Belagavi

ಬೆಳಗಾವಿಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯಾಪಾರ ಮಾಡಿ : ಸಿಇಒ-ಶಾಸಕ ಆಸಿಫ್ ಸೇಠ್ ಮಹತ್ವದ ಚರ್ಚೆ

Share

ಬೆಳಗಾವಿ ಕ್ಯಾಂಟೋನ್ಮೆಂಟ್ ಬೋರ್ಡ್ ವ್ಯಾಪ್ತಿಯ ರೈಲ್ವೇ ಸ್ಟೇಷನ್ ರಸ್ತೆಯ ಬೀದಿ ಬದಿ ವ್ಯಾಪಾರಿಗಳ ಸಮಸ್ಯೆ ಕುರಿತು ಮಹತ್ವದ ಚರ್ಚೆ ನಡೆದಿದೆ. ಶಾಸಕ ಆಸಿಫ್ ಸೇಠ್ ಸಮ್ಮುಖದಲ್ಲಿ ಸಿಇಒ ಅವರೊಂದಿಗೆ ನಡೆದ ಚರ್ಚೆಯಲ್ಲಿ ವ್ಯಾಪಾರಿಗಳಿಗೆ ಪ್ರಮುಖ ನಿರ್ದೇಶನ ನೀಡಲಾಗಿದೆ.

ಬೆಳಗಾವಿಯ ಕ್ಯಾಂಟೋನ್ಮೆಂಟ್ ಬೋರ್ಡ್ ವ್ಯಾಪ್ತಿಯ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ವ್ಯಾಪಾರ ನಡೆಸುತ್ತಿರುವ ಬೀದಿ ಬದಿ ವ್ಯಾಪಾರಿಗಳ ನಿಯಂತ್ರಣ ಹಾಗೂ ಸಾರ್ವಜನಿಕರ ಸಂಚಾರ ಸುಗಮಗೊಳಿಸುವ ಕುರಿತು ಶಾಸಕ ಆಸಿಫ್ ಸೇಠ್ ಅವರ ಸಮ್ಮುಖದಲ್ಲಿ ಸಿಇಒ ಅವರೊಂದಿಗೆ ಮಹತ್ವದ ಮಾತುಕತೆ ನಡೆಯಿತು. ಪಾದಚಾರಿಗಳ ಸಂಚಾರಕ್ಕೆ ಯಾವುದೇ ರೀತಿಯ ಅಡಚಣೆಯಾಗದಂತೆ ಸಾರ್ವಜನಿಕ ಹಿತದೃಷ್ಟಿಯಿಂದ ವ್ಯಾಪಾರಸ್ಥರು ಫುಟ್‌ಪಾತ್ ಬಿಟ್ಟು ಅದರ ಹಿಂಭಾಗದಲ್ಲಿ ಕುಳಿತು ವ್ಯಾಪಾರ ಮಾಡುವಂತೆ ಸಿಇಒ ಅವರು ಸೂಚಿಸಿದರು. ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯಾಪಾರ ನಡೆಸಲು ತಿಳಿಸಲಾಗಿದ್ದು, ಈ ನಿರ್ಧಾರದಿಂದ ಪಾದಚಾರಿಗಳಿಗೆ ಸಂಚಾರಕ್ಕೆ ಅನುಕೂಲವಾಗಲಿದೆ.

Tags:

error: Content is protected !!