ಬೀಡಿ ಗ್ರಾಮಕ್ಕೆ ಸೀಮಿಮಠದ ಶ್ರೀಗಳ ಆಗಮನ
ಪಾಲಾಕ್ಷ ಶಿವಯೋಗಿ ಸ್ವಾಮೀಜಿ ದರ್ಶನ ಪಡೆದ ಶಾಸಕ
ಪ್ರತಿಯೊಬ್ಬರ ಮೇಲೂ ಶ್ರೀಗಳ ಕೃಪೆಯಿರಲಿ: ಹಲಗೇಕರ
ಸ್ವಾಮೀಜಿ ದರ್ಶನ ಪಡೆಯಲು ಮುಖಂಡರ ಉಪಸ್ಥಿತಿ

ಖಾನಾಪೂರ ತಾಲೂಕಿನ ಬೀಡಿ ಗ್ರಾಮಕ್ಕೆ ಕಾದರವಳ್ಳಿ ಸೀಮಿಮಠದ ಪೂಜ್ಯ ಶ್ರೀ ಶ್ರೀ ಪಾಲಾಕ್ಷ ಶಿವಯೋಗಿ ಸ್ವಾಮೀಜಿಯವರು ಆಗಮಿಸಿದ್ದರು.
ಈ ಸಂದರ್ಭದಲ್ಲಿ ಶಾಸಕ ವಿಠ್ಠಲ ಹಲಗೇಕರ ಅವರು ಪೂಜ್ಯ ಸ್ವಾಮೀಜಿಯವರ ದರ್ಶನ ಪಡೆದು, ದಿವ್ಯ ಆಶೀರ್ವಾದವನ್ನು ಸ್ವೀಕರಿಸಿದರು. ಸ್ವಾಮೀಜಿಯವರ ಪಾವನ ಸಾನ್ನಿಧ್ಯ ಹಾಗೂ ಮಾರ್ಗದರ್ಶನದ ಕೃಪಾಶೀರ್ವಾದ ಪಡೆದ ಶಾಸಕ ವಿಠ್ಠಲ ಹಲಗೇಕರ ಅವರು, ಪ್ರತಿಯೊಬ್ಬರ ಮೇಲೂ ಸದಾ ಶ್ರೀಗಳ ಆಶೀರ್ವಾದ ಇರಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಮಲ್ಲಪ್ಪ ಮಾರಿಹಾಳ, ಧನಶ್ರೀ ಸರದೇಸಾಯಿ ಜಾಂಬೋಟಕರ್, ಶಿವು ಬಾಗವಾಡಕರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
