Belagavi

ಬೆಳಗಾವಿ: ಈದ್-ಎ-ಮಿಲಾದ್ ಮೆರವಣಿಗೆ; ನಗರದಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ

Share

ಈದ್-ಎ-ಮಿಲಾದ್ ಹಬ್ಬದ ಅಂಗವಾಗಿ ಆ. 26ರಂದು ಬೆಳಗಾವಿ ನಗರದಲ್ಲಿ ನಡೆಯಲಿರುವ ಮೆರವಣಿಗೆ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ನಗರದಲ್ಲಿ ವಾಹನಗಳ ಸಂಚಾರಕ್ಕೆ ಮಾರ್ಗ ಬದಲಾವಣೆ ಮಾಡಲಾಗಿದೆ.

ಆ. 26ರಂದು ಬೆಳಿಗ್ಗೆ 8 ಗಂಟೆಯಿಂದ ಮೆರವಣಿಗೆ ಮುಕ್ತಾಯವಾಗುವವರೆಗೆ ಸಂಚಾರ ಮಾರ್ಗ ಬದಲಾವಣೆ ಜಾರಿಯಲ್ಲಿರಲಿದೆ. ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಮನವಿ ಮಾಡಿದ್ದಾರೆ.
ಮೆರವಣಿಗೆ ಸಾಗುವ ಮಾರ್ಗ: ಪಿಂಪಳ ಕಟ್ಟಾದಿಂದ ಆರಂಭವಾಗುವ ಮೆರವಣಿಗೆ ಫೋರ್ಟ್ ರಸ್ತೆ, ಮುಜಾವರ ಖೂಟಿ, ಕೇಂದ್ರ ಬಸ್ ನಿಲ್ದಾಣ , ಮಾರ್ಕೆಟ್ ಪೊಲೀಸ್ ಠಾಣೆ ಕ್ರಾಸ್, ಸಂಗೊಳ್ಳಿ ರಾಯಣ್ಣ ವೃತ್ತ, ಡಿಸಿ ಕಚೇರಿ ಗೇಟ್, ಚನ್ನಮ್ಮ ವೃತ್ತ, ಕಾಲೇಜು ರಸ್ತೆ, ಎನ್.ಡಿ.ಮೇಟ್ ಸಿಗ್ನಲ್, ಧರ್ಮವೀರ ಸಂಭಾಜಿ ವೃತ್ತ, ಫಿಶ್ ಮಾರ್ಕೆಟ್, ಗೋವ್ ಸರ್ಕಲ್ ಮೂಲಕ ಅಸದ್‌ಖಾನ್ ದರ್ಗಾ ತಲುಪಿ ಮುಕ್ತಾಯಗೊಳ್ಳಲಿದೆ.
ಖಾನಾಪುರ ಕಡೆಗೆ ತೆರಳುವ ವಾಹನಗಳಿಗೆ ಪರ್ಯಾಯ ಮಾರ್ಗ
ಕಿಲ್ಲಾ ರಸ್ತೆ–ಅಶೋಕ ಪಿಲ್ಲರ್ ವೃತ್ತ–ಆರ್‌ಟಿಒ ಸರ್ಕಲ್–ಚನ್ನಮ್ಮ ಸರ್ಕಲ್–ಕಾಲೇಜು ರಸ್ತೆ ಮಾರ್ಗವಾಗಿ ಖಾನಾಪುರ ಕಡೆಗೆ ತೆರಳುವ ವಾಹನಗಳು ಅಶೋಕ ಪಿಲ್ಲರ್, ಕೆಎಲ್‌ಇ ಛತ್ರಿ, ಹಿಂಡಾಲ್ಕೊ, ಲೇಕ್‌ವ್ಯೂ ಆಸ್ಪತ್ರೆ, ಕನಕದಾಸ ಸರ್ಕಲ್, ಕ್ಯಾನ್ಸರ್ ಅಂಡರ್‌ಬ್ರಿಡ್ಜ್, ಬಾಕ್ರೆಟ್ ರಸ್ತೆ, ಹನುಮಾನ ನಗರ ಡಬಲ್ ರಸ್ತೆ, ಹಿಂಡಲಗಾ ಗಣೇಶ ಮಂದಿರ, ಗಾಂಧಿ ಸರ್ಕಲ್ ಹಾಗೂ ಶೌರ್ಯ ಚೌಕ ಮಾರ್ಗವಾಗಿ ತೆರಳುವಂತೆ ಸೂಚಿಸಲಾಗಿದೆ.
ಗೋಗಟೆ ಸರ್ಕಲ್ ಮೂಲಕ ನಗರ ಪ್ರವೇಶಿಸುವ ವಾಹನಗಳು
