Belagavi

ಬೆಳಗಾವಿ ಬಿಎಸ್‌ಸಿ ಟೆಕ್ಸ್ಟೈಲ್ ಮಾಲ್‌ನಲ್ಲಿ ‘ಡಬಲ್ ಡಿಸ್ಕೌಂಟ್’ ಧಮಾಕಾ: ಜುಲೈ 26 ರಿಂದ ಶೇ. ’10+10′ ರಿಯಾಯಿತಿ ಆಫರ್!

Share

ಬೆಳಗಾವಿ ತಿಲಕವಾಡಿಯ ಪ್ರಸಿದ್ಧ ‘ಬಿಎಸ್ಸಿ ಟೆಕ್ಸ್ಟೈಲ್ ಮಾಲ್’ ಯಶಸ್ವಿ 4 ವರ್ಷಗಳನ್ನು ಪೂರೈಸಿ 5ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಶುಭ ಸಂದರ್ಭದಲ್ಲಿ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಆಷಾಢ, ಶ್ರಾವಣ ಹಾಗೂ ಮುಂಬರುವ ಹಬ್ಬಗಳ ಪ್ರಯುಕ್ತ ಜುಲೈ 26 ರಿಂದ ಶೇ.’10+10′ ರಷ್ಟು ‘ಡಬಲ್ ಡಿಸ್ಕೌಂಟ್’ ಆಫರ್ ಪ್ರಾರಂಭಿಸಲಾಗುತ್ತಿದೆ ಎಂದು ಮಾರ್ಕೆಟಿಂಗ್ ಮ್ಯಾನೇಜರ್ ಈರಣ್ಣ ಶಿವಶೆಟ್ಟಿ ಅವರು ತಿಳಿಸಿದರು.

ಇಂದು ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾರ್ಕೆಟಿಂಗ್ ಮ್ಯಾನೇಜರ್ ಈರಣ್ಣ ಶಿವಶೆಟ್ಟಿ ಅವರು ಮಾತನಾಡಿದರು. ಬೆಳಗಾವಿಯ ತಿಲಕವಾಡಿಯ ‘ಬಿಎಸ್ಸಿ ಟೆಕ್ಸ್ಟೈಲ್ ಮಾಲ್’ ಗ್ರಾಹಕರಿಗಾಗಿ ವರ್ಷಂಪ್ರತಿ ನೀಡುವ ಬಹುನಿರೀಕ್ಷಿತ ‘ಡಬಲ್ ಡಿಸ್ಕೌಂಟ್’ ಆಫರ್ ಅನ್ನು ಜುಲೈ 26 ರಿಂದ ಪ್ರಾರಂಭಿಸಲಾಗುತ್ತಿದೆ. ಬೆಳಗಾವಿಯಲ್ಲಿ ಸಂಸ್ಥೆಯು ಯಶಸ್ವಿ 4 ವರ್ಷಗಳನ್ನು ಪೂರೈಸಿ 5ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಶುಭ ಸಂದರ್ಭದಲ್ಲಿ, ಪ್ರಸಕ್ತ ಸಾಲಿನ ಆಷಾಢ ಹಾಗೂ ಶ್ರಾವಣ ಮಾಸದ ಹಬ್ಬಗಳ ಪ್ರಯುಕ್ತ ಈ ಆಫರ್ ಘೋಷಿಸಲಾಗಿದೆ. ವರ್ಷವಿಡೀ ನೀಡಲಾಗುವ ಶೇ. 10 ರಿಯಾಯಿತಿಯ ಜೊತೆಗೆ ಹೆಚ್ಚುವರಿಯಾಗಿ ಶೇ. 10 ಸೇರಿದಂತೆ ಒಟ್ಟು ’10+10′ ರಷ್ಟು ಡಬಲ್ ಡಿಸ್ಕೌಂಟ್ ಸಿಗಲಿದೆ. ಮುಂಬರುವ ಗಣೇಶ ಚತುರ್ಥಿ, ದಸರಾ ಹಾಗೂ ದೀಪಾವಳಿ ಹಬ್ಬಗಳ ಖರೀದಿಗೆ ಅನುಕೂಲವಾಗುವಂತೆ ಒಂದು ತಿಂಗಳ ಕಾಲ ಈ ಕೊಡುಗೆ ಲಭ್ಯವಿರಲಿದ್ದು, ಬೆಳಗಾವಿ ಜಿಲ್ಲೆ ಸೇರಿದಂತೆ ನೆರೆಯ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಗ್ರಾಹಕರು ಈ ರಿಯಾಯಿತಿ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿನಂತಿಸಿಕೊಂಡಿದ್ದಾರೆ.

ಇನ್ನು ಬೆಳಗಾವಿಯ ತಿಲಕವಾಡಿಯ ಬಿಎಸ್‌ಸಿ ಟೆಕ್ಸ್‌ಟೈಲ್ ಮಾಲ್‌ನಲ್ಲಿ ಶ್ರಾವಣ ಮಾಸ ಹಾಗೂ ಮುಂಬರುವ ಗಣೇಶ ಚತುರ್ಥಿ, ದಸರಾ ಮತ್ತು ದೀಪಾವಳಿ ಹಬ್ಬಗಳ ಅಂಗವಾಗಿ ಜುಲೈ 26 ರಿಂದ ‘ಡಬಲ್ ಡಿಸ್ಕೌಂಟ್’ ಆಫರ್ ಆರಂಭಿಸಲಾಗುತ್ತಿದೆ ಎಂದು ಸಂಸ್ಥೆಯ ಸ್ಟೋರ್ ಮ್ಯಾನೇಜರ್ ಅಮ್ಜದ್ ಜಮಾದಾರ್ ತಿಳಿಸಿದ್ದಾರೆ. ಬಿಎಸ್‌ಸಿ ಮಾಲ್ ಸಾಮಾನ್ಯ ಹಳೆಯ ಸ್ಟಾಕ್ ಕ್ಲಿಯರೆನ್ಸ್ ಮಾಡದೆ, ಗ್ರಾಹಕರಿಗಾಗಿ ಹೊಸದಾಗಿ ಬಂದಿರುವ ಹೊಚ್ಚ ಹೊಸ ವಸ್ತ್ರ ಸಂಗ್ರಹದ ಮೇಲೆ ನಿಯಮಿತ %10 ರಿಯಾಯಿತಿಯ ಜೊತೆಗೆ ಹೆಚ್ಚುವರಿಯಾಗಿ %10 ರಷ್ಟು ‘ಡಬಲ್ ಡಿಸ್ಕೌಂಟ್’ ನೀಡಲಾಗುತ್ತಿದೆ ಎಂದರು. ಬೆಳಗಾವಿ, ಮಹಾರಾಷ್ಟ್ರ ಹಾಗೂ ಗೋವಾದಿಂದ ಆಗಮಿಸುವ ಗ್ರಾಹಕರಿಗೆ ವಿಶೇಷ ಕೌಂಟರ್‌ಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದ್ದು, ಆಗಸ್ಟ್ ಕೊನೆಯ ವಾರದಲ್ಲಿ ಮಾಲ್ ಪ್ರೇಮೈಸಸ್‌ನಲ್ಲಿ ಬಿಎಸ್‌ಸಿಯ ಸ್ವಂತ ರೆಸ್ಟೋರೆಂಟ್ ಸಹ ಆರಂಭವಾಗಲಿದೆ ಎಂದು ತಿಳಿಸಿದರು.

Tags:

error: Content is protected !!