BELAGAVI

ಬೆಳಗಾವಿಯಲ್ಲಿ ವಿಶ್ವ ಪರಿಸರ ದಿನಾಚರಣೆ

Share

ಬೆಳಗಾವಿಯಲ್ಲಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಮಳೆಯ ಪ್ರಮಾಣ ಹಾಗೂ ಹಸಿರುಮನೆ ವಲಯದ ಕುಸಿತದ ಬಗ್ಗೆ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ತೀವ್ರ ಕಳಕಳಿ ವ್ಯಕ್ತಪಡಿಸಿದ್ದಾರೆ. ಮಹಾನಗರ ಪಾಲಿಕೆ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯ ವಿಶೇಷ ‘ಮಿಯಾವಾಕಿ’ ಉದ್ಯಾನವನ ನಿರ್ಮಾಣ ಕಾರ್ಯಕ್ರಮದಲ್ಲಿ ಯುವ ಪೀಳಿಗೆ ತಮ್ಮ ಭವಿಷ್ಯಕ್ಕಾಗಿ ಇಂದಿನಿಂದಲೇ ಪರಿಸರ ಸಂರಕ್ಷಣೆಗೆ ಕಡ್ಡಾಯವಾಗಿ ಮುಂದಾಗಬೇಕು ಎಂದು ಅವರು ಕರೆ ನೀಡಿದ್ದಾರೆ.

ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಿಸಿರುವಂತೆ ಬೆಳಗಾವಿ ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 35 ರ ‘ನಂದಿನಿ ಮಾರ್ಗ’ ಉದ್ಯಾನವನದಲ್ಲಿಂದು ವಿಶ್ವ ಪರಿಸರ ದಿನದ ಅಂಗವಾಗಿ ‘ಮಿಯಾವಾಕಿ’ ಮಾದರಿಯ ಅರಣ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಸಿ ನೆಟ್ಟು
ಮಾತನಾಡಿದ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರು ಮೊದಲಿನಂತೆ ಹಸಿರುಮನೆ ಕಡಿಮೆಯಾದ ಹಿನ್ನೆಲೆ ಬೆಳಗಾವಿಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಯುವಪೀಳಿಗೆ ತಮ್ಮ ಭವಿಷ್ಯಕ್ಕಾಗಿ ಉತ್ತಮ ವಾತಾವರಣವನ್ನು ನಿರ್ಮಿಸಿಕೊಳ್ಳಬೇಕು. ಈ ಹಿನ್ನೆಲೆ ತಮ್ಮ ಮನೆ ಖಾಲಿ ಜಾಗೆಗಳಲ್ಲಿ ಓರ್ವ ವಿದ್ಯಾರ್ಥಿ ಒಂದು ಸಸಿಗಳನ್ನು ನೆಟ್ಟರೂ ಪ್ರಕೃತಿ ಸಮತೋಲನಕ್ಕೆ ಪೂರಕವಾಗುತ್ತದೆ. ಉದ್ಯಾನಗಳನ್ನು ತಮ್ಮ ಸ್ವಂತ ಮನೆಗಳಂತೆ ಕಾಣಬೇಕು. ಮಹಾನಗರ ಪಾಲಿಕೆ ಇಂದು 1 ಸಾವಿರ ಸಸಿಗಳನ್ನು ನೆಡುತ್ತಿದ್ದು, ಜನರು ಜವಾಬ್ದಾರಿಯಿಂದ ಅದರ ಸಂರಕ್ಷಣೆಗೆ ಮುಂದಾಬೇಕೆಂದು ಕರೆ ನೀಡಿದರು.

ಸಸಿಗಳನ್ನು ನೆಟ್ಟು ಮರವಾಗಿ ಬೆಳೆಯುವ ವರೆಗೂ ಅವುಗಳನ್ನು ಸಂರಕ್ಷಿಸಬೇಕು. ಮರಗಳನ್ನು ಬೆಳೆಸುವುದರಿಂದ ಆಮ್ಲಜನಕ ಸಿಗುವುದರೊಂದಿಗೆ ಇನ್ನುಳಿದ ಜೀವಿಗಳಿಗೆ ಅದು ಆಸರೆಯಾಗುತ್ತದೆ. ಪ್ರಕೃತಿಯ ಸಮತೋಲನವನ್ನು ಕಾಯ್ದುಕೊಳ್ಳಲು ಇದು ಪೂರಕವಾಗಿದೆ ಎಂದು ವಿದ್ಯಾರ್ಥಿ ಚನ್ನವೀರಯ್ಯ ತಿಳಿಸಿದರು.

ಈ ಸಂದರ್ಭದಲ್ಲಿ ನಗರಸೇವಕ ಶ್ರೇಯಸ್ ನಾಕಾಡಿ, ರಾಠೋಡ್, ಮಹಾನಗರ ಪಾಲಿಕೆ ಎ ಡಬಲ್ ಇ ಹಣಮಂತ ಕಲಾದಗಿ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಮತ್ತು ಶಾಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.

Tags:

error: Content is protected !!