ಗೋಗಟೆ ಸರ್ಕಲ್ ರೈಲ್ವೆ ಪ್ರೈಓವರ್ ಮೂಲಕ ಬೆಳಗಾವಿ ನಗರ ಪ್ರವೇಶಿಸುವ ವಾಹನಗಳು ಮಿಲಿಟರಿ ಮಹಾದೇವ ಮಂದಿರದ ಬಳಿ ತಿರುವು ಪಡೆದು ಪರ್ಯಾಯ ಮಾರ್ಗವಾಗಿ ಸಂಚರಿಸಬೇಕು.
ಖಾನಾಪುರ ಕಡೆಯಿಂದ ಕಾಂಗ್ರೆಸ್ ರಸ್ತೆ ಮೂಲಕ ನಗರ ಪ್ರವೇಶಿಸುವ ವಾಹನಗಳು ಮಿಲಿಟರಿ ಮಹಾದೇವ ಮಂದಿರದ ಬಳಿ ಎಡತಿರುವು ಪಡೆದು ಎಂಎಲ್‌ಐಆರ್‌ಸಿ ಕ್ಯಾಂಟೀನ್, ಕೇಂದ್ರ ವಿದ್ಯಾಲಯ ನಂ.2, ಮಿಲಿಟರಿ ಸರ್ಕಲ್, ಗಾಂಧಿ ಸರ್ಕಲ್, ಹಿಂಡಲಗಾ ಗಣೇಶ ಮಂದಿರ, ಹನುಮಾನ ನಗರ ಡಬಲ್ ರಸ್ತೆ ಹಾಗೂ ಬಾಕ್ರೆಟ್ ರಸ್ತೆ ಮೂಲಕ ಸಂಚರಿಸಬೇಕು.
ರೈಲ್ವೆ ನಿಲ್ದಾಣ–ಶನಿ ಮಂದಿರ ಮಾರ್ಗ
ಗೋಗಟೆ ಸರ್ಕಲ್ ಕಡೆಯಿಂದ ರೈಲ್ವೆ ಸ್ಟೇಷನ್, ಸ್ಟೇಷನ್ ರಸ್ತೆ ಹಾಗೂ ಹೆಡ್ ಪೋಸ್ಟ್ ಆಫೀಸ್ ಸರ್ಕಲ್ ಮೂಲಕ ಶನಿ ಮಂದಿರ ಕಡೆಗೆ ತೆರಳುವ ವಾಹನಗಳು ಗೋವಾವೇಸ್ ಸರ್ಕಲ್, ಮಹಾತ್ಮಾ ಫುಲೆ ರಸ್ತೆ, ಬ್ಯಾಂಕ್ ಆಫ್ ಇಂಡಿಯಾ ಸರ್ಕಲ್, ಭಾತಕಾಂಡೆ ಸ್ಕೂಲ್ ಕ್ರಾಸ್ ಹಾಗೂ ಹಳೆ ಪಿಬಿ ರಸ್ತೆ ಮೂಲಕ ಸಂಚರಿಸಬೇಕು.
ನಾಥ ಸರ್ಕಲ್ ಕಡೆಯಿಂದ ಬ್ಯಾಂಕ್ ಆಫ್ ಇಂಡಿಯಾ ಸರ್ಕಲ್, ಎಸ್‌ಪಿಎಂ ರಸ್ತೆ ಹಾಗೂ ಕಪಿಲೇಶ್ವರ ಪ್ರೈಓವರ್ ಮೂಲಕ ಶನಿ ಮಂದಿರ ಕಡೆಗೆ ತೆರಳುವ ವಾಹನಗಳು ಭಾತಕಾಂಡೆ ಸ್ಕೂಲ್ ಕ್ರಾಸ್–ಹಳೆ ಪಿಬಿ ರಸ್ತೆ ಅಥವಾ ಖಾಸಬಾಗ್ ಬಸವೇಶ್ವರ ಸರ್ಕಲ್–ಸಂಭಾಜಿ ಗಲ್ಲಿ ರಸ್ತೆ ಮೂಲಕ ತೆರಳಬೇಕು.
ಜೀಜಾಮಾತಾ ಸರ್ಕಲ್ ಕಡೆಯಿಂದ ಬರುವ ವಾಹನಗಳಿಗೆ ಪರ್ಯಾಯ ಮಾರ್ಗ
ಜೀಜಾಮಾತಾ ಸರ್ಕಲ್‌ನಿಂದ ದೇಶಪಾಂಡೆ ಪೆಟ್ರೋಲ್ ಪಂಪ್, ನರಗುಂದಕರ್ ಭಾವೆ ಚೌಕ್, ಕಂಬಳಿ ಊಟ, ಪಿಂಪಳ ಕಟ್ಟಾ ಹಾಗೂ ಪಾಟೀಲ ಗಲ್ಲಿ ಕಡೆಗೆ ತೆರಳುವ ವಾಹನಗಳು ಭಾತಕಾಂಡೆ ಸ್ಕೂಲ್ ಕ್ರಾಸ್, ಬ್ಯಾಂಕ್ ಆಫ್ ಇಂಡಿಯಾ ಸರ್ಕಲ್, ಮಹಾತ್ಮಾ ಫುಲೆ ರಸ್ತೆ ಹಾಗೂ ಗೋವಾವೇಸ್ ಸರ್ಕಲ್ ಮೂಲಕ ಸಂಚರಿಸಬೇಕು.
