ಬಿಡದಿ ಟೌನ್ ಶಿಪ್ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತೆ ಪ್ರತಿಕ್ರಿಯಿಸಿದ್ದಾರೆ. ‘ನನಗೆ ಯಾವ ಪ್ರೆಸ್ಟೀಜ್ ಇಲ್ಲ. ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಏನು ಮಾಡಿದ್ರು, ಅದನ್ನು ಮುಂದುವರಿಸುತ್ತಿದ್ದೇನೆ ಅಷ್ಟೇ ’ ಎಂದು ಹೇಳಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಾರೂ ಕೂಡ ರಸ್ತೆ ತಡೆಮಾಡಬಾರದು. ರಸ್ತೆ ಯಾಕೆ ತಡೆಮಾಡಬೇಕು? ರಸ್ತೆ ತಡೆಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದರು.ಯಾವ ರೈತರನ್ನೂ ಒತ್ತಾಯ ಮಾಡಿಲ್ಲ. ಇಷ್ಟವಿದ್ದವರು ಜಮೀನು ಕೊಡುತ್ತಾರೆ. ಇಲ್ಲದಿದ್ದರೆ ಕೊಡೋದು ಬೇಡ ಎಂದರು. ನೀವು ಯಾರೂ ಜಮೀನು ಕೊಡಬೇಡಿ ಅಂತಾನೇ ಹೇಳ್ತಿದ್ದೀನಿಲ್ಲಾ? ಇಷ್ಟವಿದ್ದವರು, ಪಾಪ ಬದುಕಬೇ ಕಾದವನು, ದುಡ್ಡು ಬೇಕಾದವನು ಮಾರಾಟ ಮಾಡ್ತಾನೆ. ಬೇಡ ಅಂದವರು ಬಿಡ್ತಾರೆ. ನನಗೇನು ಪ್ರೆಸ್ಟೀಜ್ ಇಲ್ಲ. ಕುಮಾರಸ್ವಾಮಿ ಏನು ಮಾಡಿದ್ರೊ ಅದನ್ನು ಮುಂದುವರಿಸುತ್ತಿದ್ದೇವೆ ಅಷ್ಟೇ ’ ಎಂದರು.
ಗದಗ ಜಿಲ್ಲೆಯಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎಇಇ) ಒಬ್ಬರು ಕಾಣೆಯಾಗಿರುವ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕಾಣೆಯಾದ ಎಇಇ ವಿರುದ್ಧ ಸ್ಥಳೀಯ ಬಿಜೆಪಿ ಶಾಸಕರೊಬ್ಬರು ಸಂಪೂರ್ಣ ತನಿಖೆಗೆ ಆಗ್ರಹಿಸಿದ್ದಾರೆ ಎಂದು ಶಿವಕುಮಾರ್ ತಿಳಿಸಿದ್ದಾರೆ. ಅಧಿಕಾರಿಯು ಕಾನೂನುಬದ್ಧವಾಗಿ ಕೆಲಸ ಮಾಡುತ್ತಿರಲಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಸೈಟ್ಗಳಿಗೆ ಭೇಟಿ ನೀಡದಿರುವುದು ಹಾಗೂ ಕಾಮಗಾರಿಗಳ ವಿಡಿಯೋ ದಾಖಲಾತಿ ಮಾಡದಿರುವಂತಹ ಕರ್ತವ್ಯ ಲೋಪಗಳ ಆರೋಪಗಳು ಇವರ ಮೇಲಿವೆ. ಈ ಬಗ್ಗೆ ನಾಯಕ್ ಎಂಬುವರು ಎರಡು-ಮೂರು ಬಾರಿ ದೂರು ನೀಡಿದ್ದರು.ಈ ಹಿಂದೆ ಕೂಡ ಅಧಿಕಾರಿ 15 ದಿನಗಳ ಕಾಲ ತಪ್ಪಿಸಿಕೊಂಡು ಹೋಗಿ ನಂತರ ಪತ್ತೆಯಾಗಿದ್ದನು ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಪ್ರಸ್ತುತ ಹೈದರಾಬಾದ್ ಮತ್ತು ಅಜ್ಮೀರ್ ಸುತ್ತಮುತ್ತ ಆತನ ಚಲನವಲವನ್ನು ಪತ್ತೆಹಚ್ಚಲಾಗಿದೆ. ಆತನನ್ನು ವಾಪಸ್ ಕರೆತಂದು ಸಂಪೂರ್ಣ ತನಿಖೆಗೆ ಒಳಪಡಿಸಲಾಗುವುದು ಎಂದು ಶಿವಕುಮಾರ್ ತಿಳಿಸಿದ್ದಾರೆ. ಕಾಮಗಾರಿಗಳಲ್ಲಿ ಪಾರದರ್ಶಕತೆ ಕಾಪಾಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
