ಧಾರವಾಡದಲ್ಲಿ ಐದನೇ ದಿನದ ಸಾರ್ವಜನಿಕ ಗಣೇಶ ಮೂರ್ತಿಯನ್ನು ಅದ್ದೂರಿಯಾಗಿ ವಿಸರ್ಜನೆ ಮಾಡಲಾಯಿತು. ಸರದಿ ಸಾಲಿನಲ್ಲಿ ವಿಘ್ನ ನಿವಾರಕನ ಮೂರ್ತಿಗಳ ಮೆರವಣಿಗೆ ನಡೆದಿದ್ದು, ಪ್ರತಿ ಮೂರ್ತಿ ಮುಂಭಾಗದಲ್ಲಿ ಡಿಜೆ ಸದ್ದು ಜೋರಾಗಿತ್ತು. ಯುವ ಸಮುದಾಯ ಡಿಜೆ ಹಾಡಿಗೆ ಸಖತ್ ಸ್ಟೆಪ್ ಹಾಕಿ ಗೌರಿ ಪುತ್ರನ ಮೆರವಣಿಗೆಯಲ್ಲಿ ಭಾಗಿಯಾಗಿ ಖುಷಿ ಪಟ್ಟರು.


ಹೌದು, ಧಾರವಾಡ ಹಾಗೂ ನವನಗರದ ವಿವಿಧ ಗಲ್ಲಿಗಳಲ್ಲಿ ಭಕ್ತಿಭಾವದಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಮಂಡಳಿಗಳು, ಐದು ದಿನಗಳ ಕಾಲ ವಿಶೇಷ ಪೂಜೆ ನೆರವೇರಿಸುವ ಮೂಲಕ ವಿಘ್ನ ನಿವಾರಕನ ಕೃಪೆಗೆ ಪಾತ್ರರಾದರು. ಜತೆಗೆ ಕೆಲವು ಮೂರ್ತಿಗಳನ್ನು ಗಣೇಶ ಮೂರ್ತಿ ಪ್ರತಿಷ್ಠಾನ ಮಂಡಳಿಗಳು ಶುಕ್ರವಾರ ಮಧ್ಯಾಹ್ನವೇ ಮೂರ್ತಿ ಮೆರವಣಿಗೆಗೆ ಮುಂದಾಗಿ, ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಬಳಿಕ ತಡ ಸಂಜೆ ವೇಳೆಗೆ ಮುಖ್ಯ ರಸ್ತೆಗೆ ಆಗಮಿಸಿದ ಮೂರ್ತಿಗಳು ಸರದಿ ಸಾಲಿನಲ್ಲಿ ಸಾಗಿದ್ದು, ನೋಡುಗರ ಗಮನ ಸೆಳೆದವು. ಪ್ರತಿ ಮೂರ್ತಿಗಳ ಮುಂಭಾಗದಲ್ಲಿ ಡಿಜೆ ಸದ್ದು ಜೋರಾಗಿದ್ದು, ಯುವ ಸಮುದಾಯ ಮೆರವಣಿಗೆಯ ಉದ್ದಕ್ಕೂ ಸಖತ್ ಸ್ಟೆಪ್ ಹಾಕಿ ಸಂತಸಗೊಂಡರು. ಇನ್ನೂ ಮೂರ್ತಿ ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ರಾತ್ರಿ ಹತ್ತು ಗಂಟೆಯಾಗುತ್ತಿದ್ದಂತೆ ಮೂರ್ತಿಗಳ ಮುಂಭಾಗದ ಡಿಜೆಗಳು ಬಂದ್ ಆಗಿದ್ದವು. ಕೆಲವು ಡಿಜೆಗಳನ್ನು ಪೊಲೀಸರು ಬಂದ್ ಮಾಡಿಸಿದರೆ, ಇನ್ನು ಕೆಲವು ಡಿಜೆ ಆಪರೇಟರ್ ಹಾಗೂ ಗಣೇಶ ಮಂಡಳಿಗಳು ಸ್ವತಃ ಪ್ರೇರಿತರಾಗಿ ಸಿಸ್ಟಮ್ ಬಂದ್ ಮಾಡಿ ಮೂರ್ತಿ ವಿಸರ್ಜನೆ ನೆರವೇರಿಸಿದರು.
