Belagavi

ಮಾರ್ಕೆಟ್ ಪೊಲೀಸ್ ಠಾಣೆಯ ನೂತನ ಸಭಾಂಗಣ ಉದ್ಘಾಟಿಸಿದ ಡಿಸಿಪಿ ನಾರಾಯಣ ಬರಮನಿ

Share

ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ಮಾರ್ಕೆಟ್ ಪೊಲೀಸ್ ಠಾಣೆಯ ನೂತನ ಸಭಾಂಗಣವನ್ನು ಡಿಸಿಪಿ ನಾರಾಯಣ ಬರಮನಿ ಅವರು ಶನಿವಾರ ಅಧಿಕೃತವಾಗಿ ಉದ್ಘಾಟಿಸಿದರು.

ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ಬೆಳಗಾವಿಯ ನಗರದ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ನೂತನವಾಗಿ ನಿರ್ಮಿಸಲಾದ ಸಭಾಂಗಣವನ್ನು ಡಿಸಿಪಿ ನಾರಾಯಣ ಬರಮನಿ ಅವರು ಶನಿವಾರ ಉದ್ಘಾಟಿಸಿದರು. ಈ ಉದ್ಘಾಟನಾ ಸಮಾರಂಭದಲ್ಲಿ ಎಸಿಪಿ ಸಂತೋಷ್ ಸತ್ಯನಾಯಕ್ ಹಾಗೂ ಸಿಪಿಐ ಕಾಲಿಮಿರ್ಚಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆ ತಂದರು. ಈ ವೇಳೆ ಠಾಣೆಯ ಪಿಎಸ್‌ಐ ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದು, ನೂತನ ಸಭಾಂಗಣವು ಠಾಣೆಯ ದೈನಂದಿನ ಕಚೇರಿ ಕೆಲಸ ಕಾರ್ಯಗಳು ಹಾಗೂ ಸಭೆ-ಸಮಾರಂಭಗಳನ್ನು ನಡೆಸಲು ಹೆಚ್ಚು ಅನುಕೂಲಕರವಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

Tags:

error: Content is protected !!