ಬೆಳಗಾವಿಯ ಶಾಹು ನಗರದ ಮುಖ್ಯ 80 ಅತಿ ಅಡಿ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿಗೆ ಸಂಬಂಧಿಸಿದಂತೆ ಉಂಟಾಗಿದ್ದ ಬಿಕ್ಕಟ್ಟು ಕೊನೆಗೂ ಬಗೆಹರಿದಿದೆ. ಸ್ಥಳೀಯ ನಿವಾಸಿಗಳ ತೀವ್ರ ಪ್ರತಿಭಟನೆಯ ನಂತರ, ಸಮಾಜ ಸೇವಕ ಪ್ರವೀಣ್ ಪಾಟೀಲ್ ಅವರು ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಪರಿಹರಿಸಿದ್ದು, ಪ್ರಸ್ತುತ ಈ ಪ್ರದೇಶದಲ್ಲಿ ನಿಂತುಹೋಗಿದ್ದ ಕಾಮಗಾರಿ ಮತ್ತೆ ಆರಂಭಗೊಂಡಿದೆ.


ಬೆಳಗಾವಿಯ ಶಾಹು ನಗರದ ವಿಠಲಾಯಿ ಗಲ್ಲಿ ಕಾರ್ನರ್ ಬಳಿ ನಡೆಯುತ್ತಿದ್ದ ಒಳಚರಂಡಿ ಕಾಮಗಾರಿಯನ್ನು ಪ್ಲಾಟ್ ಮಾಲೀಕರೊಬ್ಬರು ತಮ್ಮ ಜಾಗದಿಂದ ಒಳಚರಂಡಿ ಹೋಗುತ್ತದೆ ಎಂದು ತಡೆದಿದ್ದರಿಂದ ರಸ್ತೆ ಬಂದಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿತ್ತು. ಈ ಕಾರಣದಿಂದ ಆಕ್ರೋಶಗೊಂಡ ನಿವಾಸಿಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.
ಸುಮಾರು ೩೦ ವರ್ಷಗಳಿಂದ ಚರಂಡಿ ಇತ್ತು. ಈಗ ಅದನ್ನು ಒಮ್ಮೆಲೇ ಬಂದ್ ಮಾಡಿದ್ದೂ ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ಪ್ಲಾಟ್ ಮಾಲೀಕರು ಅನುಸರಿಸುತ್ತಿರುವ ನೀತಿಗೆ ತೀವ್ರ ವಿರೋಧ ವ್ಯಕ್ತಪಡಿಸಲಾಯಿತು.
ವಿಷಯ ತಿಳಿದ ತಕ್ಷಣ ಮಾಜಿ ಉಪಮೇಯರ್ ರೇಷ್ಮಾ ಪಾಟೀಲ್ ಅವರ ಪತಿ ಹಾಗೂ ಸಮಾಜ ಸೇವಕ ಶ್ರೀ. ಪ್ರವೀಣ್ ಪಾಟೀಲ್ ಸ್ಥಳಕ್ಕೆ ಧಾವಿಸಿ, ಪ್ಲಾಟ್ ಮಾಲೀಕರೊಂದಿಗೆ ಮಾತುಕತೆ ನಡೆಸಿ ಮನವೊಲಿಸಿದರು. ಪ್ರವೀಣ್ ಪಾಟೀಲ್ ಅವರ ಸಕಾಲಿಕ ಮಧ್ಯಸ್ಥಿಕೆಯಿಂದ ವಿವಾದ ಬಗೆಹರಿದು ಮಹಾನಗರ ಪಾಲಿಕೆ ಗುತ್ತಿಗೆದಾರರಿಗೆ ಕಾಮಗಾರಿ ಮುಂದುವರಿಸಲು ಸೂಚನೆ ನೀಡಲಾಯಿತು. ಇದರಿಂದ ಸಂಚಾರ ದಟ್ಟಣೆ ಹಾಗೂ ಒಳಚರಂಡಿ ಸಮಸ್ಯೆ ನೀಗಿದ್ದು, ನಿರಾಳರಾದ ಸ್ಥಳೀಯ ನಾಗರೀಕರು ಸಮಾಧಾನ ವ್ಯಕ್ತಪಡಿಸಿದ್ದಾರೆ.
