Vijaypura

ಹಿಂದುಳಿದ ವರ್ಗಗಳ ಇಲಾಖೆಗೆ ನೂತನ ಅಧಿಕಾರಿಯಾಗಿ ಶಶಿಧರ್ ಕುಂಟೋಜಿ ಅಧಿಕಾರ ಸ್ವೀಕಾರ

Share

ಬಸವನ ಬಾಗೇವಾಡಿ: ಶಶಿಧರ್ ಕುಂಟೋಜಿ ಅಧಿಕಾರ ಸ್ವೀಕಾರ
ಹಿಂದುಳಿದ ವರ್ಗಗಳ ಇಲಾಖೆಗೆ ನೂತನ ಅಧಿಕಾರಿ ರಂಗಪ್ರವೇಶ
ವಿದ್ಯಾರ್ಥಿನಿಲಯಗಳ ಸಮಸ್ಯೆ ಪರಿಹಾರಕ್ಕೆ ನೂತನ ಅಧಿಕಾರಿ ಅಭಯ
ಸರ್ಕಾರದ ಸೌಲಭ್ಯ ಅರ್ಹರಿಗೆ ತಲುಪಿಸಲು ಮೊದಲ ಆದ್ಯತೆ

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಹಿಂದುಳಿದ ವರ್ಗಗಳ ಇಲಾಖೆಗೆ ನೂತನ ಅಧಿಕಾರಿಯಾಗಿ ಶಶಿಧರ್ ಸಿ. ಕುಂಟೋಜಿ ಅವರು ಅಧಿಕಾರ ಸ್ವೀಕರಿಸಿದರು.

ಬಳಿಕ ಮಾತನಾಡಿದ ಅವರು, ಇಲಾಖೆಯ ವ್ಯಾಪ್ತಿಯ ವಿದ್ಯಾರ್ಥಿಗಳು ಹಾಗೂ ವಸತಿ ನಿಲಯಗಳ ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕಾರ್ಯನಿರ್ವಹಿಸಲಾಗುವುದು. ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುವಂತೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿ ಹಾಗೂ ಸ್ಥಳೀಯ ಮುಖಂಡರು ಶಶಿಧರ್ ಸಿ. ಕುಂಟೋಜಿ ಅವರನ್ನು ಸನ್ಮಾನಿಸಿ ಆತ್ಮೀಯವಾಗಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಡಿ.ಎಸ್. ಪೂಜಾರಿ, ರವಿ ಬಿರಾದಾರ, ಸಿ.ಎಸ್. ಪಾಟೀಲ್, ಸಿದ್ದರಾಮ ಕುರುಬರ, ಪಿ.ವಿ. ಬಡಿಗೇರ್, ಬಿ.ಆರ್. ಹಳ್ಳಿ, ಕವಿತಾ ತಾವರಕೆಡ, ಸುಜಾತ ಲಮಾಣಿ ಸೇರಿದಂತೆ ಇಲಾಖೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

 

Tags:

error: Content is protected !!