Belagavi

‘ರಾಮ್ ನಾಮ್ ಜಪ್ನಾ, ಪರಾಯಾ ಮಾಲ್ ಅಪ್ನಾ’

Share

‘ರಾಮ್ ನಾಮ್ ಜಪ್ನಾ, ಪರಾಯಾ ಮಾಲ್ ಅಪ್ನಾ’ ಎಂಬಂತೆರಾಮನ ಹೆಸರಲ್ಲಿ ಲೂಟಿ ಮಾಡಿದವರಿಗೆ ಖಂಡಿತ ಶಿಕ್ಷೆಯಾಗಲಿದೆ ಎಂದು ಎಐಸಿಸಿ ಕಾರ್ಯದರ್ಶಿ ಸಚಿನ್ ಸಾವಂತ್ ವಾಗ್ಧಾಳಿ ನಡೆಸಿದ್ದಾರೆ.

ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗೋಷ್ಟಿ ನಡೆಸ ಅವರು ಮಾತನಾಡಿದರು. ಆರ್‌ಎಸ್‌ಎಸ್ ಸಂಘಟನೆಯು ಪ್ರತಿ ಬಾರಿ ಹಗರಣಗಳು ಅಥವಾ ತಪ್ಪುಗಳು ನಡೆದಾಗ ಅದರಿಂದ ಜಾರಿಕೊಳ್ಳಲು ಯತ್ನಿಸುತ್ತದೆ ಎಂದು ಟೀಕಿಸಿದ ಅವರು, ರಾಮಮಂದಿರ ಟ್ರಸ್ಟ್ ಅನ್ನು ಆರ್‌ಟಿಐ ವ್ಯಾಪ್ತಿಯಿಂದ ಹೊರಗಿಟ್ಟು ಪಿಎಂ ಕೇರ್ಸ್ ಫಂಡ್‌ನಂತೆ ಯಾವುದೇ ಪಾರದರ್ಶಕತೆ ಇಲ್ಲದಂತೆ ಮಾಡಲಾಗಿದೆ ಮತ್ತು ಸಾರ್ವಜನಿಕರ ಹಣದ ಲೂಟಿಯನ್ನು ಮುಚ್ಚಿಹಾಕಲಾಗುತ್ತಿದೆ ಎಂದು ಆರೋಪಿಸಿದರು. ‘ನಮಕ್ ಹಲಾಲ್’ ಚಿತ್ರದ ‘ರಾಮ್ ನಾಮ್ ಜಪ್ನಾ, ಪರಾಯ ಮಾಲ್ ಅಪ್ನಾ’ ಎಂಬ ಗೀತೆಯನ್ನು ಉಲ್ಲೇಖಿಸಿ, ಇವರು ಶ್ರೀರಾಮನ ಹೆಸರಿನಲ್ಲಿ ರಾಜಕೀಯ ಮಾಡಿ ಲೂಟಿಯಲ್ಲಿ ತೊಡಗಿದ್ದಾರೆ ಹಾಗೂ ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಇವರು ಹಿಂದೂ ಧರ್ಮ ಮತ್ತು ಶ್ರೀರಾಮನಿಗೆ ಅಪಮಾನ ಮಾಡುತ್ತಿರುವ ನಕಲಿ ಹಿಂದೂಗಳಾಗಿದ್ದು, ಇವರ ಲೂಟಿ ಜನರ ಮುಂದೆ ಬಂದಿದೆ ಮತ್ತು ಜನತಾ ನ್ಯಾಯಾಲಯ ಹಾಗೂ ಶ್ರೀರಾಮನ ನ್ಯಾಯಾಲಯದಲ್ಲಿ ಇವರಿಗೆ ಖಂಡಿತವಾಗಿಯೂ ಶಿಕ್ಷೆಯಾಗಲಿದೆ ಎಂದು ಸಾವಂತ್ ಹೇಳಿದ್ದಾರೆ.

.ಶ್ರೀರಾಮ ಮಂದಿರ ನಿರ್ಮಾಣದ ಸಂಪೂರ್ಣ ಶ್ರೇಯಸ್ಸನ್ನು ತಾವೊಬ್ಬರೇ ಪಡೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ದೇಶದ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಿಂದಾಗಿ ರಾಮಮಂದಿರ ನಿರ್ಮಾಣ ಸಾಧ್ಯವಾಗಿದೆಯೇ ಹೊರತು ಇವರಿಂದಲ್ಲ ಎಂದರು. ಮಂದಿರದ ಭೂಮಿ ಪೂಜೆ, ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಠಾಪನೆಯನ್ನು ತಾವೇ ಮುಂಚೂಣಿಯಲ್ಲಿ ನಿಂತು ನೆರವೇರಿಸಿದ ಮೋದಿ, ಹಿಂದೂ ಧರ್ಮದಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ದೇಶದ ನಾಲ್ಕು ಶಂಕರಾಚಾರ್ಯರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸದೇ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು. ಶ್ರೀರಾಮನ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿರುವ ಭಾಜಪ ನಾಯಕರು ನಕಲಿ ಹಿಂದೂಗಳಾಗಿದ್ದು, ಇವರು ಹಿಂದೂ ಧರ್ಮದ ನಿಜವಾದ ರಕ್ಷಕರಲ್ಲ, ಬದಲಿಗೆ ಧರ್ಮದ ವಿರೋಧಿಗಳಾಗಿದ್ದಾರೆ ಎಂದು ಸಚಿನ್ ಸಾವಂತ್ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಉತ್ತರ ಶಾಸಕರಾದ ಆಸೀಫ್ ಸೇಠ್ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!