ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ಸಾರ್ವಜನಿಕ ಶುಭ ಸಮಾರಂಭಗಳಿಗೆ ಸೂಕ್ತ ಸಭಾಂಗಣವಿಲ್ಲದ ಸಮಸ್ಯೆಗೆ ಶಾಸಕ ಆಸೀಫ್ ಸೇಠ್ ಶಾಶ್ವತ ಪರಿಹಾರ ಒದಗಿಸಿದ್ದಾರೆ. 2016ರಿಂದ ಅರ್ಧಕ್ಕೆ ನಿಂತಿದ್ದ ಕಮ್ಯುನಿಟಿ ಹಾಲ್ ಕಾಮಗಾರಿಯನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿಗಳ ವಿಶೇಷ ನಿಧಿಯಿಂದ 1 ಕೋಟಿ ರೂಪಾಯಿ ಅನುದಾನ ತರಲಾಗಿದ್ದು, ಶಾಸಕರು ಕಾಮಗಾರಿಗೆ ಚಾಲನೆ ನೀಡಿದ್ದಾರೆ.


ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ಸಾರ್ವಜನಿಕ ಶುಭ ಸಮಾರಂಭಗಳಿಗೆ ಸೂಕ್ತ ಸಭಾಂಗಣವಿಲ್ಲದ ಸಮಸ್ಯೆಗೆ ಶಾಸಕ ಆಸೀಫ್ ಸೇಠ್ ಶಾಶ್ವತ ಪರಿಹಾರ ಒದಗಿಸಿದ್ದಾರೆ. ಸಮುದಾಯ ಭವನಕ್ಕೆ ಅವರು ಚಾಲನೆಯನ್ನು ನೀಡಿದರು.
ಈ ವೇಳೆ ಮಾತನಾಡಿದ ಶಾಸಕ ಆಸೀಫ್ ಸೇಠ್ ಅವರು
2016ರಲ್ಲಿ ಅರ್ಧಕ್ಕೆ ನಿಂತಿದ್ದ ಕಮ್ಯುನಿಟಿ ಹಾಲ್ (ಸಮುದಾಯ ಭವನ) ಕಾಮಗಾರಿಯನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿಗಳ ವಿಶೇಷ ನಿಧಿಯಿಂದ ಕೋಟಿ ರೂಪಾಯಿ ಅನುದಾನ ತರಲಾಗಿದೆ ಎಂದು ಅವರು ತಿಳಿಸಿದರು. ಈ ಭವನದಲ್ಲಿ ಸೀಲಿಂಗ್, ಮೇಲ್ಚಾವಣಿ ಶೀಟ್‌ಗಳು, ಪೇಂಟಿಂಗ್, ಶೌಚಾಲಯ, ಫ್ಲೋರಿಂಗ್ ಹಾಗೂ ಎಲೆಕ್ಟ್ರಿಕಲ್ ಕಾಮಗಾರಿಗಳನ್ನು ಪೂರ್ಣಗೊಳಿಸಿ ಕ್ಯಾಂಪ್ ಮತ್ತು ಕಂಟೋನ್ಮೆಂಟ್ ನಿವಾಸಿಗಳಿಗೆ ಅನುಕೂಲ ಮಾಡಿಕೊಡಲಾಗುವುದು. ಜೊತೆಗೆ, ಕ್ಯಾಂಪ್ ಭಾಗದ ಕ್ಯಾಟಲ್ ರಸ್ತೆ, ಹೈಸ್ಟ್ರೀಟ್, ಬೀದಿ ರಸ್ತೆಗಳು, ಚರಂಡಿ ಹಾಗೂ ವಿದ್ಯುದ್ದೀಕರಣ ಕಾಮಗಾರಿಗಳಿಗಾಗಿ ಹೆಚ್ಚುವರಿಯಾಗಿ 8 ಕೋಟಿ ರೂಪಾಯಿ ಅನುದಾನ ಕಾಯ್ದಿರಿಸಲಾಗಿದ್ದು, ಶೀಘ್ರದಲ್ಲೇ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಶಾಸಕರು ಮಾಹಿತಿ ನೀಡಿದರು.