ಭಾರಿ ವಾಹನಗಳಿಗೆ ಸಂಪೂರ್ಣ ನಿಷೇಧ
ಆಗಸ್ಟ್ 26ರಂದು ಬೆಳಿಗ್ಗೆ 8 ಗಂಟೆಯಿಂದ ಮೆರವಣಿಗೆ ಮುಕ್ತಾಯವಾಗುವವರೆಗೆ ಬೆಳಗಾವಿ ನಗರವನ್ನು ಎಲ್ಲಾ ದಿಕ್ಕುಗಳಿಂದ ಪ್ರವೇಶಿಸುವ ಭಾರಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಮೆರವಣಿಗೆ ಮಾರ್ಗದಲ್ಲಿ ಪಾರ್ಕಿಂಗ್ ನಿಷೇಧ
ಮೆರವಣಿಗೆ ಸಾಗುವ ರಸ್ತೆಯ ಎರಡೂ ಬದಿಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮೆರವಣಿಗೆ ಮುಕ್ತಾಯವಾಗುವವರೆಗೆ ಎಲ್ಲ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
ಪಿಂಪಳ ಕಟ್ಟಾ, ಫೋರ್ಟ್ ರಸ್ತೆ, ಮುಜಾವರ ಖೂಟಿ, ಕೇಂದ್ರ ಬಸ್ ನಿಲ್ದಾಣ, ಮಾರ್ಕೆಟ್ ಪೊಲೀಸ್ ಠಾಣೆ ಕ್ರಾಸ್, ಸಂಗೊಳ್ಳಿ ರಾಯಣ್ಣ ವೃತ್ತ, ಡಿಸಿ ಗೇಟ್, ಚನ್ನಮ್ಮ ವೃತ್ತ, ಕಾಲೇಜು ರಸ್ತೆ, ಎನ್.ಡಿ.ಮೇಟ್ ಸಿಗ್ನಲ್, ಧರ್ಮವೀರ ಸಂಭಾಜಿ ವೃತ್ತ, ಫಿಶ್ ಮಾರ್ಕೆಟ್ ಹಾಗೂ ಗೋವ್ ಸರ್ಕಲ್‌ನಿಂದ ಅಸದ್‌ಖಾನ್ ದರ್ಗಾವರೆಗೆ ಪಾರ್ಕಿಂಗ್ ನಿಷೇಧ ಇರಲಿದೆ.
ಜಿಜಾಮಾತಾ ಸರ್ಕಲ್ ಸಮೀಪದ ಭರತೇಶ ಶಿಕ್ಷಣ ಸಂಸ್ಥೆ ಎದುರಿನ ಕ್ಯಾಂಟೋನ್ಮೆಂಟ್ ಪಾರ್ಕಿಂಗ್ ಸ್ಥಳದಲ್ಲಿಯೂ ವಾಹನ ನಿಲುಗಡೆಗೆ ನಿರ್ಬಂಧ ಹೇರಲಾಗಿದೆ.
ಪಾರ್ಕಿಂಗ್‌ಗೆ ಪರ್ಯಾಯ ಸ್ಥಳಗಳು
ವಾಹನಗಳನ್ನು ನಿಲುಗಡೆ ಮಾಡಲು ಸರ್ದಾರ್ ಮೈದಾನ, ಮಹಿಳಾ ಪೊಲೀಸ್ ಠಾಣೆಯ ಹಿಂಭಾಗದ ಖಾಲಿ ಜಾಗ ಹಾಗೂ ಟಿಳಕವಾಡಿಯ ಝಟ್‌ಪಟ್ ಕಾಲೋನಿ ಸಮೀಪದ ಖಾಲಿ ಜಾಗವನ್ನು ಗುರುತಿಸಲಾಗಿದೆ.
ಸಾರ್ವಜನಿಕರು ಪೊಲೀಸ್ ಇಲಾಖೆಯ ಸೂಚನೆಗಳನ್ನು ಪಾಲಿಸಿ, ಪರ್ಯಾಯ ಮಾರ್ಗ ಹಾಗೂ ನಿಗದಿತ ಪಾರ್ಕಿಂಗ್ ಸ್ಥಳಗಳನ್ನು ಬಳಸಿಕೊಂಡು ಸಂಚಾರಕ್ಕೆ ಸಹಕರಿಸುವಂತೆ ನಗರ ಪೊಲೀಸ್ ಆಯುಕ್ತಾಲಯ ಮನವಿ ಮಾಡಿದೆ.

Tags:

error: Content is protected !!