Belagavi

ಬಿ.ಎಸ್.ಸಿ ಟೆಕ್ಸ್‌ಟೈಲ್ಸ್‌ನಲ್ಲಿ 80ನೇ ಸ್ವಾತಂತ್ರ್ಯೋತ್ಸವ: ರಕ್ತದಾನ ಶಿಬಿರ

Share

ಪ್ರಸ್ತುತ ಭಾರತ ಪ್ರಪಂಚದಲ್ಲಿ ಬಲಿಷ್ಠ ರಾಷ್ಟ್ರವಾಗಲು ಅಂದಿನ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನವೇ ಕಾರಣ. ಪ್ರತಿಯೊಬ್ಬರು ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಬಿ.ಎಸ್.ಸಿ ಟೈಕ್ಸಟೈಲ್ ಮಾಲೀಕರಾದ ವೇದ ಬಂಕಾಪೂರ ಹೇಳಿದರು.

ಶನಿವಾರ ನಗರದ ಬಿ.ಎಸ್.ಸಿ ಟೈಕ್ಸಟೈಲ್ ಮಾಲ್ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರೆವೇರಿಸಿ ಅವರು ಮಾತನಾಡಿದರು. ಬಿ‌.ಎಸ್.ಸಿ ಕೇವಲ ವ್ಯಾಪಾರ, ವ್ಯಹಿವಾಟಿಗಷ್ಟೇ ಸೀಮಿತವಾಗದೇ ಸಮಾಜಸೇವೆಗೂ ಹೆಸರಾಗಿದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಾನಾ ಸಂಘಟನೆಗಳ ಜೊತೆಗೂಡಿ ರಕ್ತದಾನ ಶಿಬಿರ ಆಯೋಜಿಸಿದ್ದು, ಆಸಕ್ತರು ರಕ್ತದಾನ ನೀಡಿ ಇನ್ನೊಂದು ಜೀವಕ್ಕೆ ನೆರವಾಗಬೇಕು ಎಂದು ಸಲಹೆ ನೀಡಿದರು‌.

ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಜೈನ ಇಂಟರ್ನ್ಯಾಷನಲ್ ಟ್ರೈಡ್ ಅಸೋಸಿಯೇಷನ್ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರದಲ್ಲಿ ಬಿ.ಎಸ್.ಸಿ ಟೈಕ್ಸಟೈಲ್ ಮಾಲ್ ನ ಸಿಬ್ಬಂದಿ ವರ್ಗದವರು ರಕ್ತದಾನ‌ ಮಾಡಿದರು.

ಈ ವೇಳೆ ಸ್ಟೋರ್ ವ್ಯವಸ್ಥಾಪಕ ಅಂಮ್ಜದ ಜಮಾದಾರ, ಮಾರ್ಕೆಟಿಂಗ್ ವ್ಯವಸ್ಥಾಪಕ ಈರಣ್ಣಾ ಶಿವಶೆಟ್ಟಿ, ಎಚ್.ಆರ್. ವಿಶ್ವನಾಥ ಅಂಬೇಚಾಡಿಕರ, ಆಡಳಿತ ವ್ಯವಸ್ಥಾಪಕರಾದ ಸಂದೀಪ ನಾಯಕ, ಪ್ರೇಮಕುಮಾರ ಬುಕ್ಯಾಳಕರ್ ಸೇರಿದಂತೆ ಇತರರಿದ್ದರು.

Tags:

error: Content is protected !!