Belagavi

ಬೆಳಗಾವಿ ಪೊಲೀಸ್ ಹೆಡ್‌ಕ್ವಾಟರ್ಸ್‌ನಲ್ಲಿ ವಿಜೃಂಭಣೆಯ ಸತ್ಯನಾರಾಯಣ ಪೂಜೆ ಮತ್ತು ಮಹಾಪ್ರಸಾದ!

Share

ಬೆಳಗಾವಿ ಪೊಲೀಸ್ ಹೆಡ್‌ಕ್ವಾಟರ್ಸ್‌ನಲ್ಲಿರುವ ಶ್ರೀ ಮಾರುತಿ ಮಂದಿರದಲ್ಲಿ ಶ್ರಾವಣ ಮಾಸದ ಶನಿವಾರದ ನಿಮಿತ್ತ ಸತ್ಯನಾರಾಯಣ ಪೂಜೆ ಮತ್ತು ಮಹಾಪ್ರಸಾದ ಕಾರ್ಯಕ್ರಮವು ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಲೋಕ ಕಲ್ಯಾಣಾರ್ಥವಾಗಿ ಹಾಗೂ ಎಲ್ಲರಿಗೂ ಆಯುರಾರೋಗ್ಯ ಮತ್ತು ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿ ಈ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಬೆಳಗಾವಿಯ ಪೊಲೀಸ್ ಹೆಡ್‌ಕ್ವಾಟರ್ಸ್ ಆವರಣದಲ್ಲಿರುವ ಶ್ರೀ ಮಾರುತಿ ಮಂದಿರದಲ್ಲಿ ಪ್ರತಿವರ್ಷದ ಶ್ರಾವಣ ಮಾಸದ ಶನಿವಾರದಂದು ಲೋಕ ಕಲ್ಯಾಣಾರ್ಥವಾಗಿ ಸತ್ಯನಾರಾಯಣ ಪೂಜೆಯನ್ನು ಆಚರಿಸಿಕೊಂಡು ಬರಲಾಗುತ್ತದೆ. ಅದೇ ಪರಂಪರೆಯಂತೆ ಈ ಬಾರಿಯೂ ಶ್ರಾವಣ ಮಾಸದ ಶನಿವಾರದ ವಿಶೇಷ ದಿನದಂದು ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜಗತ್ತಿಗೆ ಉತ್ತಮವಾದ ಮಳೆ-ಬೆಳೆ ಲಭಿಸಲಿ ಹಾಗೂ ಎಲ್ಲರಿಗೂ ಆಯುಸ್ಸು, ಆರೋಗ್ಯ ಮತ್ತು ಸಮೃದ್ಧಿ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಪೂಜಾ ಕಾರ್ಯಕ್ರಮದಲ್ಲಿ ಬೆಳಗಾವಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು. ಪೂಜೆಯ ಮುಕ್ತಾಯದ ಬಳಿಕ ನೆರೆದಿದ್ದ ಎಲ್ಲಾ ಭಕ್ತಾದಿಗಳಿಗೆ ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ಶ್ರೀಮನ್ ನಾರಾಯಣನ ಪ್ರಸಾದ ರೂಪದಲ್ಲಿ ಮಹಾಪ್ರಸಾದ ವಿತರಣೆ ಮಾಡಲಾಯಿತು. ಈ ಕುರಿತು ಅರ್ಚಕರಾದ ಚಂದಹಾಸ್ ಅವರು ಇನ್ ನ್ಯೂಸ್’ಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು.

ಈ ಧಾರ್ಮಿಕ ಕಾರ್ಯಕ್ರಮದಿಂದ ಇಲಾಖೆಯ ಸಿಬ್ಬಂದಿಗಳಲ್ಲಿ ಧಾರ್ಮಿಕ ಹಾಗೂ ಸಕಾರಾತ್ಮಕ ವಾತಾವರಣ ಮೂಡಿತು.

Tags:

error: Content is protected !!