ಬೆಳಗಾವಿ ಕ್ಯಾಂಪ್ ಪ್ರದೇಶದಲ್ಲಿ ಸಮುದಾಯ ಭವನ (ಕಮ್ಯುನಿಟಿ ಹಾಲ್) ಕಾಮಗಾರಿಗೆ ಅನುದಾನ ಒದಗಿಸಿದ ಶಾಸಕ ಆಸೀಫ್ ಸೇಠ್ ಅವರಿಗೆ ಬೆಳಗಾವಿ ದಂಡುಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂಚಲವಾರ್ ಸುಧಾಮ್ ಹರಿವಿಜಯ್ ಅವರು ಧನ್ಯವಾದ ಸಮರ್ಪಿಸಿದ್ದಾರೆ. ಹಿಂದೆ ಮಾಜಿ ಶಾಸಕರ ಅವಧಿಯಲ್ಲಿ ಆರಂಭಗೊಂಡು ಅರ್ಧಕ್ಕೆ ನಿಂತಿದ್ದ ಈ ಸಭಾಂಗಣದ ಕಾಮಗಾರಿಯನ್ನು ಪೂರ್ಣಗೊಳಿಸಲು ಪ್ರಸ್ತುತ ಶಾಸಕರು ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ತಂದಿದ್ದಾರೆ. ಕ್ಯಾಂಪ್ ಭಾಗದಲ್ಲಿ ಅಭಿವೃದ್ಧಿ ಕಾಮಗಾರಿಗಳ ಅಗತ್ಯವಿದ್ದು, ಶಾಸಕರು ಸತತವಾಗಿ ಅನುದಾನ ತರುತ್ತಿರುವುದು ಶ್ಲಾಘನೀಯ ಎಂದ ಅವರು, ಮುಂದೆಯೂ ಶಾಸಕರೊಂದಿಗೆ ಕೈಜೋಡಿಸಿ ಕ್ಯಾಂಪ್ ಜನರಿಗೆ ಉತ್ತಮ ಮೂಲಸೌಕರ್ಯಗಳನ್ನು ಒದಗಿಸಲು ಶ್ರಮಿಸುವುದಾಗಿ ತಿಳಿಸಿದರು.

ಬೆಳಗಾವಿ ಕ್ಯಾಂಪ್ ಪ್ರದೇಶದಲ್ಲಿ ಅರ್ಧಕ್ಕೆ ನಿಂತಿದ್ದ ಸಮುದಾಯ ಭವನದ (ಕಮ್ಯುನಿಟಿ ಹಾಲ್) ಕಾಮಗಾರಿಯನ್ನು ಪೂರ್ಣಗೊಳಿಸಲು ಶಾಸಕ ಆಸೀಫ್ ಸೇಠ್ ಅನುದಾನ ಒದಗಿಸಿರುವುದು ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಸಂತಸ ಮೂಡಿಸಿದೆ. ಶುಭ ಸಮಾರಂಭ ಹಾಗೂ ಕಾರ್ಯಕ್ರಮಗಳನ್ನು ನಡೆಸಲು ಸೂಕ್ತ ಸಭಾಂಗಣವಿಲ್ಲದೆ ಇಷ್ಟು ದಿನ ಪರದಾಡುತ್ತಿದ್ದ ನಮಗೆ ಈ ನಿರ್ಧಾರ ದೊಡ್ಡ ಪರಿಹಾರ ತಂದಿದೆ ಎಂದು ಸ್ಥಳೀಯರು ಹಾಗೂ ಕಸಾಬ್ ಜಮಾತ್ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಬಹುದಿನಗಳ ತೊಂದರೆಯನ್ನು ಆಲಿಸಿ, ಸಮಸ್ಯೆಗೆ ಸ್ಪಂದಿಸಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕರಿಗೆ ಕ್ಯಾಂಪ್ ನಿವಾಸಿಗಳು ಧನ್ಯವಾದಗಳನ್ನು ಅರ್ಪಿಸಿದರು.
ನಾಮ ನಿರ್ದೇಶಿತ ಸದಸ್ಯ ಸುಧೀರ್ ತುಪೆಕರ, ಸಲೀಮ್ ಮೌಲಾನಾ, ಶ್ಯಾಮಲಾ ಧಾನವರ, ಮಾಜಿ ಉಪಾಧ್ಯಕ್ಷರ ಸಾಜೀದ್ ಶೇಖ್, ಅಲ್ಲೇದ್ದಿನ್ ಕಿಲ್ಲೇದಾರ್, ಡಾಕ್ಟರ್ ರಾಹಿಲಾ ಶೇಖ್, ರಿಜ್ವಾನ್ ಬೇಪಾರಿ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ದರು.
