Belagavi

ಯುವ ಕ್ರಿಕೆಟ್ ಆಟಗಾರ ಅಥರ್ವ ಢವಳಿಗೆ ಸೈಕಲ್ ಉಡುಗೊರೆ. ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್ ಟೀಮ್ ಸ್ಪೂರ್ತಿದಾಯಕ ಹೆಜ್ಜೆ.

Share

ಕಷ್ಟದ ನಡುವೆಯೂ ಕ್ರಿಕೆಟ್ ಹಾಗೂ ಶಿಕ್ಷಣದಲ್ಲಿ ಸಾಧನೆ ಮಾಡುತ್ತಿರುವ ವಡಗಾವನ ಯುವ ಪ್ರತಿಭೆ ಅಥರ್ವ ದೇವೇಂದ್ರ ಢವಳಿಗೆ ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್ ಟೀಮ್ ವತಿಯಿಂದ ಹೊಸ ಸೈಕಲ್ ಉಡುಗೊರೆಯಾಗಿ ನೀಡಲಾಗಿದೆ. ಈ ಮೂಲಕ ಬಾಲಕನ ಕನಸಿಗೆ ಆಸರೆಯಾಗಲಾಗಿದೆ.
ವಡಗಾವಿನ ಕಲ್ಯಾಣ ನಗರದ ನಿವಾಸಿ ಹಾಗೂ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ ನಂ. 15ರ ಆರನೇ ತರಗತಿ ವಿದ್ಯಾರ್ಥಿಯಾದ ಅಥರ್ವ ದೇವೇಂದ್ರ ಧವಳಿಗೆ ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್ ಟೀಮ್‌ನ ಮುಖ್ಯಸ್ಥ ಸಂತೋಷ್ ದರೆಕರ ಅವರು ನೀಡಿದ ಮಾತಿನಂತೆ ಹೊಚ್ಚಹೊಸ ಸೈಕಲ್ ಅನ್ನು ಹಸ್ತಂತರಿಸಿದ್ದಾರೆ. ನೇಕಾರರ ಕುಟುಂಬದಿಂದ ಬಂದಿರುವ ಅಥರ್ವ, ಪ್ರತಿದಿನ ಸಂಜೆ ಕಲ್ಯಾಣ ನಗರದಿಂದ ಫೋರ್ಟ್ ರೋಡ್ ಬಳಿಯ ಭಾರತೇಶ್ ಶಾಲೆಗೆ ತೆರಳಿ ಆನಂದ್ ಕ್ರಿಕೆಟ್ ಕೋಚಿಂಗ್ ಅಕಾಡೆಮಿಯಲ್ಲಿ ಉಚಿತ ತರಬೇತಿ ಪಡೆಯುತ್ತಿದ್ದಾರೆ. ಅಥರ್ವನ ಪರಿಶ್ರಮ, ಶಿಸ್ತು ಹಾಗೂ ಕ್ರಿಕೆಟ್ ಮೇಲಿನ ಸಮರ್ಪಣಾ ಭಾವವನ್ನು ಗುರುತಿಸಿ ಈ ನೆರವು ನೀಡಲಾಗಿದ್ದು, ಓದು ಮತ್ತು ಕ್ರೀಡೆ ಎರಡರಲ್ಲೂ ಮುಂದಿರುವ ಈ ಪುಟ್ಟ ಚಾಂಪಿಯನ್‌ನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಲಾಗಿದೆ.

Tags:

error: Content is protected !!