ಛೋಟಾ ಮುಂಬೈ ಹುಬ್ಬಳ್ಳಿಯಲ್ಲಿ ಹಾಡಹಗಲೇ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಭೀಕರ ಘಟನೆಯೊಂದು ನಡೆದಿದೆ.

ಹೌದು, ನಗರದ ಲಿಂಗರಾಜ ನಗರ ಬನಶಂಕರಿ ಬಡಾವಣೆ ಬಳಿ ನಡು ರಸ್ತೆಯಲ್ಲೇ ವ್ಯಕ್ತಿಯೊಬ್ಬರನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಜನರು ಇರುವ ಸ್ಥಳದಲ್ಲೇ ಈ ಕೊಲೆ ನಡೆದಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಕೊಲೆಯಾದ ವ್ಯಕ್ತಿ ಯಾರು, ಕೊಲೆ ಮಾಡಿದ್ದು ಯಾರು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.
