Belagavi

ಬೆಳಗಾವಿಯ ಹನುಮಾನ ನಗರದಲ್ಲಿ ಕಾರಿನ ಮೇಲೆ ಉರುಳಿದ ಬೃಹತ್ ಮರ!!!

Share

ಬೆಳಗಾವಿಯ ಹನುಮಾನ ನಗರದ ಪ್ರೆಸ್ ಕಾಲನಿಯಲ್ಲಿ ಮುಂಜಾನೆ ಭೀಕರ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಆರು ತಿಂಗಳ ಹಿಂದೆಯಷ್ಟೇ ಖರೀದಿಸಿದ್ದ ಹೊಸ ಕಾರಿನ ಮೇಲೆ ಬೃಹತ್ ಮರ ಉರುಳಿ ಬಿದ್ದಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಧಾವಿಸಿದ್ದಾರೆ.

ನಗರದ ಹನುಮಾನ ನಗರದ ವ್ಯಾಪ್ತಿಯ ಕುವೆಂಪು ನಗರ ಪ್ರೆಸ್ ಕಾಲನಿಯಲ್ಲಿ ಸೋಮವಾರ ಮುಂಜಾನೆ ಸುಮಾರು 8.15ರ ವೇಳೆಗೆ ಬುಡಸಹಿತ ಬೃಹತ್ ಮರವೊಂದು ನಿಲ್ಲಿಸಿದ್ದ ಕಾರಿನ ಮೇಲೆ ಉರುಳಿ ಬಿದ್ದಿದೆ. ಕೇವಲ ಆರು ತಿಂಗಳ ಹಿಂದೆಯಷ್ಟೇ (ಜನವರಿ 1 ರಂದು) ಖರೀದಿಸಲಾಗಿದ್ದ ಹೊಸ ಹ್ಯುಂಡೈ ಕ್ರೆಟಾ ಕಾರು ಸಂಪೂರ್ಣ ಜಖಂಗೊಂಡಿದೆ. ಮರ ಬೀಳುವ ಸಂದರ್ಭದಲ್ಲಿ ಅದೃಷ್ಟವಶಾತ್ ಕಾರಿನೊಳಗೆ ಹಾಗೂ ಸುತ್ತಮುತ್ತ ಚಾಲಕನಾಗಲಿ ಅಥವಾ ಇನ್ಯಾರೇ ಸಾರ್ವಜನಿಕರಾಗಲಿ ಇಲ್ಲದಿದ್ದರಿಂದ ದೊಡ್ಡ ಮಟ್ಟದ ಪ್ರಾಣಾಪಾಯವೊಂದು ತಪ್ಪಿದಂತಾಗಿದೆ. ಸದ್ಯ ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ನಗರದಾದ್ಯಂತ ಮರಗಳು ಹಾಗೂ ಮರದ ದೊಡ್ಡ ಟೊಂಗೆಗಳು ಮುರಿದು ಬೀಳುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ರಸ್ತೆಯಲ್ಲಿ ಸಂಚರಿಸುವಾಗ ಜನರು ಅತ್ಯಂತ ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯತೆ ಎದುರಾಗಿದೆ.

Tags:

error: Content is protected !!