Chikkodi

ನಂದಿಕುರಳಿ ಗ್ರಾಮದ ಬಾವಿಯಲ್ಲಿ ಮೊಸಳೆ ಪ್ರತ್ಯಕ್ಷ; ಸುರಕ್ಷಿತವಾಗಿ ಸೆರೆಹಿಡಿದ ಅರಣ್ಯ ಇಲಾಖೆ

Share

ರಾಯಬಾಗ ತಾಲೂಕಿನ ನಂದಿಕುರಳಿ ಗ್ರಾಮದ ರೈತ ಬಾಲಕೃಷ್ಣ ವಾಗೆ ಎಂಬುವರ ಜಮೀನಿನ ಬಾವಿಯಲ್ಲಿ ಬೃಹತ್ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ತೀವ್ರ ಆತಂಕ ಹಾಗೂ ಕುತೂಹಲ ಮೂಡಿಸಿತ್ತು.ಹಗ್ಗದಿಂದ,ಜೆಸಿಬಿ ಸಹಾಯದಿಂದ ಮೊಸಳೆಯಯನ್ನು ಸುರಕ್ಷಿತವಾಗಿ ಹೋರತೆಗೆಯಲಾಯಿತು.

ಬಾವಿಯಲ್ಲಿ ಮೊಸಳೆ ಇರುವುದನ್ನು ಗಮನಿಸಿದ ತಕ್ಷಣವೇ ಜಾಗರೂಕರಾದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಗ್ರಾಮಸ್ಥರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿದರು.

ಸುದೀರ್ಘ ಕಾರ್ಯಾಚರಣೆಯ ನಂತರ ಮೊಸಳೆಯನ್ನು ಸುರಕ್ಷಿತವಾಗಿ ಸೆರೆಹಿಡಿಯುವಲ್ಲಿ ಅರಣ್ಯ ಸಿಬ್ಬಂದಿ ಯಶಸ್ವಿಯಾದರು.

ಸಮಯಕ್ಕೆ ಸರಿಯಾಗಿ ಸ್ಪಂದಿಸಿ, ಯಾವುದೇ ಪ್ರಾಣಹಾನಿಯಾಗದಂತೆ ಮೊಸಳೆಯನ್ನು ಸುರಕ್ಷಿತವಾಗಿ ಸೆರೆಹಿಡಿದ ಅರಣ್ಯ ಇಲಾಖೆಯ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಗ್ರಾಮಸ್ಥರು ಮುಕ್ತಕಂಠದಿಂದ ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಉಮೇಶ ಪ್ರಧಾನಿ, ಶ್ರೀಶೈಲ ಸದ್ದಿ, ಪೃಥ್ವಿರಾಜ್ ಜಾಧವ್, ರಾಜು ಸಾವಂತ್, ಮಹೇಶ್ ಸಾವಂತ್, ಅಪ್ಪಾಸಾಹೇಬ್ ಜಕಾತಿ, ಚಿದಾನಂದ ಹಿರೇಕುರಬರ, ವಿಠ್ಠಲ ಹಿರೇಕುರಬಾರ ಸೇರಿದಂತೆ ಪ್ರಮುಖರು, ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

Tags:

error: Content is protected !!