲಿದ್ದು ತಮ್ಮ ಅಧೀನದಲ್ಲಿರುವ ಜಿಲ್ಲೆಯ 17 ನ್ಯಾಯಾಲಯ ಸಂಕೀರ್ಣಗಳ ಕಾರ್ಯ ಕಲಾಪಗಳನ್ನು ಗಮನಿಸಿದಾಗ ಜಿಲ್ಲೆಯ ವಿವಿಧ ಭಾಗಗಳ ವಕೀಲರು ತಮ್ಮನ್ನು ಭೇಟಿಯಾಗಿ ಅವರ ಭಾಗದ ನ್ಯಾಯಾಧೀಶರ ಬಗ್ಗೆ, ನ್ಯಾಯಾಲಯದ ಸಿಬ್ಬಂದಿ ಬಗ್ಗೆ ಆಕ್ಷೇಪಣೆ ತಕರಾರು ವ್ಯಕ್ತ ಪಡಿಸಿದ್ದು ಗಮನಿಸಿದ್ದು ಆದರೆ ಖಾನಾಪೂರ ವಕೀಲರು ಈ ವಿಷಯದಲ್ಲಿ ತಮ್ಮನ್ನು ಭೇಟಿಯಾಗಿ ನ್ಯಾಯಾಲಯದ ಕಲಾಪಗಳ ಬಗ್ಗೆ ಯಾವುದೇ ದೂರು ಸಲಿಸಿಲ್ಲ ಇದರಿಂದ ಖಾನಾಪೂರದಲ್ಲಿ ನ್ಯಾಯಾಧೀಶರು ಮತ್ತು ವಕೀಲರು ಪರಸ್ಪರ ಸಹಭಾಗಿತ್ವದಿಂದ ಜನಸಾಮಾನ್ಯರಿಗೆ ನ್ಯಾಯದಾನ ಮಾಡುವ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ ಎಂಬುದು ತಿಳಿದುಬರುತ್ತದೆ ಇದು ನಿಜಕ್ಕೂ ಸಂತೋಷದ ಸಂಗತಿ ಎಂದು ಅವರು ಅಭಿಪ್ರಾಯಪಟ್ಟರು

ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ನ್ಯಾ.ಚಂದ್ರಶೇಖರ್ ತಳವಾರ,ನ್ಯಾ.ದಾನಪ್ಪ,ನ್ಯಾ.ನಾ ಆಳವಂಡಿ,ಖಾನಾಪೂರ ಬಾರ್ ಅಸೋಸಿಯೇಶನ್ ಅಧ್ಯಕ್ಷ ನ್ಯಾಯವಾದಿ ಈಶ್ವರ ಘಾಡಿ, ನ್ಯಾಯವಾದಿ ಸಾಧೀಕ ನಂದಗಡಿ,ಮದನ ದೇಶಪಾಂಡೆ, ಆರ್ ಎಸ್ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ
