Uncategorized

ಗೋವಾದಿಂದ ಪಂಡರಾಪೂರಕ್ಕೆ ದರ್ಶನಕ್ಕಾಗಿ ಪಾದಯಾತ್ರೆಯಲ್ಲಿ ತೆರಳುತ್ತಿದ್ದ ವಾರಕರಿಗಳಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Share

ಆರೋಗ್ಯ ಸೇವೆಯೇ ನಮ್ಮ ಧ್ಯೇಯವಾಗಿದೆ ಎಂದು ಕೆ ಎಲ್ ಇ ಆಯುರ್ವೇದ ಕಾಲೇಜಿನ ಪಾಚಾರ್ಯರಾದ ಡಾ. ಕಿರಣಕುಮಾರ ಮುತ್ನಾಳಿ ರವರು ಹೇಳಿದರು.

ಅವರು ಗೋವಾದಿಂದ ಪಂಡರಾಪೂರಕ್ಕೆ ದರ್ಶನಕ್ಕಾಗಿ ಪಾದಯಾತ್ರೆಯಲ್ಲಿ ತೆರಳುತ್ತಿದ್ದ ವಾರಕರಿಗಳಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ ಯಾತ್ರಿಕರ ಆರೋಗ್ಯ ರಕ್ಷಣೆ ಹಾಗೂ ಸುರಕ್ಷಿತ ಪಾದಯಾತ್ರೆಗೆ ನೆರವಾಗಲು ಆಯೋಜಿಸಲಾದ ಈ ಶಿಬಿರವು ಕೆ.ಎಲ್.ಇ. ಸಂಸ್ಥೆಯ ಸೇವಾ ಮನೋಭಾವದ ಪ್ರತೀಕವಾಗಿದೆ. ಮುಂದೆಯೂ ಇಂತಹ ಜನಪರ ಆರೋಗ್ಯ ಸೇವಾ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಶಿಬಿರದಲ್ಲಿ ಆಸ್ಪತ್ರೆಯ ಅನುಭವಿ ಆಯುರ್ವೇದ ವೈದ್ಯರಾದ ಡಾ. ಸಂತೋಷ ಬೆಟಗೇರಿ, ಡಾ. ಜೀವನ ಘಾಡಗೆ, ಡಾ. ಕಾಂಚನಾ, ಡಾ. ನಿಹಾರಿಕಾ ಆರೋಗ್ಯ ತಪಾಸಣೆ ನಡೆಸಿ, ರಕ್ತದೊತ್ತಡ ಪರೀಕ್ಷೆ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಪರೀಕ್ಷೆ, ಪ್ರಥಮ ಚಿಕಿತ್ಸೆ, ಆರೋಗ್ಯ ಸಲಹೆ ಹಾಗೂ ಅಗತ್ಯ ಔಷಧ ವಿತರಣೆ ಮಾಡಿದರು. ಜೊತೆಗೆ, ಪಾದಯಾತ್ರೆಯ ಸಂದರ್ಭದಲ್ಲಿ ಅನುಸರಿಸಬೇಕಾದ ಆರೋಗ್ಯ ಮುನ್ನೆಚ್ಚರಿಕೆಗಳು, ಸಾಕಷ್ಟು ನೀರು ಸೇವನೆ, ಪಾದಗಳ ಆರೈಕೆ ಹಾಗೂ ಆಯಾಸ ನಿವಾರಣೆ ಕುರಿತು ವಾರಕರಿಗಳಿಗೆ ಮಾರ್ಗದರ್ಶನ ನೀಡಲಾಯಿತು.

ಶಿಬಿರದಲ್ಲಿ ಭಾಗವಹಿಸಿದ ವಾರಕರಿಗಳು ಕೆ.ಎಲ್.ಇ. ಸಂಸ್ಥೆ ಹಾಗೂ ಕೆ.ಎಲ್.ಇ. ಆಯುರ್ವೇದ ಆಸ್ಪತ್ರೆಯ ಈ ಸೇವಾ ಕಾರ್ಯವನ್ನು ಶ್ಲಾಘಿಸಿ, ಉಚಿತ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮವನ್ನು ಆಡಳಿತಾಧಿಕಾರಿ ಮಹಾಂತೇಶ ಗುಡ್ನವರ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಆಯುರ್ವೇದ ಉಪನ್ಯಾಸಕರಾದ ಡಾ. ಬಿ ಬಿ ದೇಸಾಯಿ, ಡಾ. ಬಾಹುಬಲಿ ಮಹಾಜನ, ಡಾ.ರವಿ ಮಡಿವಾಳರ, ಮತ್ತು ಉಪನ್ಯಾಸಕರು, ವೈದ್ಯರು, ವಿದ್ಯಾರ್ಥಿಗಳು ಇತರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಈ ಶಿಬಿರದಲ್ಲಿ ೨೦೦ ವಾರಕರಿಗಳು ಭಾಗವಹಿಸಿ ಪ್ರಯೋಜನ ಪಡೆದರು.

Tags:

error: Content is protected !!