ಖಾನಾಪುರ ತಾಲ್ಲೂಕಿನ ಇದ್ದಲಹೊಂಡ-ಗರ್ಲಗುಂಜಿ ರಸ್ತೆಯಲ್ಲಿ ಬೃಹತ್ ಗಾತ್ರದ ಗುಂಡಿಗಳು ಬಿದ್ದಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ. ಗಣೇಶ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ರಸ್ತೆಯನ್ನು ಕೂಡಲೇ ದುರಸ್ತಿಪಡಿಸುವಂತೆ ಆಗ್ರಹ ಕೇಳಿಬಂದಿದೆ.
ಇದ್ದಲಹೊಂಡನಿಂದ ಗರ್ಲಗುಂಜಿ ಗ್ರಾಮದ ಹದ್ದಿಯವರೆಗೆ ರಸ್ತೆಯುದ್ದಕ್ಕೂ ಜೀವ ಭಯ ಹುಟ್ಟಿಸುವಂತಹ ದೊಡ್ಡ ಖಡ್ಡೆಗಳು ನಿರ್ಮಾಣವಾಗಿವೆ. ಈ ಮಾರ್ಗದಲ್ಲಿ ಸಾಗುವ ಭಾರಿ ವಾಹನಗಳು ಹಾಗೂ ಇಟ್ಟಿಗೆ ಸಾಗಣೆ ವಾಹನಗಳಿಂದಾಗಿ ರಸ್ತೆ ಸಂಪೂರ್ಣ ಹದೆಗೆಟ್ಟಿದ್ದು, ಮಳೆನೀರು ನಿಂತು ಎರಡು ಅಡಿಗಳಷ್ಟು ಆಳದ ಗುಂಡಿಗಳು ಸೃಷ್ಟಿಯಾಗಿವೆ. ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಜೀವ ಮುಠ್ಠಿನಲ್ಲಿಡಿದು ಪ್ರಯಾಣಿಸುವ ಅನಿವಾರ್ಯತೆ ಎದುರಾಗಿದೆ. ಗಣೇಶ ಚತುರ್ಥಿ ಹಬ್ಬದ ಸಂಭ್ರಮದಲ್ಲಿರುವ ಜನರಿಗೆ ಮತ್ತು ಊರಿಗೆ ಆಗಮಿಸುವ ಅತಿಥಿಗಳಿಗೆ ಈ ರಸ್ತೆಯ ಗುಂಡಿಮಯ ಪ್ರಯಾಗ ಕಿರಿದಾದ ತೊಂದರೆಯಾಗಿದ್ದು, ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳು ಕೂಡಲೇ ಇತ್ತ ಗಮನಹರಿಸಿ ರಸ್ತೆ ದುರಸ್ಥಿಗೆ ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಲಿದೆ ಎಂದು ಎಚ್ಚರಿಸಲಾಗಿದೆ.

