kagwad

ಕಾಗವಾಡ ತಾಲೂಕಿನ ಐನಾಪುರ್ ಪಟ್ಟಣದ ಶ್ರೀ ಪದ್ಮಾವತಿ ಮಹಾವಿದ್ಯಾಲಯದ ಅವರದಲ್ಲಿ ತಾಲೂಕ ಮಟ್ಟದ ಕ್ರೀಡಾಕೂಟ ಉದ್ಘಾಟನೆ.

Share

ಕ್ರೀಡೆಯಲ್ಲಿ ವಿದ್ಯಾರ್ಥಿ ಹಂತದಲ್ಲಿ ಉತ್ತಮ ಓದು ಮತ್ತು ಕ್ರೀಡೆ ಇವುಗಳೆರಡೂ ನಿಮ್ಮ ಮುಂದಿನ ಉಜ್ವಲ ಭವಷ್ಯಕ್ಕೆ ಟರ್ನಿಂಗ್ ಪಾಯಿಂಟ್ ಎಂದು ಖ್ಯಾತ ನ್ಯಾಯವಾದಿ ಹಾಗೂ ಸಂಸ್ಥೆಯ ಅಧ್ಯಕ್ಷ ಸಂಜಯ ಕುಚನೂರೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಅವರು ಶುಕ್ರವಾರ ಐನಾಪೂರ ಪಟ್ಟಣದ ಪದ್ಮಾವತಿ ವಿದ್ಯಾವರ್ದಕ ಸಂಸ್ಥೆಯ ಪದ್ಮಾವತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಉಪನಿರ್ದೇಶಕರು ಶಾಲಾ ಶಿಕ್ಷಣ ಚಿಕ್ಕೋಡಿ ಜಿಲ್ಲೆ, ಪದ್ಮಾವತಿ ಸಂಯುಕ್ತ ಪದವಿ ಪೂರ್ವ ಕಾಲೇಜು ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾಗವಾಡ ತಾಲೂಕಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಪ್ರತಿಭೆ ಪ್ರದರ್ಶಿಸುವದರಿಂದ ಉನ್ನತ ಸ್ಥಾನ ಪಡೆದುಕೊಳ್ಳುವುದಕ್ಕೆ ಸಾದ್ಯವಾಗಲಿದೆ.
ಇದಕ್ಕೆ ವಿದ್ಯಾರ್ಥಿ ಹಂತವೇ ಸೂಕ್ತ ಸಮಯವಾಗಿದೆ ಎಂದು ಸಲಹೆ ನೀಡಿದರು.

ಪ್ರಾಚಾರ್ಯ ಕೆ.ಜೆ.ಮಾಲಗಾಂವೆ ಮಾತನಾಡಿ ಜೀವನದಲ್ಲಿ ಬರುವ ಕಷ್ಟ, ಸುಖಗಳನ್ನು ನಾವು ಹೇಗೆ ಸಮನಾಗಿ ಹಂಚಿಕೊAಡು ಜೀವನ ಸಾಗಿಸುವಂತೆ ಕ್ರೀಡೆಯಲ್ಲಿ ಸೋಲು, ಗೆಲುವನ್ನು ಸಮನಾಗಿ ಸ್ವೀಕರಿಸಿ ಕ್ರೀಡಾ ಮನೋಭಾವದಿಂದ ಆಟವಾಡಿ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಸಿಸಬೇಕೆಂದ ಅವರು, ಕ್ರೀಡೆಗಳು ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಪೂರಕವಾಗಿದ್ದು, ಮಕ್ಕಳು ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ದೈಹಿಕ ಸಾಮರ್ಥ್ಯ ಉತ್ತಮ ಪಡೆಸಿಕೊಳ್ಳಬೇಕೆಂದರು.

ಮುಖ್ಯ ಅತಿಥಿಗಳಾಗಿ ಬೆಳಗಾವಿ ಜಿಲ್ಲಾ ಕಬ್ಬಡ್ಡಿ ಅಮೆಚೂರ ಅಸೋಶೀಯೇಶನ್ ಉಪಾಧ್ಯಕ್ಷ ಗುಂಡಪ್ಪ ಖವಟಕೊಪ್ಪ, ಜಿಲ್ಲಾ ಕಬ್ಬಡ್ಡಿ ಅಮೆಚೂರ ಅಸೋಶೀಯೇಶನ್ ನಿರ್ದೇಶಕ ಸತೀಶ ಅಪರಾಜ ಉಪಸ್ಥಿತರಿದ್ದು ಕ್ರೀಡೆಯ ಮಹತ್ವದ ಬಗ್ಗೆ ಮಾತನಾಡಿದರು.

ವೇದಿಕೆಯ ಮೇಲೆ ಸಂಸ್ಥೆಯ ಉಪಾಧ್ಯಕ್ಷ ರವೀಂದ್ರ ಬಣಜವಾಡ, ಆಡಳಿತ ಮಂಡಳಿಯ ಸದಸ್ಯರಾದ ಬಿ.ಎ.ಪಾಟೀಲ,ಪ್ರವೀಣ ಲಿಂಬಿಕಾಯಿ, ಗಜಕುಮಾರ ಪಾಟೀಲ, ಭರತೇಶ ಪಾಟೀಲ, ಸಂತೋಷ ತೆರದಾಳೆ, ವಸಂತ ಹುದ್ದಾರ,ಮೋಹನ ಪಾಟೀಲ, ವಿವಿಧ ಇಆಖೆಯ ಅಧಿಕಾರಿಗಳಾ ಡಾ. ವಿಕಾಸ ಕಾರ್ಚಿ, ಸತೀಶ ಸನದಿ, ಮಲ್ಲಿಕಾರ್ಜುನ ಕೌಲಗುಡ್ಡ, ಅಮರ ಕೊರವಿ, ಸಿ.ಎಂ.ಸAತೋಚ, ಸೇರಿದಂತೆ ಅನೇಕರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ರವೀಂದ್ರ ಬಡಿಗೇರ, ಕಾರ್ಯಕ್ರಮ ನಿರ್ವಹಿಸಿದರು,ಪ್ರಾ, ಕುಮಾರ ಮಾಲಗಾಂವೆ ಸ್ವಾಗತಿಸಿದರು. ಆರ್.ಎ.ಪಲ್ಲಕ್ಕಿ ಪ್ರತಿಜ್ಞಾ ವಿಧಿ ಬೋಧಿಸಿದರು. ನಂತರ ಪ್ರೀಡಾಕೋಟಗಳು ಪ್ರಾರಂಭವಾದವು.

 

Tags:

error: Content is protected !!